ಕೊರೋನಾ ಭೀತಿ: ಕ್ವಾರಂಟೈನ್ ಗೆ ಒಳಗಾದ ಕೌರವ

0
14

ಬೆಂಗಳೂರು

ಕೃಷಿ ಸಚಿವ ಬಿ.ಸಿ.ಪಾಟೀಲ್​ ಅವರಿಗೆ ಕರೊನಾ ಭೀತಿ ಎದುರಾಗಿದ್ದು, ಅವರು ಇಂದಿನಿಂದಲೇ ಸ್ವಯಂ ಕ್ವಾರಂಟೈನ್​ ಆಗಿದ್ದಾರೆ.

ಸಚಿವ ಬಿ.ಸಿ.ಪಾಟೀಲ್​ ಈ ಬಗ್ಗೆ ಟ್ವೀಟ್ ಮಾಡಿದ್ದು, ಬೆಂಗಳೂರಿನ ಮಿನಿಸ್ಟರ್​ ಕ್ವಾಟರ್ಸ್​​ನಲ್ಲಿ ನನ್ನ ಸಂಬಂಧಿಕರೊಬ್ಬರಿಗೆ ಕರೊನಾ ಸೋಂಕು ತಗುಲಿದೆ. ನಾನೂ ಅವರೊಂದಿಗೆ ಸಂಪರ್ಕದಲ್ಲಿದ್ದೆ. ಹಾಗಾಗಿ ನಾನು ಮತ್ತು ನನ್ನ ಕುಟುಂಬಸ್ಥರು, ಸಿಬ್ಬಂದಿ ವರ್ಗದವರು ಒಂದು ವಾರಗಳ ಕಾಲ ಕ್ವಾರಂಟೈನ್​ ಆಗುತ್ತಿದ್ದೇವೆ. ಏನಾದರೂ ಅಗತ್ಯವಿದ್ದರೆ 9448467366ಗೆ ಕರೆ ಮಾಡಿ ಎಂದು ಹೇಳಿದ್ದಾರೆ.

loading...