ಕೆಎಲ್ಇ ಅಧ್ಯಕ್ಷರಾಗಿ ಮಹಾಂತೇಶ ಕೌಜಲಗಿ ಆಯ್ಕೆ

0
5

ಬೆಳಗಾವಿ

ಕೆಎಲ್ಇ ಸಂಸ್ಥೆಯ ಮುಂದಿನ ಐದು ವರ್ಷದ ನೂತನವಾಗಿ ಅಧ್ಯಕ್ಷರಾಗಿ ಮಹಾಂತೇಶ ಕೌಜಲಗಿ ಆಯ್ಕೆಯಾಗಿದ್ದಾರೆ ಎಂದು ರಾಜ್ಯಸಭಾ ಸದಸ್ಯ, ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೆಎಲ್ಇ ನೂತನ ಅಧ್ಯಕ್ಷರಾಗಿ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಉಪಾಧ್ಯಕ್ಷರಾಗಿ ವೀರುಪಾಕ್ಷಪ್ಪ ಹನಜಿ, ಶಿವಲಿಂಗಪ್ಪ ತಟ್ಟೇವಾಡಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಅಶೋಕ ಬಾಗೇವಾಡಿ, ಮಹಾಂತೇಶ ಕವಟಗಿಮಠ, ಅಮಿತ್ ಕೋರೆ, ಮಹಾದೇವಪ್ಪ ಮುನವಳ್ಳಿ, ಈಶ್ವರಪ್ಪ ಮುನವಳ್ಳಿ, ರುದ್ರಗೌಡ ಪಾಟೀಲ, ಡಾ. ವಿ.ಐ.ಪಾಟೀಲ, ಶಿವಮೊಗ್ಗಪ್ಪ ಪಾಟೀಲ, ವಿಜಯ ಬಸಪ್ಪ ಪಟ್ಟೇದ, ವೀರುಪಾಕ್ಷಿ ಸಾಧುನ್ನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.

134 ವರ್ಷದ ಇತಿಹಾಸ ಇರುವ ಸಂಸ್ಥೆ ಕೆಎಲ್ಇ ಇದರ ಅಡಿಯಲ್ಲಿ ಸುಮಾರು 240 ಅಂಗ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದೆ. ಭಾಷಾತೀತವಾಗಿ, ಜಾತ್ಯಾತೀತವಾಗಿ ಕೆಎಲ್ಇ ಸಂಸ್ಥೆ ಸೇವೆ ನೀಡುತ್ತ ಬಂದಿದೆ.

ಕೆಎಲ್ ಇ ಸಂಸ್ಥೆಗೆ ಸತತ ಮೂರು ಬಾರಿ ಕೆಎಲ್ಇ ಸಂಸ್ಥೆಗೆ ಹ್ಯಾಟ್ರಿಕ್ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ಎಂದರು.

ಶಿವಾನಂದ ಕೌಜಲಗಿ, ಮಹಾಂತೇಶ ಕವಟಗಿಮಠ, ಅಮಿತ ಕೋರೆ, ಮಹಾಂತೇಶ ಕೌಜಲಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...