ಕುರುಬರ ಸಮಾಜಕ್ಕೆ `ಎಸ್‌ಟಿ’ ಮೀಸಲಾತಿಯಲ್ಲಿ ರಾಜಕೀಯ ಬೇಡ

0
19

ಕುರುಬರ ಸಮಾಜಕ್ಕೆ `ಎಸ್‌ಟಿ’ ಮೀಸಲಾತಿಯಲ್ಲಿ ರಾಜಕೀಯ ಬೇಡ
ಕೇಂದ್ರ ಸರಕಾರಕ್ಕೆ ಗಡುವು ನೀಡಿ: ದಳವಾಯಿ

ಬೆಳಗಾವಿ:
ಕುರುಬರು ಸಮಾಜಕ್ಕೆ ಎಸ್/ಟಿ ಮೀಸಲಾತಿ ನೀಡಬೇಕೆಂದು ಬಾಗಲಕೋಟೆನಲ್ಲಿ ೨೯ ರಂದು ಸಚಿವ ಈಶ್ವರಪ್ಪ ಬೃಹತ್ ರ‍್ಯಾಲಿ ಮಾಡುತ್ತಿದ್ದಾರೆ, ರಾಜ್ಯ ಸರಕಾರ ಬೇಡಿಕೆ ಈಡೇರಿಸಲು ಕೇಂದ್ರ ಸರಕಾರಕ್ಕೆ ಗಡುವು ನೀಡಬೇಕೆಂದು ಸಂಗೋಳ್ಳಿ ಸ್ಮಾರಕ ಪ್ರಾಧಿಕಾರ ರಚನೆ ಹೋರಾಟ ಸಮಿತಿ ಅದ್ಯಕ್ಷ ಅರವಿಂದ ದಳವಾಯಿ ಕರೆ ಕೊಟ್ಟರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮೀಸಲಾತಿ ಸಂಬAಧಿಸಿದAತೆ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಗಡುವು ನೀಡಬೇಕಿದೆ. ಸಮುದಾಯದವರ ಸಮಾದಾನಗೋಸ್ಕರ ಈ ರ‍್ಯಾಲಿ ಮಾಡಬೇಡಿ.
ಕೆಲ ದಿನಗಳಿಂದ ರಾಜ್ಯದಲ್ಲಿ ಬೇರೆ ಬೇರೆ ಸಮುದಾಯಗಳು ಬೀದಿ ಚಳುವಳಿ ಮಾಡುತ್ತಿದ್ದಾರೆ. ವಾಲ್ಮೀಕಿ, ಲಿಂಗಾಯತ ಸೇರಿದಂತೆ ಅನೇಕ ಸಮುದಾಯಗಳು ಮೀಸಲಾತಿಗಾಗಿ ಆಗ್ರಹಿಸುತ್ತೇವೆ.
ಸಮುದಾಯ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ಮಾಡಲಾಗುತ್ತಿದೆ. ಕೆ.ಎಸ್.ಈಶ್ವರಪ್ಪನವರು ಎಸ್‌ಟಿ ಮೀಸಲಾತಿ ಕೊಡಬೇಕೆಂದು ಎರಡು ಮೂರು ತಿಂಗಳಿAದ ಈಚೆಗೆ ಕುರುಬ ಸಮುದಾಯದಿಂದ ಒತ್ತಡವಿದೆ. ಸಂದಿಗ್ಧ ಸ್ಥಿತಿಯಲ್ಲಿ ಸರಕಾರ ಸಕರ‍್ಮಕವಾಗಿ ಸ್ಪಂದಿಸಿ, ಸಂಪುಟಲ್ಲಿ ಅಂಗೀಕರಿಸಬೇಕೆAದು ಒತ್ತಾಯಿಸಿದರು.
ದೆಹಲಿಗೆ ಹೋದರೂ ಆರ್‌ಎಸ್‌ಎಸ್ ಪ್ರಮುಖ ಸಂತೋಷ ಹಾಗೂ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡುತ್ತಾರೆ. ಎಂಟಿಬಿ ನಾಗರಾಜ್, ಎಚ್.ಎಂ.ರೇವಣ್ಣ ಸೇರಿದಂತೆ ಅನೇಕರು ವಿಧಾನಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಧ್ವನಿ ಎತ್ತಿಲ್ಲ. ಸದ್ಯ ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರಕಾರ ಇದೆ. ಕುರುಬ ಸಮುದಾಯಕ್ಕೆ ಒಳ್ಳೆಯ ಸಮಯವನ್ನು ಸಚಿವ ಈಶರಪ್ಪನವರು ಸದುಪಯೋಗ ಮಾಡಿಕೊಳ್ಳಬೇಕೆಂದರು.
ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರಣೀತ ಚಳುವಳಿ ಹೋರಾಟದ ನಾಟಕ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್ ಬಿ.ಎಲ್.ಸಂತೋಷ ಅವರನ್ನು ಮೆಚ್ಚಿಸಲು ಹೋರಾಟ ನಾಟಕ ಆರಂಭಿಸಿದ್ದಾರೆ ಎಂದರು.
ನಾವು ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಸಭೆ-ಸಮಿತಿಗಳಲ್ಲಿ ಎಚ್.ಎಂ.ರೇವಣ್ಣ ವಿಧಾನ ಪರಿಷತ್, ಎಂಟಿಬಿ ಸಚಿವರಾಗಬೇಕಿದೆ. ಅದಕ್ಕಾಗಿ ಉತ್ತರ ಕರ್ನಾಟಕ ಕುರುಬರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಕುರುಬ ಸಮುದಾಯದ ಕಳಕಳಿ ಇದ್ದರೆ ಬಾಗಲಕೋಟೆಯಲ್ಲಿ ಸರಕಾರಗಳಿಗೆ ಗಡುವು ನೀಡಬೇಕು.
ಇಲ್ಲದಿದ್ದರೆ ಆರ್.ಶಂಕರ್, ಈಶ್ವರಪ್ಪ, ಎಂಟಿಬಿ ರಾಜೀನಾಮೆ ಕೊಡುವುದಾಗಿ ಘೋಷಣೆ ಮಾಡಿ, ನಾವೆಲ್ಲರೂ ನಿಮ್ಮ ಬೆಂಬಲ ನೀಡುತ್ತೇವೆ. ಈಶ್ವರಪ್ಪ ನೇತೃತ್ವದಲ್ಲಿ ಹೋರಾಟ ಮಾಡುತ್ತೇವೆ.
ಸಿದ್ದರಾಮಯ್ಯನವರ ಸಲಹೆ ಪಡೆದಿಲ್ಲ. ಚರ್ಚಿಸಿಲ್ಲ. ಅವರ ಬೆಂಬಲ ಇದೆ ಎಂದು ಹೆಸರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಯಲ್ಲಪ್ಪ ಹೆಗಡೆ ಮಾತನಾಡಿ, ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವ ಕೆಲಸಗಳು ನಡೆಯುತ್ತಿವೆ. ದ್ವೇಷದ ರಾಜಕರಾಣ ಹೆಚ್ಚಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗುರಪ್ಪ ಹಿಟ್ಟಣಗಿ, ಯಲ್ಲಪ್ಪ ಹೆಗಡೆ, ಮಾಳಪ್ಪ ಬಿದರಿ, ಸುರೇಶ ಮಗದುಮ್ಮ, ದೊಡ್ಡಸಿದ್ದಪ್ಪ ಖಾನಟ್ಟಿ, ಬಸವರಾಜ ಕುಕಡೊಳ್ಳಿ, ನಿಂಗಪ್ಪ ದೊಡ್ಡಮನಿ ಹಾಗೂ ಇತರರು ಇದ್ದರು.
೦೨

loading...