ಕೃಷಿ ಸಾಲ ನೀಡಲು 1.22 ಕೋಟಿ ರೂಪಾಯಿ ಮಂಜೂರು

0
60

ಧಾರವಾಡ : ಕೆಸಿಸಿ ಬ್ಯಾಂಕಿನಿಂದ ಸಂಘದ ಮೂಲಕ ರೈತರು ಪಡೆದ ಕೃಷಿ ಸಾಲದ ಮೇಲಿನ 34 ಲಕ್ಷ ರೂಪಾಯಿ ಬಡ್ಡಿಯನ್ನು ಮನ್ನಾ ಮಾಡಲಾಗಿದೆ.ಹಾಗೂ ಸಂಘದ ಹೊಸ ಸದಸ್ಯರಿಗೆ ಕೃಷಿ ಸಾಲ ನೀಡಲು 1.22 ಕೋಟಿ ರೂಪಾಯಿ ಮಂಜೂರು ಮಾಡಿದೆ ಎಂದು ಕೆಸಿಸಿ ಬ್ಯಾಂಕಿನ ಅಧ್ಯಕ್ಷ ಆಯ್.ಎಸ್.ಪಾಟೀಲ ಹೇಳಿದರು.
ರೋಣ ತಾಲೂಕಿನ ಕಣಗಿನಹಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪನಃಶ್ಚೇತನ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶಕ್ಕೆ ಸಹಕಾರಿ ರಂಗದ ಮಹತ್ವವನ್ನು ಸಾರಿದ ಕಣಗಿನಹಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪುನಃಶ್ಚೇತನಕ್ಕಾಗಿ ಕೆಸಿಸಿ ಬ್ಯಾಂಕು ಬದ್ಧವಾಗಿದೆ. ಇದಕ್ಕಾಗಿ ಕ್ರಿಯಾ ಯೋಜನೆಯನ್ನು ರೂಪಿಸಿ, ಸಂಘವು ಆರ್ಥಿಕವಾಗಿ ಸಬಲತೆ ಹೊಂದುವ ಮೂಲಕ ಗ್ರಾಮಸ್ಥರಿಗೆ ಹಾಗೂ ರೈತರಿಗೆ ವಿವಿಧ ಸೌಲಭ್ಯಗಳನ್ನು ನೀಡಲು ಅನುಕೂಲ ಕಲ್ಪಿಸಲಾಗುವುದು ಎಂದರು.
ಡಿ.ಆರ್.ಪಾಟೀಲ ಮಾತನಾಡಿ, ರಾಜ್ಯ ಸರ್ಕಾರ, ಅಪೆಕ್ಸ ಬ್ಯಾಂಕು ಹಾಗೂ ಕೆಸಿಸಿ ಬ್ಯಾಂಕುಗಳಿಂದ ದೊರೆಯುವ ಆರ್ಥಿಕ ನೆರವುಗಳನ್ನು ಸಂಘದ ಆಡಳಿತ ಮಂಡಳಿ ಸದಸ್ಯರು ಹೆಚ್ಚು ಜಾಗ್ರತೆಯಿಂದ ಸದುಪಯೋಗ ಪಡಿಸಿಕೊಂಡು ಸಂಘದ ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸಬೇಕು ಎಂದರು.
ಶಾಸಕ ಜಿ.ಎಸ್.ಪಾಟೀಲ ಅಧ್ಯಕ್ಷತೆವಹಿಸಿದ್ದರು.ಬ್ಯಾಂಕಿನ ಉಪಾಧ್ಯಕ್ಷ ಎಸ್.ವೈ.ಪಾಟೀಲ, ನಿರ್ದೇಶಕ ಸಿ.ಕೆ.ಮಾಳಶೆಟ್ಟಿ, ಎಂ.ಎಫ್. ಕಲಗುಡಿ,ಯು.ಎನ್. ಹೊಳಲಾಪೂರ, ರವಿ ಮೂಲಿಮನಿ, ಬಿ.ಎನ್.ನವಲಗುಂದ, ಉಪನಿಬಂಧಕ ಎಸ್.ಬಿ.ಹಿರೇಮಠ,ಕೆಸಿಸಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ವಿ.ಬಿ.ಪಾಟೀಲ ಉಪಸ್ಥಿತರಿದ್ದರು. ಎ.ಎಸ್.ಸೋಬಾನದ ನಿರೂಪಿಸಿದರು. ಎಂ.ವಿ.ಪಾಟೀಲ ಸ್ವಾಗತಿಸಿದರು.ಈಶ್ವರ ಮಾದರ ವಂದಿಸಿದರು.

loading...

LEAVE A REPLY

Please enter your comment!
Please enter your name here