ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ತುರ್ತು ಸಭೆ

0
27

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಹಿನ್ನಲೆಯಲ್ಲಿ ಸ್ಥಳೀಯ ಪುರಸಭೆಯ ನೂತನ ಸಭಾ ಭವನದಲ್ಲಿ ಅಧ್ಯಕ್ಷರ ಆದೇಶದ ಹಿನ್ನಲೆಯಲ್ಲಿ ಶುಕ್ರವಾರ ತುರ್ತು ಸಭೆ ನಡೆಯಿತು.
ಸಮೀಪದ ಜಿಗಳೂರು ಗ್ರಾಮದಲ್ಲಿ ರೋಣ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ 310 ಎಕರೆ ಜಮೀನಿನಲ್ಲಿ ನಿರ್ಮಾಣವಾಗುತ್ತಿರುವ ಕೆರೆಗೆ ಅಂದಾಜು ರೂ.69 ಕೋಟಿ ವೆಚ್ಚವಾಗುತ್ತಿದೆ. ಈ ಹಿನ್ನಲೆಯಲ್ಲಿ ಗಜೇಂದ್ರಗಡ ಪಟ್ಟಣದ ಶೇ.10 ರಷ್ಟು (3 ಕೋಟಿ 33 ಲಕ್ಷ) ಹಣವನ್ನು ಪುರಸಭೆ ಭರಿಸಬೇಕು ಎಂದು
ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಹೀಗಾಗಿ 2008 ರಿಂದ 2016- 2017ರ ವರೆಗೆ 13ನೇ ಹಣಕಾಸಿನ ಯೋಜನೆ ಹಾಗೂ ಎಸ್‌.ಎಫ್‌.ಸಿ ಯೋಜನೆ ಅಡಿಯಯಲ್ಲಿ 1 ಕೋಟಿ ಹಣ ಉಳಿತಾಯವಾಗಿದೆ ಎಂದು ಸಭೆಗೆ ಮುಖ್ಯಾಧಿಕಾರಿ ಹನಮಂತಮ್ಮ ನಾಯಕ ತಿಳಿಸಿದರು.
ಪುರಸಭೆ ಸದಸ್ಯ ಶಿವರಾಜ ಘೊರ್ಪಡೆ ಮಾತನಾಡಿ, ಪಟ್ಟಣದ ಕುಡಿಯುವ ನೀರಿನ ಸಮಸ್ಯೆಗೆ ಹಣವನ್ನು ನೀಡಲು ಸಮ್ಮತಿಯಿದೆ ಎಂದು ಸೂಚಿಸಿದಾಗ ಇನ್ನುಳಿದ ಪುರಸಭೆ ಸದಸ್ಯರು ಸಹ ಯೋಜನೆಗೆ ಪುರಸಭೆಯ ಉಳಿತಾಯ ಖಜಾನೆಯ 1 ಕೋಟಿ ಹಣವನ್ನು ನೀಡಲು ಒಪ್ಪಿಗೆ ಸೂಚಿಸಿದರು.
ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ಷಣ್ಮುಖಪ್ಪ ಚಿಲ್‌ಝರಿ, ಸ್ಥಾಯಿ ಕಮೀಟಿ ಚೇರಮನ್‌ ಪ್ರಭು ಚವಡಿ, ಸದಸ್ಯರಾದ ಅಶೋಕ ವನ್ನಾಲ, ರವಿ ಕಲಾಲ, ಶರಣಪ್ಪ ರೇವಡಿ, ಚಂದ್ರು ಚಳಗೇರಿ, ಮಂಜುನಾಥ ಬಡಿಗೇರ, ಕಳಕಪ್ಪ ಗುಳೇದ, ವಿಜಯಲಕ್ಷ್ಮಿ ಚೆಟ್ಟರ, ಶಾರವ್ವ ತಳವಾರ, ಅಧಿಕಾರಿಗಳಾದ ಸಿ.ವಿ.ಕುಲಕರ್ಣಿ, ಜಿ.ಎನ್‌.ಕಾಳೆ, ಪಿ.ಎನ್‌. ದೊಡ್ಡಮನಿ ಸಏರಿ ಇತರರು ಇದ್ದರು.

loading...