ಕುಷ್ಟಗಿ, ಯಲಬುರ್ಗಾ, ಕೊಪ್ಪಳ ತಾಲೂಕುಗಳಲ್ಲಿ ಉಲ್ಬಣಗೊಂಡ ಕುಡಿಯುವ ನೀರಿನ ಸಮಸ್ಯೆ..!

0
59

 

ಮೌಲಾಹುಸೇನ ಬುಲ್ಡಿಯಾರ್
ಕನ್ನಡಮ್ಮ ಸುದ್ದಿ-ಕೊಪ್ಪಳ: ಸತತ ಬರಗಾಲ, ಮಳೆಯ ಕೊರತೆಯಿಂದ ಬೆಳೆ ನಾಶದ ಜೊತೆ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಸರಿಯಾದ ನಿರ್ವಹಣೆ, ಮುಂಜಾಗೃತ ಕ್ರಮಗಳು ಇಲ್ಲದ ಕಾರಣ ಹಾಗೂ ಅಧಿಕಾರಿಗಳ, ಜನಪ್ರತಿನಿಧಿಗಳ ಬೇಜಾಬ್ದಾರಿ, ನಿರುತ್ಸಾಹಗಳಿಂದ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯು ಹೆಚ್ಚಾಗಲು ಕಾರಣವಾಗಿದೆ. ಬೇಸಿಗೆಯ ಬಿಸಿಲು ಪ್ರಖರತೆ ಹೆಚ್ಚಾದಂತೆ, ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ. ಈ ಮಧ್ಯೆ ಲೋಕಸಭಾ ಚುನಾವಣೆ ಕಾವು. ಇದನ್ನೆÃ ನೆಪ ಮಾಡಿಕೊಂಡ ಕೆಲವು ಅಧಿಕಾರಿಗಳು ನೀರು ಪÇರೈಕೆ ಮಾಡಿದ ಟ್ಯಾಂಕರ್ ಮಾಲೀಕರಿಗೆ ಬಿಲ್ ಪಾವತಿಸದೇ ಇರುವುದರಿಂದ ನೀರಿನ ಸಮಸ್ಯೆ ಮತ್ತಷ್ಟು ಬಿಗಾಡಿಯಿಸಿದ್ದು, ವಿದ್ಯುತ್ ಬಿಲ್ ಬಾಕಿ, ನಿರ್ವಹಣೆ ಕೊರತೆ, ನೀರು ಪÇರೈಸಲು ಆಗುತ್ತಿರುವ ತಾಂತ್ರಿಕ ತೊಂದರೆ, ಇತ್ಯಾದಿ ಕಾರಣಗಳಿಂದ ಇಂದು ಎಲ್ಲಡೆ ಕುಡಿಯುವ ನೀರಿಗೆ ಅಭಾವ ಕಂಡುಬರುವಂತಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಅದರಲ್ಲಿಯೂ ಯಲಬುರ್ಗಾ, ಕುಷ್ಟಗಿ, ಮತ್ತು ಕೊಪ್ಪಳದ ಅರ್ಧಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರತೆ ಇದೆ. ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಕುಣಿಕೇರಿ ತಾಂಡಾ, ಮಂಗಳಾಪÅರ, ಭಾಗ್ಯನಗರ, ಲೇಬಗೇರಿ, ಹನುಮನಹಳ್ಳಿ ಹಾಗೂ ದೇವಲಾಪÅ, ಯಲಬುರ್ಗಾ ತಾಲ್ಲೂಕಿನ ಚಿಕ್ಕೆÃನಕೊಪ್ಪ, ಯರೇಹಂಚಿನಾಳ, ತಳಕಲ್ಲ ಭಾಗ, ಹಿರೇ ವಂಕಲಕುಂಟಾದ ಮಸಾರಿ ಭಾಗ ಹಾಗೂ ಕುಷ್ಟಗಿ ತಾಲ್ಲೂಕಿನ ಹನಮಸಾಗರ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿರುವುದು ಕಂಡುಬರುತ್ತಿದೆ. ಕನಗಿರಿ, ಕುಕನೂರ, ಯಲಬುರ್ಗಾ, ಕುಷ್ಟಗಿ, ಕೊಪ್ಪಳ, ಗಂಗಾವತಿ ತಾಲ್ಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದರೂ ನೀರಿನ ಸಮಸ್ಯೆ ಮಾತ್ರ ಕೊನೆಗೊಂಡಿಲ್ಲ. ಗಂಗಾವತಿ ಮತ್ತು ಕಾರಟಗಿ ತಾಲ್ಲೂಕುಗಳಲ್ಲಿ ನೀರಾವರಿ ಪ್ರದೇಶವಿರುವುದರಿಂದ ಕೊಳವೆಬಾವಿ ಮತ್ತು ನದಿಯಿಂದ ನೀರು ಪಡೆದುಕೊಳ್ಳುವ ವ್ಯವಸ್ಥೆ ಇದ್ದು, ಅಂತಹ ತೊಂದರೆ ಇರದಿದ್ದರೂ ಕೆಲವೆಡೆ ನೀರು ಇದ್ದರೂ ಸವಳು ಇರುವುದರಿಂದ ಕುಡಿಯಲು ಬರುವದಿಲ್ಲ.

ಶೇ.೬೦% ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತ: ಪ್ರಸ್ತುತ ಜಿಲ್ಲೆಯಲ್ಲಿ ೫೮೨ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ವಿವಿಧ ಯೋಜನೆಗಳ ಅನುದಾನದಡಿಯಲ್ಲಿ ಸ್ಥಾಪಿಸಲಾಗಿದೆ, ಆದರೆ ಇವುಗಳಲ್ಲಿ ಶೇ ೬೦ರಷ್ಟು ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿವೆ. ನೀರು ಪÇರೈಸಲು ಆಗುತ್ತಿರುವ ತೊಂದರೆ, ತಾಂತ್ರಿಕ ಸಮಸ್ಯೆ, ವಿದ್ಯುತ್ ಬಿಲ್ ಬಾಕಿ, ನಿರ್ವಹಣೆ ಕೊರತೆ, ಸ್ಥಳೀಯ ಗ್ರಾಮ ಪಂಚಾಯಿತಿಗಳು ಘಟಕಗಳ ವ್ಯವಸ್ಥಿತ ಕಾರ್ಯನಿರ್ವಹಣೆಗೆ ಬೇಜಾಬ್ದಾರಿತನದ ಕಾರಣಗಳಿಗೆ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ.

loading...