ಕೊರೋನಾ: ಚಿಕಿತ್ಸೆ ಒಳಪಡಿಸುವಂತೆ ಬೆಳಗಾವಿ ಯೋದ ಸಿಎಂಗೆ ಮನವಿ

0
23

ಕೊರೋನಾ: ಚಿಕಿತ್ಸೆ ಒಳಪಡಿಸುವಂತೆ ಬೆಳಗಾವಿ ಯೋದ ಸಿಎಂಗೆ ಮನವಿ
ನನಗೆ ಕೊರೊನಾ ಲಕ್ಷಣಗಳಿದ್ರೂ ಚಿಕಿತ್ಸೆ ನೀಡುತ್ತಿಲ್ಲವೆಂದು ಕಣ್ಣಿರಿಟ್ಟ ಯೋದ
ಬೆಳಗಾವಿ: ನನಗೆ ಕೊರೊನಾ ಸೋಂಕಿನ ಲಕ್ಷಣಗಳಿವೆ. ದಯವಿಟ್ಟು ನನ್ನನ್ನು ಕಾಪಾಡಿ ಎಂದು ಬೆಳಗಾವಿ ಮೂಲದ ಸೈನಿಕರೊಬ್ಬರು ಸಿಎಂ ಬಿಎಸ್ ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ.
ಜಿಲ್ಲೆಯ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದ ಸಿಆರ್‌ಪಿಎಫ್ ಯೋಧ ಗೋವಿಂದ ರೆಡ್ಡಿ, ಕಳೆದ ೧೭ರಂದು ಹೈದ್ರಾಬಾದ್‌ನಿಂದ ಬಂದಿದ್ದಾರೆ. ನನ್ನಲ್ಲಿ ಕೋವಿಡ್-೧೯ ಲಕ್ಷಣಗಳಿವೆ, ಈಗ ನನ್ನ ತಾಯಿಗೂ ಆ ಲಕ್ಷಣಗಳು ಕಾಣಿಸಿಕೊಂಡಿವೆ. ಹುಬ್ಬಳ್ಳಿ ಕಿಮ್ಸ್ ವೈದ್ಯರು ನನಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ವಿದೇಶದಿಂದ ಬಂದವರಿಗೆ ಮಾತ್ರ ಟೆಸ್ಟ್ ಗೆ ಒಳಡಿಸುತ್ತಿದ್ದಾರೆ. ನಿನಗೆ ಏನೂ ಆಗಿಲ್ಲ, ಹೋಗು ಅಂತಾ ಹೇಳುತ್ತಿದ್ದಾರೆ ಎಂದು ಗೋವಿಂದರೆಡ್ಡಿ ವಿಡಿಯೋ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾರೆ.

ದಯವಿಟ್ಟು ನನ್ನ ಕುಟುಂಬವನ್ನ ಕಾಪಾಡಿ. ಸೂಕ್ತ ಚಿಕಿತ್ಸೆ ದೊರೆಯುವಂತೆ ಕ್ರಮ ಕೈಗೊಳ್ಳಿ ಎಂದು ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಶ್ರೀರಾಮುಲುಗೆ ಅವರು ಮನವಿ ಮಾಡಿಕೊಂಡಿದ್ದಾರೆ.
ಯೋಧನಿಗೆ ಕೊರೊನಾ ಸೋಂಕು ಇದೆಯೋ ಇಲ್ಲವೋ ಎನ್ನುವುದು ಪರೀಕ್ಷೆ ಬಳಿಕವಷ್ಟೇ ಖಚಿತವಾಗಬೇಕಿದೆ.
೦೧೦

loading...