ಕೊರೋನಾ ಭೀತಿ; ಮಾ.23ರವರೆಗೆ ರಾಜ್ಯದ ಎಲ್ಲ ಮೃಗಾಲಯಗಳು ಬಂದ್

0
0
ಬೆಂಗಳೂರು:-  ಕೊರೋನಾ  ಸೋಂಕಿನ ಬಿಸಿ ಈಗ ಮೃಗಾಲಯಗಳಿಗೂ ತಟ್ಟಿದೆ. ಸೋಂಕುಹರಡುವಿಕೆ ತಡೆಯುವ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದ ಎಲ್ಲ ಮೃಗಾಲಯಗಳನ್ನು ಭಾನುವಾರದಿಂದ ಮಾ.23 ರವರೆಗೆ ಕರ್ನಾಟಕ ಮೃಗಾಲಯ ಪ್ರಾಧಿಕಾರ ನಿರ್ಧರಿಸಿದೆ.
ಮೃಗಾಲಯ ಪ್ರಾಧಿಕಾರದ ಈ ನಿರ್ಧಾರದಿಂದ ಮೈಸೂರು, ಬನ್ನೇರಘಟ್ಟ, ಶಿವಮೊಗ್ಗ, ಗದಗ, ಚಿತ್ರದುರ್ಗ, ಬೆಳಗಾವಿ, ಕಲಬುರಗಿ, ಹಂಪಿ ಮತ್ತು ಅನಗೋಡು ಮೃಗಾಲಯಗಳಲ್ಲಿ ಪ್ರವಾಸಿಗರಿಗೆ ಪ್ರವೇಶಾವಕಾಶವಿರುವುದಿಲ್ಲ ಎಂದು ಪ್ರಾಧಿಕಾರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
loading...