ಕೊಪ್ಪಳ ಲೋಕಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಗೆಲುವು: ಸಂಭ್ರಮಾಚರಣೆ

0
5

ಗಂಗಾವತಿ: ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೆÃತ್ರದಿಂದ ಹಾಲಿ ಸಂಸದ ಸಂಗಣ್ಣ ಕರಡಿ ಮತ್ತೊಮ್ಮೆ ಗೆಲ್ಲುತ್ತಿದ್ದಂತೆ ಗಂಗಾವತಿಯಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸಂಭ್ರಮ ಆಚರಿಸಿದರು. ಸಂಗಣ್ಣ ಕರಡಿ ಗೆಲುವಿಗೆ ಶಾಸಕ ಪರಣ್ಣ ಮುನವಳ್ಳಿ ಹರ್ಷ ವ್ಯಕ್ತಪಡಿಸಿ ಬಿಜೆಪಿಗೆ ಅತ್ಯಧಿಕ ಮತ ನೀಡುವಲ್ಲಿ ಕಾರಣರಾಗಿರುವ ವೃತದಾರರಿಗೆ ಅಭಿನಂದಿಸಿದರು.
ಗುರುವಾರ ಕೊಪ್ಪಳದಲ್ಲಿ ನಡೆದ ಮತ ಏಣಿಕೆ ನಂತರ ಸಂಜೆ ನಗರದ ಗಾಂಧಿ ವೃತ್ತದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿ, ನಿರೀಕ್ಷೆಯಂತೆ ಮತ್ತೊಮ್ಮೆ ನಮಗೆ ಗೆಲುವಾಗಿದೆ. ಪ್ರಧಾನಿ ಮೋದಿ ಅಲೆ, ಕಾರ್ಯಕರ್ತರು ಮತ್ತು ಮುಖಂಡರ ಪರಿಶ್ರಮ ಹಾಗೂ ಸಂಗಣ್ಣ ಕರಡಿ ಅವರು ಸಜ್ಜನಿಕೆಯಿಂದಾಗಿ ಬಿಜೆಪಿಗೆ ಜನ ನಿರೀಕ್ಷೆ ಮೀರಿ ಮತ ಹಾಕಿದ್ದಾರೆ. ಕಳೆದ ಐದು ವರ್ಷದಲ್ಲಿ ದೇಶದಲ್ಲಿ ಪ್ರಧಾನಿ ಮೋದಿ ಅಭಿವೃದ್ಧಿ ಮತ್ತು ಕ್ಷೆÃತ್ರದಲ್ಲಿ ಸಂಗಣ್ಣ ಕರಡಿ ಅವರ ಯೋಜನೆಗಳ ಅನುಷ್ಠಾನವನ್ನು ನೋಡಿ ಮತದಾರರು ನಮಗೆ ಆಶಿರ್ವದಿಸಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದಿಸುತ್ತೆನೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ಮುಖಂಡ ತಿಪ್ಪೆರುದ್ರಸ್ವಾಮಿ, ಸಂತೋಷ ಕೆಲೋಜಿ ಮತ್ತಿತರು ಮಾತನಾಡಿ ಹರ್ಷ ವ್ಯಕ್ತಪಡಿಸಿದರು. ಸಂಭ್ರಮಾಚರಣೆಯಲ್ಲಿ ಬಿಜೆಪಿ ನಗರ ಅಧ್ಯಕ್ಷ ವಿರೇಶ ಬಲಕುಂದಿ, ನಗರಸಭೆ ಸದಸ್ಯರಾದ ರಾಚಪ್ಪ ಸಿದ್ಧಾಪುರ, ಉಮೇಶ ಸಿಂಗನಾಳ ಸ್ಭೆರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.

loading...