ಕು. ಮಧು ಪತ್ತಾರ ಸಾವಿನ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನೆಡಸುವಂತೆ ಮನವಿ

0
21

ರಾಮದುರ್ಗ: ಇತ್ತಿಚಗೆ ನಿಧನ ಹೊಂದಿದ ರಾಯಚೂರಿನ ಇಂಜಿನಿಯರಿಂಗ್ ವಿಧ್ಯಾರ್ಥಿ ಕು. ಮಧು ಪತ್ತಾರ ಸಾವಿನ ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನೆಡಸಬೇಕು ತಪ್ಪಿತಸ್ಥರಿಗೆ ಶಿಕ್ಷೆ ನೀಡಿಸಬೇಕು ಎಂದು ವಿಶ್ವಕರ್ಮ ಸಮಾಜದ ಮುಖಂಡ ರಮೇಶ ಕಮ್ಮಾರ ಆಗ್ರಹಿಸಿದರು.

ಸ್ಥಳೀಯ ವೆಂಕಟೇಶ್ವರ ದೇವಸ್ಥಾನದಿಂದ ತಾಲೂಕಾ ವಿಶ್ವಕರ್ಮ ಸಮಾಜ ಹಾಗೂ ಜಯಕರ್ನಾಟಕ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಕುಮಾರಿ ಮಧು ಪತ್ತಾರ ಸಾವು ಖಂಡಿಸಿ ಹೊರಟ ಪ್ರತಿಭಟನಾ ಮೇರವಣಿಗೆಯು ತಹಶೀಲ್ದಾರ ಕಛೇರಿಗೆ ಆಗಮಿಸಿ ಮನವಿ ಸಲ್ಲಿಸಿ ಮಾತನಾಡಿದ ಅವರು, ವಿಧ್ಯಾರ್ಥಿನಿಯ ಸಾವಿನ ಪ್ರಕರಣವನ್ನು ಸಿಐಡಿ ತನಿಕೆಯಿಂದ ಅಪರಾದಿಗೆ ಶಿಕ್ಷೆ ನೀಡಬೇಕೆಂದು ಹೇಳಿದರು.
ವಿಶ್ವಕರ್ಮ ನಿಘಮದ ನಾಮನಿರ್ದೇಶಿತ ಸದಸ್ಯ ಕಲ್ಲಪ್ಪ ಬಡಿಗೇರ ಮಾತನಾಡಿ ಮಹಿಳೇಯರ ಮೇಲೆ ಪ್ರತಿನಿತ್ಯ ಧೌರ್ಜ್ಯನ್ಯ ಘಟನೆಗಳು ನೆಡಯುತ್ತಿವೆ. ಇಂಜನಿಯರಿಂಗ್ ವಿದ್ಯಾರ್ಥಿ ಮಧು ಪತ್ತಾರ ನಿಗೂಡ ಸಾವಿನಿಂದ ಸಮಾಜಕ್ಕೆ ತುಂಬಾ ನೋವಾಗಿದೆ, ಆದ್ದರಿಂದ ತಪ್ಪು ಮಾಡಿದ ಅಪರಾಧಿಗೆ ಶಿಕ್ಷೆ ನೀಡಿ ನ್ಯಾಯದೊರಕಿಸಿಕೊಡಬೇಕು. ಇಲ್ಲವಾದರೆ ರಾಜ್ಯವ್ಯಾಪಿ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.

ವಿಶ್ವಕರ್ಮ ಸಮಾಜದ ತಾಲೂಕಾ ಅಧ್ಯಕ್ಷ ಕೃಷ್ಣಾ ಬಡಿಗೇರ, ಮೌನೇಶ್ವರ ಬ್ಯಾಂಕಿನ ಅಧ್ಯಕ್ಷ ವಿಠ್ಠಲ ಕಂಬಾರ, ಮುಖಂಡರಾದ ಪಾಂಡುರಂಗ ಪತ್ತಾರ, ಉಮೇಶ ಪತ್ತಾರ, ಗಜಾನನ ಬಡಿಗೇರ, ನಾರಾಯಣ ಬಡಿಗೇರ, ಶಂಕರ ಬಡಿಗೇರ,ಬಿ.ಬಿ.ಬಡಿಗೇರ,ನಾಗಪ್ಪ ಸಾಲಿ, ಮಹಿಳಾಧ್ಯಕ್ಷೆ ಗೀತಾ ಕಿತ್ತೂರ, ರೇಖಾ ಪತ್ತಾರ, ಜ್ಯೊÃತಿ ಚೊಳಚಗುಡ, ಹಾಗೂ ಜಯಕರ್ನಾಟಕ ಸಂಘದ ಪಧಾಧಿಕಾರಗಳಾದ ಸುರೇಶ ಗಿಂಜಾಳಿ, ಸಾಗರ ಮುನವಳ್ಳಿ, ಆನಂದ ಜಾಧವ, ಸೇರಿದಂದೆ ವಿಶ್ವಕರ್ಮ ಸಮಾಜದ ಮುಖಂಡರು ಮತ್ತು ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

loading...