ಕುಡಿತದ ಚಾಲಕ ಸಮಾಜಕ್ಕೆ ಮಾರಕ- ಕಟ್ಟಿಮನಿ

0
19

ಬೆಳಗಾವಿ 16- ಕುಡಿತದ ಚಾಲಕ ಸಮಾಜಕ್ಕೆ ಮಾರಕ. ಇಂದು ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುವದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ ಎಂದು ಬೈಲಹೊಂಗಲದ ಮೋಟಾರ್ ವಾಹನ ನೀರೀಕ್ಷಕ ಅರುಣ ಕಟ್ಟೀಮನಿ ಹೇಳಿದರು.

ಸವದತ್ತಿ ಪ್ರವಾಸಿ ಮಂದಿರದ ಆವರಣದಲ್ಲಿ ಕರ್ನಾಟಕ ಸರಕಾರ, ಸಾರಿಗೆ ಇಲಾಖೆ ಇವರ ಆಶ್ರಯದಲ್ಲಿ ಆಯೋಜಿಸಿದ್ದ 24ನೇ ರಾಷ್ಟ್ತ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಮಾತನಾಡಿದ ಅವರು, ಜೀವ ಎಲ್ಲರಿಗೂ ಅತ್ಯಮೂಲ್ಯ. ಕ್ಷಣಿಕದ ತಪ್ಪಿನಿಂದ ಜೀವನ ಪರ್ಯಂತ ನರಳುವಂತಾಗಬಾರದು. ಆದ ಕಾರಣ ಎಲ್ಲ ಚಾಲಕರು ಚಾಲನೆ ಮಾಡುವ ಸಂದರ್ಭದಲ್ಲಿ ಮದ್ಯಪಾನ ಹಾಗೂ ಮೋಬೈಲ್ ಬಳಕೆ ಮಾಡುವದನ್ನು ತ್ಯಜಿಸಬೇಕಾಗಿದೆ ಎಂದರು.

ಚಾಲಕರಿಗೂ ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನವಿದೆ. ತಾವು ಕೀಳರಿಮೆಯನ್ನು ಬಿಡಬೇಕು. ಸಮಾಜಕ್ಕೆ ಅಗತ್ಯ ಸೇವೆಯನ್ನು ನೀಡಬೇಕು. ಪ್ರತಿನಿತ್ಯ ಜನಸಾಮಾನ್ಯರಿಗೆ ಅಗತ್ಯ ಸರಕು, ಸಾಮಾನುಗಳನ್ನು ಪೂರೈಸುವಲ್ಲಿ ತಮ್ಮ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ಸಿಬ್ಬಂದಿಯಿಂದ ಎಲ್ಲ ವಾಹನಗಳಿಗೆ 3ಎಂ ಮೆಟ್ರೌ ರೆಫ್ಲೆಕ್ಟಿವ್ ಸ್ಟಿಕರ್ ಅನ್ನು ಅಂಟಿಸಲಾಯಿತು.

ಜೈಂಟ್ಸ್ ಗ್ರೂಪ್ ಅಧ್ಯಕ್ಷ ಜಾವೇದ ಪಟಾದ, ಶೇಖರ ಪಾಟೀಲ, ನ್ಯಾಯವಾದಿ ಮಹ್ಮದ್ ಯಲಿಗಾರ, ಸಿದ್ದಣ್ಣಾ ಪಾಟೀಲ, ಆಟೋ ರಿಕ್ಷಾ ಮಾಲೀಕರ ಸಂಘದ ಅಧ್ಯಕ್ಷ ಅಯೂಬ್ ತಹಸೀಲ್ದಾರ, ಎಂ.ಎಚ್.ಬಾರಿಗಿಡದ ಉಪಸ್ಥಿತರಿದ್ದರು. ಶಿವಾನಂದ ಹಿರೇಮಠ ಸ್ವಾಗತಿಸಿದರು. ರಮೇಶ ಪಾಟೀಲ ನಿರೂಪಿಸಿ, ಇಮ್ತಿಯಾಜ್ ನೇಸರಗಿ ವಂದಿಸಿದರು.

loading...

LEAVE A REPLY

Please enter your comment!
Please enter your name here