ಕೊರೊನ ಹಿನ್ನಲೆ ಸಂಕೇಶ್ವರ ನಿಲಗಾರ ಗಣಪತಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ: ಹೆದ್ದೂರಶೆಟ್ಟಿ ಕುಟುಂಬದಿಂದ ಸ್ಪಷ್ಟನೆ

0
106

ಕೊರೊನ ಹಿನ್ನಲೆ ಸಂಕೇಶ್ವರ ನಿಲಗಾರ ಗಣಪತಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ: ಹೆದ್ದೂರಶೆಟ್ಟಿ ಕುಟುಂಬದಿಂದ ಸ್ಪಷ್ಟನೆ

ಕನ್ನಡಮ್ಮ ಸುದ್ದಿ-ಸಂಕೇಶ್ವರ : ಕೊರೊನ ಆತಂಕದಿಂದ ಈ ಬಾರಿ ಸಾರ್ವಜನಿಕ ಗಣೇಶ ಉತ್ಸವಗಳಿಗೆ ಸರಕಾರ ನಿರ್ಬಂಧ ಹೇರಿದೆ . ಈ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಪ್ರತಿ ವರ್ಷ ಇಪತ್ತೊಂದು ದಿನಗಳ ಕಾಲ ಪ್ರತಿಷ್ಠಾಪಿಸುತ್ತಿದ್ದ ಪ್ರಸಿದ್ದ ನಿಲಗಾರ ಗಣಪತಿ ಸಾರ್ವಜನಿಕ ದರ್ಶನಕ್ಕೆ ಈ ಬಾರಿ ನಿಷೇಧಿಸಲಾಗಿದೆ ಎಂದು ಹೆದ್ದುರಶೆಟ್ಟಿ ಕುಟುಂಬದವರು ಸ್ಪಷ್ಟ ಪಡೆಸಿದ್ದಾರೆ .

ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಕರ್ನಾಟಕ ಮಹಾರಾಷ್ಟ್ರ ಮತ್ತು ಗೋವಾದಿಂದ ಪ್ರತಿ ವರ್ಷ ಲಕ್ಷಾಂತರ ಭಕ್ತರನ್ನು ತನ್ನತ ಸೆಳೆದಿರುವ ನಿಲಗಾರ ಗಣೇಶ ಎಂದೆ ಕರೆಯುವ ಹೆದ್ದೂರಶೆಟ್ಟಿ ಮನೆಯಲ್ಲಿ ಪ್ರತಿಷ್ಠಾಪನೆ ಮಾಡುವ ಗಣೇಶನಿಗೆ ಕೊರೊನ ಈ ಬಾರಿ ಅಡ್ಡಿಯಾಗಿದೆ .ಸಾರ್ವಜನಿಕ ಗಣೇಶ ಮಂಡಳಿಗಳಿಗೆ ನಿರ್ಬಂಧ ವಿಧಿಸಿದರು ಇದು ಮನೆಯಲ್ಲಿ ಪ್ರತಿಷ್ಠಾಪನೆ ಮಾಡುವ ಗಣಪತಿಯಾಗಿದೆ .
ಈ ಕುರಿತು ಮಾಹಿತಿ ನೀಡಿರುವ ಹೆದ್ದೂರಶೆಟ್ಟಿ ಕುಟುಂಬದವರು
ದೇಶವ್ಯಾಪಿ ಮಹಾಮಾರಿ COVID-19 ಕೊರೊನಾ ಅತ್ಯಂತ ತ್ವರಿತಗತಿಯಲ್ಲಿ ಹಬ್ಬುತ್ತಿರುವದನ್ನು ತಡೆಗಟ್ಟಲು ಸರ್ಕಾರದ ಆದೇಶದ ಮೆರೆಗೆ ಅತ್ಯಂತ ಸರಳ ರೀತಿಯಲ್ಲಿ ಮನೆಯವರಿಂದ ಮಾತ್ರ ಶ್ರೀನಿಲಗಾರ ಗಣಪತಿ ಪ್ರತಿಷ್ಠಾಪನೆ ಮಾಡುವುದಾಗಿ ಹೆದ್ದೂರಶೆಟ್ಟಿ ಮನೆತನದವರು ನಿರ್ಧರಿಸಿದ್ದಾರೆ .ಹೆದ್ದುರಶೆಟ್ಟಿ ಕುಟುಂಬದವರನ್ನು ಹೊರತು ಪಡಿಸಿ ಬೇರೆಯವರಾರಿಗೂ ಪೂಜೆ ಅಥವಾ ದರ್ಶನಕ್ಕೆ ಅವಕಾಶವಿರುವದಿಲ್ಲ. ಸಾರ್ವಜನಿಕರ ಸಲುವಾಗಿ ಗಣಪತಿ ದರ್ಶನ ಕಟ್ಟುನಿಟ್ಟಾಗಿ ಬಂದ್ ಮಾಡಲಾಗಿದೆ. ಅಲ್ಲದೆ ದರ್ಶನಕ್ಕಾಗಿ ಯಾವುದೇ ತರಹದ ಒತ್ತಡ,ವಾದವಿವಾದ,ಪ್ರಭಾವ ಬೀರುವಿಕೆಗೆ ಆಸ್ಪದವಿರುವದಿಲ್ಲ ಎಂದು ಶಿವಪುತ್ರ ಹೆದ್ದೂರಶೆಟ್ಟಿ
ಮನವಿ ಮಾಡಿದ್ದಾರೆ .

loading...