ಕೆ.ಜೆ. ಜಾರ್ಜ್ ಇಂದು ಇ.ಡಿ.ಮುಂದೆ ವಿಚಾರಣೆಗೆ ಹಾಜರ್

0
1

ಬೆಂಗಳೂರು:- ವಿದೇಶದಲ್ಲಿ ಅಕ್ರಮ ಹಣ ಹೂಡಿಕೆ ಆರೋಪದಡಿ ಮಾಜಿ ಸಚಿವ ಕೆಜೆ ಜಾರ್ಜ್  ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಇಂದು ಅವರು ವಿಚಾರಣೆಗೆ  ಹಾಜರಾಗಲಿದ್ದಾರೆ.
ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ಬೆಳಿಗ್ಗೆ 11 ಗಂಟೆಗೆ ಹಾಜರಾಗಲಿದ್ದಾರೆ.
ಜಾರ್ಜ್  ಅವರು ತಮ್ಮ ಮಕ್ಕಳ ಹೆಸರಿನಲ್ಲಿ ವಿದೇಶದಲ್ಲಿ ಹೂಡಿಕೆ ಮಾಡಿದ್ದು, ಅದನ್ನು ಚುನಾವಣೆ ಪ್ರಮಾಣಪತ್ರದಲ್ಲಿ ಮಾಹಿತಿ ನೀಡಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸೇವಾ  ಸಮಿತಿ ಪಕ್ಷದ ರವಿ ಕೃಷ್ಣಾ ರೆಡ್ಡಿ ಅವರು ಈ ಬಗ್ಗೆ ದಾಖಲೆ ಸಮೇತ ಇಡಿಗೆ ದೂರು  ನೀಡಿದ್ದರು.
ಹೀಗಾಗಿ ರವಿ  ಕೃಷ್ಣಾ ರೆಡ್ಡಿ ಅವರು ನೀಡಿರುವ ದಾಖಲೆಗಳ ಆಧಾರದ ಮೇಲೆ ಕೆ.ಜೆ ಜಾರ್ಜ್, ಪತ್ನಿ ಸುಜಾ  ಹಾಗೂ ಪುತ್ರಿ ರೇನಿಟಾ, ಪುತ್ರ ರಾಣಾಗೆ  ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ಜಾರಿ  ಮಾಡಿತ್ತು. ಈ ಹಿನ್ನೆಲೆಯಲ್ಲಿ ಅವರು  ವಿಚಾರಣೆಗೆ ಹಾಜರಾಗಲಿದ್ದಾರೆ.

loading...