ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಪ್ಯಾಟಿ ಆಯ್ಕೆ

0
42

ಕನ್ನಡಮ್ಮ ಸುದ್ದಿ-ಧಾರವಾಡ : ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿಯ ಸದಸ್ಯರಾಗಿ ಧಾರವಾಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಸಿದ್ದಪ್ಪ ವೆಂಕಪ್ಪ ಪ್ಯಾಟಿ ಆಯ್ಕೆಯಾಗಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಸಿದ್ದಪ್ಪ ಪ್ಯಾಟಿ ಅವರು ಮೂರು ಸದಸ್ಯರ ಬೆಂಬಲ ಪಡೆದು ಆಯ್ಕೆಯಾದರೆ, ಇನ್ನೋರ್ವ ಅಭ್ಯರ್ಥಿಯಾಗಿದ್ದ ಕಲಘಟಗಿ ಎಪಿಎಂಸಿ ಅಧ್ಯಕ್ಷ ಮುತ್ತಪ್ಪ ಅಂಗಡಿ ಅವರು ಎರಡು ಮತಗಳನ್ನು ಪಡೆದರು. ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕ ಎನ್.ಬಿ.ಅಜ್ಜಪ್ಪನವರ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

loading...