ಕೊರೋನಾ ವಿಷಯದಲ್ಲಿ ಮೈಮರೆಯುವ ಸಮಯವಲ್ಲ: ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ

0
21

ಬೆಳಗಾವಿ
ಕರೋನಾ ಹೊರಟು ಹೋಗಿದೆ ಎಂದು ನಂಬಬೇಡಿ. ಹಬ್ಬಗಳು ಬಂದವು ಎಂದು ಮೈ ಮರೆಯಬೇಡಿ. ವ್ಯಾಕ್ಸಿನ್ ಸಿಗುವವರೆಗೂ ಕರೋನಾದ ವಿರುದ್ದ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದರು.
ಮಂಗಳವಾರ ಕೋವಿಡ್-೧೯ನಲ್ಲಿ ಏಳನೇ ಬಾರಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು,
ಕೊರೋನಾದ ವಿರುದ್ದ ಹೋರಾಟದಲ್ಲಿ ಜನತಾ ಕರ್ಪ್ಯೂನಿಂದ ಇಲ್ಲಿಯವರೆಗೆ ಎಲ್ಲ ಭಾರತೀಯರು ಬಹಳ ದೊಡ್ಡ ಸಮಯ ಕಳೆದಿದ್ದಾರೆ. ಸಮಯದ ಜತೆ ಆರ್ಥಿಕತೆಯಲ್ಲಿಯೂ ಏರಿಕೆಯಾಗುತ್ತಿದೆ. ನಮ್ಮ ಜವಾಬ್ದಾರಿ ಅರಿಯಲು, ಬದುಕಲು ಜನರು ಮನೆಯಿಂದ ಹೊರಗಡೆ ಬರುತ್ತಿದ್ದಾರೆ.
ಸಾಲು ಸಾಲು ಹಬ್ಬಗಳ ನಡುವೆ ಮಾರುಕಟ್ಟೆಯಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ನಾವು ಮರೆಯಬಾರದು. ಲಾಕ್‌ಡೌನ್ ಹೋಗಿರಬಹುದು. ಕೊರೋನಾ ವೈರಸ್ ಹೋಗಿಲ್ಲ. ಕಳೆದ ಏಂಟು ತಿಂಗಳಿನಿAದ ಭಾರತೀಯರ ಸಹಕಾರದಿಂದ ಅದನ್ನು ಸಡಿಲಗೊಳಿಸಬಾರದು. ಅದನ್ನು ಸುಧಾರಣೆ ಮಾಡಬೇಕು.
ಭಾರತದಲ್ಲಿ ೧೦ ಲಕ್ಷ ಜನಸಂಖ್ಯೆಯಲ್ಲಿ ಸುಮಾರು ಐದುವರೆ ಸಾವಿರ ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಅಮೇರಿಕೆ, ಬ್ರೆಝಿಲ್ ದೇಶದಲ್ಲಿ ಸುಮಾರು ೨೫ ಸಾವಿರದ ಸಮೀಪ ಇದೆ. ಭಾರತದಲ್ಲಿ ಪ್ರತಿ ೧೦ ಲಕ್ಷ ಸೋಂಕಿತರಲ್ಲಿ ೮೩% ಇದೆ. ಬೇರೆ ದೇಶದಲ್ಲಿ ೬೦೦ % ಹೆಚ್ಚಿದೆ. ಇದರಲ್ಲಿ ಭಾರತ ಹೆಚ್ಚಿನ ಸಂಖ್ಯೆಯಲ್ಲಿ ಜನರ ಜೀವ ಉಳಿಸಲು ಯಶಸ್ವಿಯಾಗಿದೆ ಎಂದರು.
೧೨ ಸಾವಿರ ಕ್ವಾರಂಟೈನ್ ಕೇಂದ್ರಗಳಿವೆ. ಕೊರೋನಾ ಲ್ಯಾಬ್‌ಗಳು ಸುಮಾರು ೨೦೦೦ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿವೆ. ದೇಶದಲ್ಲಿ ಆದಷ್ಟು ಬೇಗ ೧೦ ಸಾವಿರ ಸಂಖ್ಯೆ ಹೆಚ್ಚಾಗಬಹುದು. ಸೇವಾ ಪರಮೋ ಧರ್ಮ ಮಂತ್ರದಲ್ಲಿ ನಡೆಯುತ್ತಿರುವ ವೈದ್ಯರು, ನರ್ಸ, ಪೌರಕಾರ್ಮಿಕರಿಗೆ ನಿಸ್ವಾರ್ಥ ಕೆಲಸ ಮಾಡುತ್ತಿರುವುದಕ್ಕೆ ಜನರು ಕೃಜ್ಞತೆ ತಿಳಿಸಿದ್ದಾರೆ.
ಕರೋನಾ ಹೋಗಿದೆ ಎಂದು ಮೈ ಮರೆಯಬಾರದು. ಈಗ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ಎಲ್ಲರೂ ಸಾಮಾಜಿಕ ಅಂತರ ಪಾಲನೆ ಮಾಡುತ್ತಿಲ್ಲ. ಮುಖಕ್ಕೆ ಮಾಸ್ಕ್ ಧರಿಸುತ್ತಿಲ್ಲ. ಇದು ದೊಡ್ಡ ಅಪಾಯ ಕಾದಿದೆ.
ಕೊರೋನಾ ವೈರಸ್ ಪ್ರಕರಣ ಕಡಿಮೆ ಆಗುತ್ತಿದ್ದರೂ ಅಪಾಯ ಕಡಿಮೆ ಆಗಿಲ್ಲ. ಹಬ್ಬದ ಋತು ಬಂದಿದ್ದು ಜನರು ಜಾಗರೂಕತೆಯಿಂದ ಇರಬೇಕು. ಹಬ್ಬದ ಖುಷಿಯಲ್ಲಿ ಮೈಮರೆಯಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಕರೆ ನೀಡಿದರು. ಆನ್‌ಲೈನ್‌ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಅನೇಕ ಕಡೆ ಲಾಕ್‌ಡೌನ್ ಅಂತ್ಯಗೊAಡಿದ್ದರೂ ವೈರಸ್ ಆರ್ಭಟ ನಿಂತಿಲ್ಲ. ಆದ್ದರಿಂದ ಜನರು ಎಚ್ಚರಿಕೆಯಿಂದ ಇರಬೇಕು. ಲಸಿಕೆ ಬರುವವರೆಗೂ ಜನರು ಕೊರೋನಾ ನಿಯಮಗಳನ್ನ ತಪ್ಪದೇ ಪಾಲಿಸಬೇಕು ಎಂದು ಮನವಿ ಮಾಡಿದರು.

loading...