ಕೇಂದ್ರ ಸಚಿವರ ಕಚೇರಿ ಎದುರು ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

0
70

ಕನ್ನಡಮ್ಮ ಸುದ್ದಿ-ವಿಜಯಪುರ: ಐಸಿಡಿಎಸ್‌ ಯೋಜನೆಗೆ ಅನುದಾನ ಕಡಿತಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಕೇಂದ್ರ ಸಚಿವ ಜಿಗಜಿಣಗಿ ಅವರ ಕಚೇರಿ ಎದುರು ಬುಧವಾರ ಬೃಹತ್‌ ಪ್ರತಿಭಟನೆ ನಡೆಸಿದರು.
ನಗರದ ಬಾರಾಕಮಾನ್‌ದಿಂದ ಪ್ರಾರಂಭಗೊಂಡ ರ್ಯಾಲಿ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಕೇಂದ್ರ ಸಚಿವರ ಕಚೇರಿಗೆ ತಲುಪಿತು. ಯಾದಗೀರ, ಕಲಬುರ್ಗಿ, ಬೀದರ, ರಾಯಚೂರು, ಬೆಳಗಾವಿ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸಂಘಟನೆ ರಾಜ್ಯ ಕಾರ್ಯಾಧ್ಯಕ್ಷೆ ಶಾಂತಾ ಘಂಟಿ ಮಾತನಾಡಿ, ಮುಂದೆ ಬರುವ ಸಂಸತ್‌ ಅಧಿವೇಶನದಲ್ಲಿ ಅಂಗನವಾಡಿ ನೌಕರರ ಬಗ್ಗೆ ಚರ್ಚೆಯಾಗಬೇಕು. ಅವರಿಗೆ ಗೌರವ ದನ ಹೆಚ್ಚಳ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಅಪೌಷ್ಠಿಕತೆ ನಿವಾರಣೆ ಮಾಡುವ ಮಹತ್ವದ ಉದ್ದೇಶ ಹೊಂದಿರುವ ಐಸಿಡಿಎಸ್‌ ಯೋಜನೆ ಕಳೆದ 42 ವರ್ಷಗಳಿಂದಲೂ ಜಾರಿಯಲ್ಲಿದೆ ಎಂದರು.

ಗೌರಮ್ಮ ಪಾಟೀಲ, ಭಾರತಿ ವಾಲಿ, ರಾಯಚೂರಿನ ಪದ್ಮಾವತಿ, ಸುನಂದಾ ನಾಯಕ, ಸುರೇಖಾ ರಜಪೂತ, ಲಕ್ಷ್ಮಣ ಹಂದ್ರಾಳ, ಬಿಸಿಯೂಟದ ಗಿರಿಯಪ್ಪ ಸಿದ್ದಮ್ಮ ಬಾಗಲಕೋಟೆಯ ಹಣಮಂತ ದಾಸರ, ವರಲಕ್ಷ್ಮೀ, ಸುರೇಖಾ ಯಾದಗಿರಿ, ಬಸಲಿಂಗಮ್ಮ, ಸುಶೀಲಾ ಹತ್ತಿ, ಶ್ರೀದೇವಿ ಚುಡೆ, ದಾನಮ್ಮ ಗುಗ್ಗರೆ,ಸುವರ್ಣ ಹಲಗಣಿ, ಅಶ್ವನಿ ತಳವಾರ, ಎಲ್‌.ವೈ.ನದಾಫ್‌, ಜಯಶ್ರೀ ಪೂಜಾರಿ, ಸರಸ್ವತಿ ಮಠ, ಸರೋಜಿನ ಪಾಟೀಲ, ಶೈಲಾ ಕಟ್ಟಿ, ಶೋಭಾ ಕೊಡತೆ, ದ್ರಾಕ್ಷಾಯಿಣಿ ಅವಟಿ ಉಪಸ್ಥಿತರಿದ್ದರು.

loading...