ಕುಮಟಾ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0
71

ಕನ್ನಡಮ್ಮ ಸುದ್ದಿ-ಕುಮಟಾ : ಜಿಲ್ಲಿಯ ಸಾಂಸ್ಕೃತಿಕ ಪ್ರತಿಬಿಂಬವಾದ “ಕುಮಟಾ ಉತ್ಸವ” ಮಣಕಿ ಮೈದಾನದಲ್ಲಿ ಜ 1 ರಿಂದ 5 ರವರೆಗೆ ನಡೆಯಲಿದ್ದು, ಪ್ರತಿವರ್ಷದಂತೆ ಈ ಬಾರಿಯೂ ಅದ್ದೂರಿಯಾಗಿ ಹಾಗೂ ಜನಾಕರ್ಷಣೆಯಾಗಿ ಆಯೋಜಿಸಲಾಗಿದೆ. ಅಲ್ಲದೇ ಸಚಿವ ಆರ್‌ ವಿ ದೇಶಪಾಂಡೆಯವರು ಉದ್ಘಾಟಿಸಲಿದ್ದು, ಸಚಿವೆ ಉಮಾಶ್ರೀ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ರವಿಕುಮಾರ ಮೋಹನ ಶೆಟ್ಟಿ ತಿಳಿಸಿದರು.
ಸಮಿತಿಯ ಗಣಪತಿ ಶೆಟ್ಟಿ ಅವರು ಮಾತನಾಡಿ, ಜ 1ರಂದು ಚಿತ್ರದುರ್ಗದ ಅಂಜನ ನೃತ್ಯತಂಡದಿಂದ ಭರತ ನಾಟ್ಯ, ಸಭಾ ಕಾರ್ಯಕ್ರಮ, ಕೊಚಿನ್‌ನ ಓಮ್‌ ಡ್ಯಾನ್ಸ ತಂಡದಿಂದ ಬೆಂಕಿ ನೃತ್ಯ, ಅಕ್ರೋಬೆಟಿಕ್ಸ, ಕಲ್ಹರಿ, ಸಮತೋಲನ ಕಲಾ ಪ್ರದರ್ಶನ ನಡೆಯಲಿದೆ. 2 ರಂದು ಪ್ರಾಣೇಶ ತಂಡದವರಿಂದ ಹಾಸ್ಯ ಸಂಜೆ, ಭೂಕೈಲಾಸ ಯಕ್ಷಗಾನ, ಲೈವ್‌ ಇನ್‌ ಕಾನ್ಸಟ್‌ ಬೆಂಗಳುರು ತಂಡದಿಂದ ಸಂಗೀತ ವೃಷ್ಟಿ ನಡೆಯಲಿದ್ದು ಸಂಗೀತಾ ರವೀಂದ್ರನ್‌, ದಾಮೋದರ ನಾಯ್ಕ, ನಿಖಿಲ್‌ ಪಾರ್ಥಸಾರಥಿ, ನಟಿ ಭಾವನಾ ರಿಂದ ನೃತ್ಯ ಪ್ರದರ್ಶನ. 3 ರಂದು ಲೋಕೇಶ ತಿಂಗಳರಾಯರ ಚಕ್ರೇಶ್ವರಿ ಕಲಾತಂಡದಿಂದ ಹಾಸ್ಯ, ಉಡುಪಿ ಭಾರ್ಗವಿ ನೃತ್ಯ ತಂಡದಿಂದ ವಿಶೇಷ ನೃತ್ಯ, ಪ್ರತೀಕ್ಷಾ ಭಟ್ಟ ಬೆಂಗಳೂರು ಇವರಿಂದ ರಷ್ಯನ್‌ ರಿಂಗ್‌ ಡ್ಯಾನ್ಸ, ಲೇಸರ್‌ ಶೋ, ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಾ, ಬೇಬಿ ಆದ್ಯಾ ತಂಡದಿಂದ ರಸಮಂಜರಿ, ರಂಗಿತರಂಗ ಚಲನಚಿತ್ರ ನಟ ನಿರೂಪ್‌ ಭಂಡಾರಿ ಹಾಗೂ ನಟಿ ಆವಂತಿಕಾ ಶೆಟ್ಟಿ ಉಪಸ್ಥಿತರಿರಲಿದ್ದಾರೆ. 4 ರಂದು ಡ್ಯಾನ್ಸ ಮಸ್ತಿ ಅಂತರರಾಜ್ಯ ಮಟ್ಟದ ನೃತ್ಯಸ್ಪರ್ಧೆ, ನಟ ವಿಜಯ್‌ ರಾಘವೇಂದ್ರ, ತುಳು ನಟ ನಾಗರಾಜ ಹಂಬರ್‌, ಶ್ರೇಯಾ ಅಂಚನ್‌ರಿಂದ ನೃತ್ಯ, ರೋಬೋ ಗಣೇಶರಿಂದ ವಿಶೇಷ ನೃತ್ಯ ನಡೆಯಲಿದ್ದು ಮುಗುಳುನಗೆ ಚಲನಚಿತ್ರದ ನಟಿ ನಿಖಿತಾ ಉಪಸ್ಥಿತರಿರಲಿದ್ದಾರೆ. 5 ರಂದು ಸ್ಥಳೀಯ ಕಲಾವಿದರಿಂದ ಕಾರ್ಯಕ್ರಮಗಳ ನಂತರ ಸಮಾರೋಪ ಸಮಾರಂಭ ನಡೆಯಲಿದೆ. ನಂತರ ತೆಲಿಕೆದ ತೆನಾಲಿ ಸುನಿಲ್‌ ನೆಲ್ಲಿಗುಡ್ಡೆ ನೇತೃತ್ವದ ಬಲೆತೆಲಿಪಾಲೆ ಹಾಗೂ ಕಲರ್‌ ಸೂಪರ್‌ ಮಜಾಭಾರತದ ತಂಡದವರಿಂದ ಕಾಮೆಡಿ ಟಾನಿಕ್‌ ಹಾಸ್ಯ ಕಾರ್ಯಕ್ರಮ, ಸರಿಗಮಪ ತಂಡದವರಿಂದ ಸಂಗೀತರಸಮಂಜರಿ ನಡೆಯಲಿದ್ದು ಆ್ಯಂಕರ್‌ ಅನುಶ್ರೀ ಕಾರ್ಯಕ್ರಮ ನಿರೂಪಿಸಲಿದ್ದಾರೆ ಎಂದು ಗಣಪತಿ ಶೆಟ್ಟಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಉತ್ಸವ ಸಮಿತಿಯ ಸಚಿನ್‌ ನಾಯ್ಕ, ರವಿ ಗೌಡ ಹಟ್ಟಿಕೇರಿ, ಚೇತನ ಶೇಟ, ಮೈಕೆಲ್‌ ರೊಡ್ರಿಗಿಸ್‌, ಗಣೇಶ ಶೆಟ್ಟಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

loading...