ಬೆಳಗಾವಿ
ಕುಮಾರಸ್ವಾಮಿ ಕುಟುಂಬ ಕಣ್ಣೀರು ಹಾಕುವುದು ಹೊಸತೇನಲ್ಲ. ಅವರು ಒಳ್ಳೆಯದಕ್ಕೂ ಹಾಕ್ತಾರೆ. ಕೆಟ್ಟದಕ್ಕೂ ಹಾಕ್ತಾರೆ ಅದಕ್ಕೆ ಬೆಲೆ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹರಿಹಾಯ್ದರು.
ಶನಿವಾರ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಮಾಜಿ ಸಿಎಂ ಕುಮಾರಸ್ವಾಮಿ ಪಾಲಿಟಿಕ್ಸ್ ನಿಂದಲೇ ಹೊರಟ ಹೊದರಾ. ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ರಾಜಕೀಯದ ಅನೂಕುಲಕ್ಕೆ ತಕ್ಕಂತೆ ಹೇಳಿಕೆ ಕೊಡುತ್ತಿರುತ್ತಾರೆ. ಅವರ ಮಾತಿನಲ್ಲಿ ಸತ್ಯ ಇರಲ್ಲ.
ಜೆಡಿಎಸ್ ರಾಜ್ಯದಲ್ಲಿ ಗೆದಿದ್ದು ಕೇವಲ 37. ಸ್ಥಾನ ಕಾಂಗ್ರೆಸ್ ಗೆದಿದ್ದು 80 ಸ್ಥಾನ. ಸಿಎಂ ಮಾಡಿದ್ದು ಯಾರಿಗೆ ಎಂದು ಮಾಧ್ಯಮದವರಿಗೆ ಪ್ರಶ್ನಿಸಿದ ಅವರು, ಕಣ್ಣೀರು ಹಾಕುವುದು ದೇವೇಗೌಡರ ಸಂಸ್ಕೃತಿ. ಅದೇನು ಹೊಸದೇನಲ್ಲ.ಒಳ್ಳೆಯದಕ್ಕೂ, ಕೆಟ್ಟದಕ್ಕೂ ಎರಡಕ್ಕೂ ಹಾಕ್ತಾರೆ. ಇನ್ಯಾರನ್ನೋ ಓಲೈಸಲು ಕಣ್ಣೀರ ಹಾಕುತ್ತಾರೆ. ನಂಬಿಸಲು ಹಾಕುತ್ತಾರೆ. ಆ ಕಣ್ಣೀರಿಗೆ ಬೆಲೆ ಇಲ್ಲ ಎಂದು ಹರಿಹಾಯ್ದರು.
ಕುಮಾರಸ್ವಾಮಿ ಸಮ್ಮಿಶ್ರ ಸರಕಾರದ ಅವಧಿಯಲ್ಲಿ 12 ತಿಂಗಳು ಅಧಿಕಾರ ನಡೆಸಿದ್ದಾರೆ. ಆದರೆ ಇವರು ಆಡಳಿತ ನಡೆಸಿದ್ದು ವೆಸ್ಡೆಂಡ್ ಹೊಟೇಲ್ ನಿಂದ ಯಾವ ಶಾಸಕ, ಸಚಿವರ ಕೈಗೂ ಸಿಗಲಿಲ್ಲ ಆಸಾಮಿ ಎಂದ ಅವರು ಸಾವಿರಾರು ಕೋಟಿ ಅನುದಾನ ಅವರು ಮನೆಯಿಂದ ಕೊಟ್ಡರಾ ಎಂದ ಅವರು, ನಾನು ಸಿಎಂ ಆದಾಗ ಅನುದಾನ ಕೊಟ್ಟಿದ್ದೆ ಅದು ಜನರ ತೆರಿಗೆ ಹಣ ಎಂದರು.
ಸಮ್ಮಿಶ್ರ ಪಥನವಾಗಲೆಂದು ನಾನು ಅಮೇರಿಕಾಗೆ ಹೋದೆ ಎಂದು ಕುಮಾರಸ್ವಾಮಿಯೇ ಹೇಳಿಕೆ ನೀಡಿದ್ದಾರೆ. ಅದನ್ಯಾರು ಯಾಕೆ ಪ್ರಶ್ನೆ ಮಾಡುವುದಿಲ್ಲ ಎಂದು ಪ್ರಶ್ನಿಸಿದರು.