ಕುಡಚಿಯಲ್ಲಿ ಪಂಡರಪೂರ-ಯಶವಂತಪೂರ ರೈಲು ನಿಲುಗಡೆಗೆ ಆಗ್ರಹ

0
29

ಕುಡಚಿಯಲ್ಲಿ ಪಂಡರಪೂರ-ಯಶವಂತಪೂರ ರೈಲು ನಿಲುಗಡೆಗೆ ಆಗ್ರಹ
ಕನ್ನಡಮ್ಮ ಸುದ್ದಿ
ಕುಡಚಿ 24: ಕುಡಚಿ ರೈಲು ನಿಲ್ದಾಣದಲ್ಲಿ ಪಂಡರಪೂರ-ಯಶವಂತಪೂರ ಹೋಗುವ ರೈಲನ್ನು ಯಾವುದೇ ಮುನ್ಸೂಚನೆ ಇಲ್ಲದೆ ಕಳೆದ 3 ವಾರಗಳಿಂದ ನಿಲುಗಡೆಯನ್ನು ಸ್ಥಗಿತ ಮಾಡಿದ್ದು ಇದರಿಂದ ಕುಡಚಿ ಹಾಗೂ ಸುತ್ತಮುತ್ತಲಿನ ಸುಮಾರು 50 ಹಳ್ಳಿಯ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ
ಈ ರೈಲಿನಿಂದ ಎರಡು ಮಾರ್ಗಗಳಿಗೆ ಸರಕಾರಿ ಹಾಗೂ ಇತರೆ ಕೆಲಸಗಳಿಗಾಗಿ ಮಿರಜ, ಬೆಂಗಳೂರು, ಹುಬ್ಬಳ್ಳಿ ಹಾಗೂ ಇತರೆಡೆಗೆ ಪ್ರಯಾಣ ಮಾಡಲಿಕ್ಕೆ ತೊಂದರೆಯಾಗುತ್ತಿದ್ದು ಕೂಡಲೆ ಈ ರೈಲನ್ನು ಕುಡಚಿ ನಿಲ್ದಾಣದಲ್ಲಿ ಅಲ್ಪಸಮಯ ಕಾಲ ನಿಲುಗಡೆÉ ಮಾಡಬೇಕೆಂದು ಆಗ್ರಹಿಸಿ ದಿ. ಕುಡಚಿ ಮರ್ಚಂಟ್ಸ್ ಸೌಹಾರ್ದ ಸಹಕಾರಿ ನಿ., ಕುಡಚಿ ಮರ್ಚಂಟ್ಸ ಅಸೋಸಿಯೇಶನ್ ಕುಡಚಿ, ಸಮತಾ ಸೈನಿಕ ದಳ, ಕುಡಚಿ, ಹಾಗೂ ಸುತ್ತಮುತ್ತಲಿನ ಹಳ್ಳಿ ಗ್ರಾಮಸ್ಥರು ಸ್ಟೇಶನ್ ಮಾಸ್ಟರ್ ಮೂಲಕ ಡಿ.ಎಮ್.ಓ. ಹುಬ್ಬಳ್ಳಿಯವರಿಗೆ ಮನವಿ ಸಲ್ಲಿಸಿದರು.
ಈ ಸಮಯದಲ್ಲಿ ಅತೀಫ ಪಟಾಯಿತ, ಮುಸ್ತಾಕ ಬಾಗಶಿರಾಜ, ಶ್ರೀಶೈಲ ದರೂರೆ, ಸಾಕೀಬ ಪಾಳೇಗಾರ, ಅಮೀನ ಜಾತಗಾರ, ಸುಲ್ತಾನ ವಾಟೆ, ಸಫೀರ ಪಟಾಯಿತ, ಇಕಬಾಲ ಕೋಲೆ, ಎಮ್. ಎ. ರೋಹಿಲೆ, ತುಕಾರಾಮ ಮದಲೆ, ಜಾಕೀರ ಜಹಾಂಗೀರ, ಜಮೀರ ಪಟೇಲ, ಜಬೇರ ಪೀರಜಾದೆ, ಇಸ್ಮಾಯಿಲಮಗದುಮ ಎಮ್.ಬಿ. ಕಾಜಿ ಹಾಗೂ ಇತರರು ಉಪಸ್ಥಿತರಿದ್ದರು.
..

loading...