ಕೆಲಸದಲ್ಲಿ ಪ್ರಾಮಾಣಿಕತೆ ಇರಲಿ: ಸಂತೋಷ

0
4

ಕೆಲಸದಲ್ಲಿ ಪ್ರಾಮಾಣಿಕತೆ ಇರಲಿ: ಸಂತೋಷ
ಮೂಡಲಗಿ: ಸರ್ಕಾರಿ ನೌಕರಿಯಲ್ಲಿ ಕೂಡುವುದು ಆಕಸ್ಮಿಕ ಅಗಲುವುದು ಅನಿವಾರ್ಯ. ಸರ್ಕಾರಿ ಕೆಲಸವೆಂದರೆ ದೇವರ ಕೆಲಸ ಎಂದು ಸರ್ಕಾರಿ ನೌಕರಿ ಮಾಡುವವರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ಪಕ್ಷಗಾರರಿಗೆ ಸಿಗಬೇಕಾದ ನ್ಯಾಯ ಸರಿಯಾಗಿ ಸಿಗುತ್ತದೆ ಎಂದು ನ್ಯಾಯಾಧೀಶ ಸಂತೋಷಕುಮಾರ ಪಿ.ಎಸ್. ಹೇಳಿದರು.
ಸ್ಥಳಿಯ ದಿವಾನಿ ಹಾಗೂ ಜೆ.ಎಮ್.ಎಪ್.ಸಿ. ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡ ಬಿಳ್ಕೊÃಡುವ ಸಮಾರಂಭದಲ್ಲಿ ಸತ್ಕಾರವನ್ನು ಸ್ವಿÃಕರಿಸಿ ಮಾತನಾಡುತ್ತಾ, ಇಲ್ಲಿಯ ಪರಿಸರ ಮತ್ತು ಇಲ್ಲಿಯ ನ್ಯಾಯವಾದಿಗಳ ಸಹಕಾರ ಮರೆಯಲಾಗದ ಕ್ಷಣಗಳಾಗಿದ್ದು, ಸ್ಥಳೀಯ ಅದಿ ದೇವರ ಆಶಿರ್ವಾದ ನಮ್ಮ ಮೇಲೆ ಇರಲಿ ಎಂದು ಹೇಳಿದರು.
ನ್ಯಾಯವಾದಿಗಳ ಸಂಘದ ಅದ್ಯಕ್ಷ ಕೆ.ಪಿ.ಮಗದುಮ್ ಮಾತನಾಡುತ್ತಾ, ನ್ಯಾಯಾಧೀಶರು ವಕೀಲರ ಜೊತೆ ಅನ್ಯೊನ್ಯ ಸಂಭಂಧ ಹೊಂದಿದ್ದು, ನ್ಯಾಯ ಧಾನದಲ್ಲಿ ವಿಳಂಭ ಮಾಡದೆ ಉತ್ತಮ ಕಾರ್ಯ ಪ್ರವೃತ್ತರಾಗಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಕೆ.ಎಲ್.ಹುಣಸ್ಯಾಳ, ಯು.ಆರ್.ಜೋಕಿ, ಎ.ಕೆ. ಮದಗನ್ನವರ, ಆರ್.ಆರ್.ಬಾಗೋಜಿ, ವಿ.ವಿ. ನಾಯಕ, ಆಯ್.ಎಮ್.ಹೀರೆಮಠ, ಪಿ.ಎಸ್.ಮಲ್ಲಾಪುರ, ಎಸ್,ಎಲ್.ಪಾಟೀಲ, ಎ.ಎಸ್. ಕೌಜಲಗಿ ಕಾರ್ಯಕ್ರಮ ಕುರಿತು ತಮ್ಮ ಅನಿಸಿಕೆ ಹೇಳಿದರು.
ನ್ಯಾಯವಾದಿಗಳ ಸಂಘದ ಉಪಾದ್ಯಕ್ಷ ಎಸ್.ವಾಯ್.ಹೊಸಟ್ಟಿ, ಪ್ರದಾನ ಕಾರ್ಯದರ್ಶಿ ಎಲ್.ವಾಯ್. ಅಡಿಹುಡಿ, ಸಹಕಾರ್ಯದರ್ಶಿ ಡಿ.ಎಸ್.ರೊಡ್ಡನವರ ಮತ್ತು ಪಿ.ಎಲ್.ಮನ್ನಿಕೇರಿ, ಖಜಾಂಚಿ ವಿ.ಕೆ.ಪಾಟೀಲ, ಮಹಿಳಾ ಪ್ರತಿನಿಧಿ ಮಹಾದೇವಿ ಗೊಡ್ಯಾಗೋಳ, ಶ್ರಾವಣಿ ಶೆಟ್ಟಿ ಹಾಗೂ ನ್ಯಾಯವಾದಿಗಳು ಮತ್ತು ನ್ಯಾಯಾಲಯದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

loading...