ಕೊರೊನಾ ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕೆ ಕೇಸ್ ದಾಖಲು

0
2

ಕೊರೊನಾ ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕೆ ಕೇಸ್ ದಾಖಲು
ಬೆಳಗಾವಿ: ಗೋವಾಕ್ಕೆ ದುಡಿಯಲು ಹೋದ ಐಗಳಿ ಗ್ರಾಮದ ೫ ಜನರಿಗೆ ಕೊರೋನಾ ಸೋಂಕು, ಅಥಣಿಯಲ್ಲಿ ಸೋಂಕಿತರನ್ನು ವಶಕ್ಕೆ ಪಡೆದ ಪೊಲೀಸರು ಎಂದು ಫೇಸ್ ಬುಕ್‌ಗೆ ಮಂಗಳವಾರ ರಾತ್ರಿ ಸುಳ್ಳು ಸುದ್ದಿ ಪೋಸ್ಟ್ ಮಾಡಿದ ಆರೋಪದ ಮೇಲೆ ಗೌಡೇಶ ಬಿರಾದಾರ ತುಂಗಳ ಎಂಬುವವರ ಮೇಲೆ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊವೀಡ್-೧೯ ಬಗ್ಗೆ ಸುಳ್ಳು ಸುದ್ದಿ ಹರಡಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿ ನೆಮ್ಮದಿಯನ್ನು ಹಾಳು ಮಾಡಿದ ಅಪರಾಧಕ್ಕಾಗಿ ಕಲಂ ೫೦೫ (೧) ಅನ್ವಯ ಪ್ರಕರಣ ದಾಖಲಿಸಲಾಗಿದೆ. ಪಿಎಸ್ಐ ಕೆ.ಎಸ್.ಕೋಚರಿ ಅವರು ನೀಡಿದ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಐಗಳಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
***************-

loading...