.ಕೊರೋನಾ ವೈರಸ್ ಜಾಗೃತಿ ಸಭೆ

0
9

ಕೊರೋನಾ ವೈರಸ್ ಜಾಗೃತಿ ಸಭೆ
ರಾಮದುರ್ಗ: ಗ್ರಾಮದಲ್ಲಿ ಯಾವುದೆ ರೀತಿಯಾಗಿ ಕೊರೊನಾ ವೈರಸ್ (ಕೊವಿಡ್-೧೯) ಬರದಂತೆ ನೋಡಿಕೊಳ್ಳುವ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಬಸವೇಶ್ವರ ಜಾತ್ರೆಯನ್ನು ರದ್ದು ಪಡಿಸಲಾಗಿದೆ ಎಂದು ಗ್ರಾಮ ಪಂಚಾಯತ ಅಧ್ಯಕ್ಷ ಯಂಕಣ್ಣ ಮುಧೋಳ ಹೇಳಿದರು.
ತಾಲೂಕಿನ ಹಲಗತ್ತಿ ಗ್ರಾಮದಲ್ಲಿ ಕೊರೋನಾ ವೈರಸ್ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮದ ಜನರ ಆರೋಗ್ಯದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ ಅಮವಾಶ್ಯೆಯಿಂದ ಪ್ರಾರಂಭವಾಗುವ ಬಸವೇಶ್ವರ ಜಾತ್ರೆಯನ್ನು ರದ್ದು ಮಾಡಲಾಗಿದೆ ಹಾಗೂ ಸರಳವಾಗಿ ಆಚರಣೆ ಮಾಡಲು ತಿರ್ಮಾಣಿಸಲಾಗಿದೆ ಆದ್ದರಿಂದ ಗ್ರಾಮದ ಜನರು ಬೇರೆ ಬೇರೆ ಸ್ಥಳಗಳಿಂದ ಬರುವ ಭಕ್ತರು ಸಹಕರಿಸಬೇಕು. ಮಾ ೩೦ ರಂದು ಸರಳವಾಗಿ ಪೂಜೆ ಮಾಡುವ ಮೂಲಕ ಆಚರಣೆ ಮಾಡಲು ತಿರ್ಮಾನಿಸಿದ್ದು. ಎಲ್ಲಿ ಗುಂಪು ಚರ್ಚೆಗಳು ನಡೆಸದೆ ಶಾಂತಿಯಿAದ ಇರಬೇಕು ಎಂದು ವಿನಂತಿಸಿಕೊAಡರು.
ಗ್ರಾಮ ಲೆಕ್ಕಾಧಿಕಾರಿ ಮಹೇಶ ತೆಂಗಿನಕಾಯಿ ಮಾತನಾಡಿ, ಗ್ರಾಮದಲ್ಲಿ ಬೇರೆ ಊರಿನಿಂದ ಬಂದರವರು ಇದ್ದರೆ ತಕ್ಷಣ ಅವರನ್ನು ತಪಾಸನೆ ಮಾಡಿ ಊರಿಗೆ ಸೇರಿಸಿಕೊಳ್ಳಬೇಕು. ಆದಷ್ಟು ಅವರು ಊರಿಗೆ ಬರದಂತೆ ನೋಡಿಕೊಳ್ಳುವುದು ಉತ್ತಮ. ಸರಕಾರ ಕಾನೂನು ಉಲ್ಲಂಗಿಸಿದರೆ ಅವರಿಗೆ ಎರಡು ವರ್ಷ ಜೈಲುವಾಸ ಎಂದು ಆದೇಶ ಮಾಡಿದೆ. ಪ್ರತಿಯೊಬ್ಬ ಸದಸ್ಯರು ತಮ್ಮ ತಮ್ಮ ವಾರ್ಡಗಳಲ್ಲಿ ಸ್ವಚ್ಚತೆ, ಜಾಗೃತಿ ಮೂಡಿಸುವಂತಾ ಕಾರ್ಯವನ್ನು ಮಾಡಬೇಕು. ನೆಗಡಿ ಕೆಮ್ಮು.ಜ್ವರ, ರೋಗದ ಲಕ್ಷಣಗಳು ಕಂಡು ಬಂದವರಿದ್ದರೆ ಅವರಿಗೆ ಚಿಕಿತ್ಸೆ ಕೊಡಿಸುವಂತಾ ಕೆಲಸ ಮಾಡಬೇಕು ಹಾಗೂ ಎಲ್ಲರ ಆರೋಗ್ಯ ಮುಖ್ಯವಾಗಿದೆ ಎಂದು ಹೇಳಿದರು.
ಪಿ.ಡಿ.ಓ ಬಲರಾಮ ಲಮಾಣಿ ಮಾತನಾಡಿ ಗ್ರಾಮದ ಜನರು ಸ್ವಚ್ಚತೆಯಿಂದ ಕಡೆ ಗಮನ ಹರಿಸಬೇಕು ಹಾಗೂ, ವಯಸ್ಸಾದವರನ್ನು ಮನೆಯಿಂದ ಹೊರಗೆ ಬರದಂತೆ ನೋಡಿಕೊಳ್ಳಬೇಕು. ದಿನಕ್ಕೆ ಹೆಚ್ಚು ಬಾರಿ ಕೈಗಳನ್ನು ತೊಳೆದುಕೊಳ್ಳಬೇಕು. ಮಕ್ಕಳ ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಮಹಾಮಾರಿ ರೋಗವನ್ನು ತಡೆಗಟ್ಟಲು ಎಲ್ಲರೂ ಗ್ರಾಮ ಪಂಚಾಯತಿಯೊAದಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯತ ಉಪಾಧ್ಯಕ್ಷ, ಹಾಗೂ ಸದಸ್ಯರು, ಆಶಾ ಕಾರ್ಯಕರ್ತರು, ಉಪಸ್ಥಿತರಿದ್ದರು.

loading...