ಕೊರಿಯಾ ಮೇಲೆ ಆಕ್ರಮಣದ ಸೂಚನೆ ನೀಡಿದ ಟ್ರಂಪ್

0
39

ವಾಷಿಂಗ್ಟನ್:- ವಿನಾಶಕಾರಿ ಅಣ್ವಸ್ತ್ರಗಳನ್ನು ಪ್ರಯೋಗಿಸುತ್ತಾ ಜಗತ್ತಿಗೆ ಗಂಡಾಂತರವಾಗಿರುವ ಉತ್ತರ ಕೊರಿಯಾದೊಂದಿಗೆ ರಾಜತಾಂತ್ರಿಕ ಸಂಧಾನ ಯತ್ನಗಳು ಸಂಪೂರ್ಣ ವಿಫಲವಾಗಿವೆ ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ಒಂದೇ ಒಂದು ಮಾರ್ಗ (ದಾಳಿ) ಮಾತ್ರ ಕೆಲಸ ಮಾಡುತ್ತದೆ ಎಂದು ಆಕ್ರಮಣದ ಮುನ್ಸೂಚನೆ ನೀಡಿದ್ದಾರೆ. ಎರಡು ಅಣ್ವಸ್ತ್ರ ಪ್ರಬಲ ರಾಷ್ಟ್ರಗಳ ನಡುವೆ ಉದ್ವಿಗ್ನ ವಾತಾವರಣ ಭುಗಿಲೆದ್ದಿರುವಾಗಲೇ ಟ್ರಂಪ್ ಮತ್ತು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ -ಉನ್ ನಡುವೆ ವಾಕ್ಸಮರ ತಾರಕಕ್ಕೇರಿದೆ.
ಈ ಹಿಂದೆ ಆಡಳಿತ ನಡೆಸಿದ್ದ ಅಮೆರಿಕ ಅಧ್ಯಕ್ಷರು ಕಳೆದ 25 ವರ್ಷಗಳಿಂದ ಉತ್ತರ ಕೊರಿಯಾದೊಂದಿಗೆ ಮಾತುಕತೆ ನಡೆಸುತ್ತಾ, ಒಪ್ಪಂದಗಳನ್ನು ಮಾಡಿಕೊಂಡು ಭಾರೀ ಮೊತ್ತದ ಹಣವನ್ನು ಪಾವತಿಸಿದ್ದರು. ಆದರೆ ಅವುಗಳಿಂದ ಪ್ರಯೋಜನವಾಗಿಲ್ಲ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

loading...