ಕೋಟೆ ಬಾಗಿಲು ಮುಚ್ಚಿದ ಮೇಲೆ ಬೆಳಗಾವಿಗೆ ಬರತ್ತಾರಂತೆ ಶೆಟ್ಟರ್ ಸಾಹೇಬ್ರು..

0
77

ಕೋಟೆ ಬಾಗಿಲು ಮುಚ್ಚಿದ ಮೇಲೆ ಬೆಳಗಾವಿಗೆ ಬೆಳಗಾವಿಗೆ ಬರತ್ತಾರಂತೆ ಶೆಟ್ಟರ್ ಸಾಹೇಬ್ರು..

ರಾಜಶೇಖರಯ್ಯ ಹಿರೇಮಠ

ಬೆಳಗಾವಿ

ವಿಶ್ವವ್ಯಾಪ್ತಿಯ ಕೊರೋನೊ ಮಾರಕ ರೋಗದ ಭೀತಿಯಲ್ಲಿ ಜನರು ಇದ್ದಾರೆ. ಆದರೆ ಬೆಳಗಾವಿ ಉಸ್ತುವಾರಿ ಸಚಿವ ಜದೀಶ ಶೆಟ್ಟರ ಸೌಜನ್ಯಕ್ಕಾದರೂ ಬೆಳಗಾವಿಗೆ ಭೇಟಿ ನೀಡದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಸಚಿವ ಶೆಟ್ಟರ ‌ಅವರು ನಾಳೆ ( ಗುರುವಾರ ) ಬೆಳಗಾವಿಗೆ ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ.
ಕೋಟೆ ಬಾಗಲು ಮುಚ್ಚಿದ ಮೇಲೆ ರಾಜ ಆಳಿದ ಹಾಗೆ ಬೆಳಗಾವಿ ಉಸ್ತುವಾರಿ ಸಚಿವ ಜಗದೀಶ್ ‌ಶೆಟ್ಟರ ಅವರದ್ದಾರೆ. ಕೊರೋನೊ‌ ವೈರಸ್ ಸೋಂಕಿನ ಭೀತಿಯಲ್ಲಿದ್ದ ಜನರಿಗೆ ಈಗಾಗಲೇ ಜಿಲ್ಲಾಡಳಿತ ಕೇಂದ್ರ ಹಾಗೂ ರಾಜ್ಯ ಸರಕಾರದ ಮಾರ್ಗದರ್ಶನದಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಸಾಕಷ್ಟು ಪ್ರಮಾಣದಲ್ಲಿ ಜನರಿಗೆ ಜಾಗೃತಿ ವಹಿಸಿದೆ. ಆದರೆ ಉಸ್ತುವಾರಿ ‌ಸಚಿವ ಶೆಟ್ಟರ ಅವರು ಯಾವ ಪುರುಷಾರ್ಥಕ್ಕಾಗಿ‌ ಬರುತ್ತಿದ್ದಾರೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದೆ.
ರಾಜ್ಯ ಬಜೆಟ್ ಅಧಿವೇಶನದ ನಡುವೆಯೂ ಕೊರೋನೊ‌ ಸೋಂಕಿನ ಭೀತಿಯಲ್ಲಿದ್ದ ಜಿಲ್ಲಾಡಳಿತಕ್ಕೆ ಆರೋಗ್ಯ ಸಚಿವ ಶ್ರೀರಾಮುಲು ಆಗಮಿಸಿ ಸಭೆ ನಡೆಸಿ ಜನರ ಆರೋಗ್ಯದ ಮೇಲೆ ಗಮನ ಹರಿಸುವಂತೆ ಸೂಚನೆ ನೀಡಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿ ತೆರಳಿದ್ದರು.
ಕಳೆದ ಹದಿನೈದು ದಿನದಿಂದ ಬೆಳಗಾವಿಯ ಜಿಲ್ಲಾಡಳಿತ ಕೊರೋನೊ ವೈರಸ್ ಸೋಂಕನ್ನು ತಡೆಯಲು ಪೊಲೀಸ್, ಆರೋಗ್ಯ, ಪಾಲಿಕೆ ಸೇರಿದಂತೆ ಇನ್ನಿತರ ಇಲಾಖೆಯೊಂದಿಗೆ ವೈರಸ್ ತಡೆಗೆ ಹಗಲಿರುಳು ಶ್ರಮ ಪಡುತ್ತಿದ್ದಾರೆ. ಆದರೆ ಜಗದೀಶ್ ಶೆಟ್ಟರ್ ಅವರು ಈಗ ಬಂದು ಏನೂ ಮಾಡುತ್ತಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಒಟ್ಟಾರೆ ಹುಬ್ಬಳ್ಳಿ ಧಾರವಾಡ ಜಿಲ್ಲಾ ಉಸ್ತುವಾರಿಯ ಜತೆ ಬೆಳಗಾವಿಯ ಉಸ್ತುವಾರಿ ಹೊಣೆಯನ್ನು‌ ಹೊತ್ತಿರುವ ಜಗದೀಶ್ ‌ಶೆಟ್ಟರ ಅವರಿಗೆ ಬೆಳಗಾವಿ ಬಗ್ಗೆ ಕಾಳಜಿ ಇಲ್ಲ. ಸರಕಾರ ಕೊರೋನೊ ವೈರಸ್ ಸೋಂಕಿನ ಭೀತಿ ಹೊದ ಬಳಿಕ ಬೆಳಗಾವಿಗೆ ನಮ್ಮ ಜಿಲ್ಲೆಯಲ್ಲಿರುವ ನಾಲ್ಕು ಸಚಿವರ ಪೈಕಿ ಒಬ್ಬರಿಗೆ ಜಿಲ್ಲಾ ಉಸ್ತುವಾರಿ ಹೊಣೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

——

ಹೇಳಿಕೆ
ಬೆಂಗಳೂರಿನಲ್ಲಿ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿಗೆ ಬರಲು ಸಾಧ್ಯವಾಗಲಿಲ್ಲ. ಗುರುವಾರ ಬೆಳಗಾವಿಗೆ ಆಗಮಿಸಿ ಪರಿಶೀಲನೆ ನಡೆಸುತ್ತೇನೆ.

– ಜಗದೀಶ್ ಶೆಟ್ಟರ, ಜಿಲ್ಲಾ ಉಸ್ತುವಾರಿ ‌ಸಚಿವ.

loading...