ಕೋ-ಆಪ್ ಕ್ರೆಡಿಟ್ ಸೊಸೈಟಿ ಉದ್ಘಾಟನಾ ಸಮಾರಂಭ

0
96

ಬಾಗಲಕೋಟೆ : 12 ನಗರದ ಜ್ಯೋತಿ ಕೋ-ಆಪ್ ಕ್ರೆಡಿಟ್ ಸೊಸೈಟಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಇದೇ 15ರಂದು ನವನಗರದ ಸೆಕ್ಟರ್ ನಂ.24ರಲ್ಲಿ ಬೆಳಿಗ್ಗೆ 10.30ಕ್ಕೆ ನೆರವೇರಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಮಲ್ಲನಗೌಡ ನಾಡಗೌಡ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 25-10-1996 ರಂದು ಬಾಡಿಗೆ ಕಟ್ಟಡದಲ್ಲಿ ಆರಂಭಗೊಂಡ ಜ್ಯೋತಿ ಕೋ-ಆಪ್ ಕ್ರೇಡಿಟ್ ಸೊಸೈಟಿ ಪ್ರಥಮದಲ್ಲಿ 341 ಸದಸ್ಯರನ್ನು ಹೊಂದಿ 3 ಲಕ್ಷ ರೂಪಾಯಿ ಶೇರು ಬಂಡವಾಳದೊಂದಿಗೆ ಪ್ರಾರಂಭಗೊಂಡಿತು.
ಇಂದು 4700 ಸದಸ್ಯರೊಂದಿಗೆ ಬ್ಯಾಂಕ್ 1 ಕೋಟಿ 70 ಲಕ್ಷ ಶೇರು ಬಂಡವಾಳ, 26 ಕೋಟಿಯನ್ನು ಠೇವಣಿಯನ್ನು ಹೊಂದಿದೆ. 1 ಕೋಟಿ 92 ಲಕ್ಷ ನಿಧಿಗಳನ್ನು ಜ್ಯೋತಿ ಕೋ-ಆಪ್ ಕ್ರೇಡಿಟ್ ಸೊಸೈಟಿ ಹೊಂದಿದೆ, 23 ಕೋಟಿ ರೂ.ಗಳಷ್ಟು ಸಾಲ ವಿತರಿಸಲಾಗಿದೆ. 24 ಲಕ್ಷ 50 ಸಾವಿರ ರೂಪಾಯಿ ನಿವ್ವಳ ಲಾಭ ಹೊಂದಿದೆ ಎಂದರು.
ಬ್ಯಾಂಕಿನಿಂದ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಸಾಲದ ರೂಪದಲ್ಲಿ ಸಹಾಯ ಮಾಡುವ ಮೂಲಕ ಯುವಕರನ್ನು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಿದೆ ಎಂದರು.
ಅಶೋಕ ಲಾಗಲೋಟಿ ಮಾತನಾಡಿ, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚರಂತಿಮಠದ ಪ್ರಭುಸ್ವಾಮೀಜಿ, ವಿಜಾಪುರ ವನಶ್ರೀ ಸಂಸ್ಥಾನಮಠದ ಜಯದೇವ ಸ್ವಾಮೀಜಿ ವಹಿಸುವರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸುವರು. ಸಂಸದ ಪಿ.ಸಿ.ಗದ್ದಿಗೌಡರ ಜ್ಯೌತಿ ಬೆಳಗಿಸುವರು. ಕಂಪ್ಯೂಟರ್ ಉದ್ಘಾಟನೆಯನ್ನು ಶಾಸಕ ಎಚ್.ವೈ.ಮೇಟಿ, ಲಾಕರ್ ಉದ್ಘಾಟನೆ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ಕ್ಯಾಶ್ ಕೌಂಟರ್ನ್ನು ಶಾಸಕ ಸಿದ್ದು ನ್ಯಾಮಗೌಡ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಜಿ.ಎಸ್.ನ್ಯಾಮಗೌಡ, ಶಾಸಕ ಲಕ್ಷ್ಮಣ ಸವದಿ, ವಿ.ಪ.ಸದಸ್ಯ ನಾರಾಯಣಸಾ ಭಾಂಡಗೆ, ಶಾಸಕ ರಮೇಶ ಭೂಷನೂರ, ನಾಗರಾಜ ಛಬ್ಬಿ, ಮಾಜಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಮಾಜಿ ಬಿಟಿಡಿಎ ಅಧ್ಯಕ್ಷ ಜಿ.ಎನ್.ಪಾಟೀಲ, ಮಾಜಿ ಶಾಸಕ ರಾಮಣ್ಣ ಕಲೂತಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಬಿಡಿಡಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಎಪಿಎಂಸಿ ಅಧ್ಯಕ್ಷ ಕುಮಾರ ಯಳ್ಳಿಗುತ್ತಿ, ನಗರಸಭೆ ಅಧ್ಯಕ್ಷ ಸುರೇಶ ಕುದರಿಕಾರ, ಅಖಿಲ ಭಾರತ ಗಾಣಿಗರ ಸಂಘದ ಕಾರ್ಯಾಧ್ಯಕ್ಷ ಅಮರಗುಂಡಪ್ಪ ಮೇಟಿ, ಎಸ್,ಎನ್.ಗೋಡಿ ಮತ್ತಿತರರು ಆಗಮಿಸುವರು ಎಂದು ಹೇಳಿದರು.
ಡಿಎಸ್ಇಆರ್ಟಿ ನಿರ್ದೇಶಕ ಎಸ್.ಆರ್.ಮನಹಳ್ಳಿ, ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾಮಣಿ, ಅತ್ಯುತ್ತಮ ರಾಷ್ಟ್ತ್ರೀಯ ಸೇವಾ ಅಧಿಕಾರಿ ಪ್ರಶಸ್ತಿ ವಿಜೇತ ಡಾ.ವಸಂತ ಗಾಣಿಗೇರ, ಮೈಸೂರು ಕುವೆಂಪು ಕನ್ನಡ ಅಧ್ಯಯನ ಸಹ ಪ್ರಾಧ್ಯಾಪಕ ಡಾ.ವಿಜಯಕುಮಾರಿ ಕರೆಕಲ್ಲ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಪುಂಡಲೀಕಪ್ಪ ಗಿರಿಸಾಗರ, ನಿಂಗಣ್ಣ ಗೋಡಿ, ಬಸಲಿಂಗಪ್ಪ ಹೋಕ್ರಾಣಿ, ಸಿದ್ದಣ್ಣ ಕಾಖಂಡಕಿ, ಬಸಪ್ಪ ಯಳ್ಳಿಗುತ್ತಿ, ಬಾಳಪ್ಪ ಹಟ್ಟಿ, ಅಶೋಕ ತುರಮಂದಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here