ಕೆಲವೇ ದಿನಗಳಲ್ಲಿ ಸೋಲಿಗೆ ಕಾರಣ ತಿಳಿಸುವೆ: ಡಿಕೆಶಿ

0
10

ಬೆಂಗಳೂರು:  ಉಪಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣಗಳೇನು? ಸೋಲು, ಎಲ್ಲಿ ಹೇಗಾಯಿತು ಎಂಬುದನ್ನು ಇನ್ನು ಕೆಲವು ದಿನಗಳಲ್ಲಿ‌ಯೇ ತಿಳಿಸುವುದಾಗಿ ಮಾಜಿ ಸಚಿವ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲಿನ ಬಗ್ಗೆ ಈಗಲೇ ಏನನ್ನೂ ಹೇಳುವುದಿಲ್ಲ. ಎಲ್ಲರ ಮುಂದೆ ಎಲ್ಲವನ್ನೂ ಸಂಪೂರ್ಣವಾಗಿ ವಿವರಿಸುವುದಾಗಿ ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದರ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಡಿ.ಕೆ.ಶಿವಕುಮಾರ್, ತಾವು ಇಂದು ನ್ಯಾಯಾಲಯದ ವಿಚಾರಣೆಗೆ‌ ಹೋಗುತ್ತಿರುವುದಾಗಿ ಹೇಳಿದರು.

loading...