ಕೌಟುಂಬಿಕ ಕಲಹಕ್ಕೆ ದಂಪತಿ ಆತ್ಮಹತ್ಯೆ

0
14

ಬೆಳಗಾವಿ
ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪತಿರಾಯ ಓರ್ವನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿಯುತ್ತಿದ್ದಂತೆ ಪತ್ನಿಯು ಕೂಡಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡ ಧಾರುಣ್ಯ ಘಟಣೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.
ಗಂಡ, ಹೆಂಡತಿ ಜಗಳದಿಂದ ಸಾವಿನಲ್ಲಿಯೂ ಒಂದಾಗುವAತೆ ಮಾಡಿದೆ. ಪತಿ ಗುರುನಾಥ ನಾರಾಯಣ ತಾವರೆ (46), ಈತನ ಪತ್ನಿ ಮೀನಾಕ್ಷಿ ಗುರುನಾಥ ತಾವರೆ (33) ಆತ್ಮಹತ್ಯೆಗೆ ಶರಣಾದ ದುರ್ದೈವಿ ದಂಪತಿಗಳು.
ಆಯ್‌ಪಿಎಸ್ ಅಧಿಕಾರಿ ಎಎಸ್ ಪಿ ಪ್ರದೀಪ ಗುಂಟಿ ಮಾರ್ಗದರ್ಶನದಲ್ಲಿ ಸಿಪಿಐ ಮಂಜುನಾಥ ಕುಸಗಲ, ಪಿಎಸ್‌ಐ ಈರಪ್ಪಾ ರಿತ್ತಿ, ಎಎಸ್‌ಐ ಶೋಭಾ ಇಂಗಳಗಾAವಿ ಸ್ಥಳಕ್ಕೆ ಭೆಟಿ ನೀಡಿ ತನಿಖೆ ಪ್ರಾರಂಭಿಸಿದ್ದಾರೆ. ಬೈಲಹೊಂಗಲ ಪೊಲೀಸ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ಘಟನೆ ಹಿನ್ನಲೆ: ಪಟ್ಟಣದ ಚನ್ನಮ್ಮ 1ನೇ ಕ್ರಾಸ್ ನಲ್ಲಿ ವಾಸವಾಗಿದ್ದ ಶಿಕ್ಷಕ ಗುರುನಾಥ ತಾವರೆ ಮೂಲಹತಃ ಖಾನಾಪೂರ ತಾಲ್ಲೂಕಿನ ಚಿಕ್ಕಮುನವಳ್ಳಿ ಗ್ರಾಮದವರು. ಕಳೆದ ಆರು ತಿಂಗಳ ಹಿಂದೆ ತಾಲ್ಲೂಕಿನ ಅಮಟೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಮಾದ್ಯಮದ ವಿಷಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೆಳಗಾವಿ ನಗರದ ಪತ್ನಿ ಮೀನಾಕ್ಷಿ ಜತೆ ಕಳೆದ 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ಪತಿ, ಪತ್ನಿಯರಿಬ್ಬರ ನಡುವೆ ಆಗಾಗ ಕಲಹ ಉಂಟಾಗಿ, ನಂದಗಡ ಪೊಲೀಸ ಠಾಣೆಯಲ್ಲಿ ಪ್ರಕರಣದ ದಾಖಲಾಗಿ, ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದ ಸೂಚನೆಯಂತೆ ಪರಸ್ಪರ ಹೊಂದಾಣಿಕೆ ಜೀವನ ಸಾಗಿಸುವುದಾಗಿ ಒಪ್ಪಿಕೊಂಡು ಬೈಲಹೊಂಗಲ ಚನ್ನಮ್ಮ 1ನೇ ಕ್ರಾಸ್ ಮನೆಯೊಂದರಲ್ಲಿ ವಾಸವಾಗಿದ್ದರು. ಪದೇ, ಪದೇ ಪರಸ್ಪರ ಇಬ್ಬರು ಮುನಿಸಿಕೊಳ್ಳುತ್ತಿದ್ದರು. ಎನ್ನಲಾಗಿದ್ದು, ಸಮಂಧಿಕರು, ಹಿರಿಯರು ಅನೇಕ ಬಾರೀ ತಿಳಿ ಹೇಳಿದ್ದರು. ಅವರ ಕಲಹ ಕಡಿಮೆಯಾಗಿರಲಿಲ್ಲ. ಇಬ್ಬರು ಮಕ್ಕಳು ಸಹ ಚಿಕ್ಕಮುನವಳ್ಳಿಯಲ್ಲಿ ಇದ್ದರು.
ಏಕಾ ಏಕೀ ಸೋಮವಾರ ತಡರಾತ್ರಿ ಇಬ್ಬರ ನಡುವೆ ಜಗಳವಾಗಿದ್ದರಿಂದ ಮುನಿಸಿಕೊಂಡ ಶಿಕ್ಷಕ ಗುರುನಾಥ ಮನೆಯಿಂದ ಹೊರ ಬಂದು ಬೈಕ್ ಮೂಲಕ ತೆರಳಿ, ಪಟ್ಟಣದ ಹೊರ ವಲಯದ ಬೆಳಗಾವಿ ರಸ್ತೆಯ ಜಮೀನೊಂದರಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಷಯ ತಿಳಿದ ಪತ್ನಿಯು ಮನೆಯಲ್ಲಿಯೇ ನೇಣು ಹಾಕಿಕೊಂಡು ಸಾವಿಗಿಡಾಗಿದ್ದಾಳೆ. ಪತಿ, ಪತ್ನಿಯ ಸಾವಿನ ವಿಷಯ ತಿಳಿಯುತ್ತಿದ್ದಂತೆ ಸಂಬAಧಿಕರು, ಪೊಲೀಸ ಠಾಣೆ, ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಮಾವಣೆಗೊಂಡು ಧಾರುಣ
ಘಟಣೆ ಕಂಡು ರೋಧಿಸುವ ದೃಶ್ಯ ನೊಡುಗರಿಗೆ ಕಣ್ಣಂಚಿನಲ್ಲಿ ನೀರು ತಂದಿತು. ಸಾವಿಗಿಡಾದ ಶಿಕ್ಷಕ ಗುರುನಾಥ, ಈತನ ಪತ್ನಿ ಮೀನಾಕ್ಷಿಗೆ ಹತ್ತು ವರ್ಷದ ಒಬ್ಬ ಮಗ, ಮೂರು ವರ್ಷದ ಮಗು ಇದೆ. ಕಂದಮ್ಮಳ ಗೋಳು ಕಣ್ಣಾರೆ ಕಂಡ ಮರಗಿದರು. ಗಂಡ, ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಮಾತಿದೆ. ಅದನ್ನು ಅಳಸಿ ಹಾಕಿದ ದಂಪತಿಗಳ ಸಾವಿನ ದೃಶ್ಯ ಕಂಡ ನಾಗರಿಕರು, ಓಣಿಯ ಜನರು ದು:ಖ ವ್ಯಕ್ತಪಡಿಸುತ್ತಿದಿದ್ದು ಕಂಡು ಬಂದಿತು.

loading...