ಕೆಎನ್ ಎನ್ ಸಿಟಿ ನ್ಯೂಸ್ ನ ಸ್ಮಾಟ್೯ ಸಿಟಿ ಬಿಗ್ ಟಿಬೆಟ್ ಸ್ಮಾರ್ಟ್ ಅಧಿಕಾರಿಗಳು ಗೈರು- ಸಾರ್ವಜನಿಕರ ಆಕ್ರೋಶ

0
11

ಬೆಳಗಾವಿ:ಬೆಳಗಾವಿಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳು ಸಂಪೂರ್ಣ ಅವೈಜ್ಞಾನಿಕತೆಯಿಂದ ಕೂಡಿವೆ ಎಂದು ವಿವಿಧ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು.

ಶನಿವಾರ ಕೇಂದ್ರ ಸರಕಾರದ ಮೊದಲ 20 ಸ್ಮಾರ್ಟ್ ಸಿಟಿಯಲ್ಲಿ ಆಯ್ಕೆಯಾದ ಬೆಳಗಾವಿ ಮಹಾನಗರದಲ್ಲಿ ನಡೆಯುತ್ತಿರುವ ಯಶಸ್ವಿ ಹಾಗೂ ವೈಫಲ್ಯದ ಕುರಿತು ಕೆಎನ್ ಎನ್ ಸಿಟಿ ನ್ಯೂಸ್ ನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೆಳಗಾವಿ ಸ್ಮಾರ್ಟ್ ಸಿಟಿ ಆಯ್ಕೆಯಾಗುವ ಮುನ್ನ ಅಧಿಕಾರಿಗಳು ಸ್ಥಳೀಯ ಜನರ ಸಲಹೆಗಳನ್ನು ಪಡೆದರು. ಆದರೆ ಅದರ ಬಳಿಕ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾದ ಬಳಿಕ ನಗರದಲ್ಲಿ ನಡೆಯುವ ಕಾಮಗಾರಿ ಯೋಜನೆಗೆ ಸಾರ್ವಜನಿಕರ ಸಲಹೆ, ಸಹಕಾರ ಪಡೆಯದೆ ಬೇಕಾಬಿಟ್ಟಿಯಾಗಿ ಯೋಜನೆಗಳನ್ನು ರೂಪಿಸಿ ಬೆಳಗಾವಿ ಸ್ಮಾರ್ಟ್ ಸಿಟಿಯನ್ನು ಕುರುಪಿಯನ್ನಾಗಿ ಮಾಡಿದ್ದಾರೆ ಎಂದು ಸ್ಮಾಟ್ ೯ ಸಿಟಿಯ ಕಾಮಗಾರಿಯನ್ನು ಆರೋಪಿಸಿದರು.

ಕೆಎನ್ ಎನ್ ಸಿಟಿ ನ್ಯೂಸ್ ಸಂಪಾದಕ ರಾಜಕುಮಾರ ಟೋಪಣ್ಣವರ, ಮಾಜಿ ಮೇಯರ್ ವಿಜಯ ಮೋರೆ, ಮಾಲೋಜಿರಾವ್ ಅಷ್ಟೆಕರ್, ಸಾಮಾಜಿಕ ಕಾರ್ಯಕರ್ತ ಸುಜೀತ ಮುಳಗುಂದ, ವಿನಾಯಕ ಮಠಪತಿ, ಶಶಿಕಾಂತ ಪಾಟೀಲ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

loading...