ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರ ಬಂಧನ

0
8

ಬೆಳಗಾವಿ

ಬೆಳಗಾವಿ
ವಿಶ್ವಕಪ್ ಇಂಗ್ಲೇಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಅಂತಿಮ ಕ್ರಿಕೇಟ್ ಪಂದ್ಯಕ್ಕೆ ಬೆಟ್ಟಿಂಗ್ ಅಡುತ್ತಿದ್ದ ಇಬ್ಬರನ್ನು ಬಂಧಿಸಿ, ಅವರಿಂದ 28 ಸಾವಿರ ನಗದು ಹಾಗೂ ಮೂರು ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಗರದ ವಡಗಾಂವಿ ಸಂಭಾಜಿ ವೃತ್ತದಲ್ಲಿ ನಡೆದಿದೆ.
ಯಳ್ಳೂರ ರಸ್ತೆಯ ಸಂಭಾಜಿ ನಗರದ ಗಣೇಶ ಮಹಾದೇವ ದೊಂಗಡಿ (38) ಹಾಗೂ ಸಂಭಾಜಿ ನಗರದ ಪಾಟೀಲ ಗಲ್ಲಿಯ ರಾಘವೇಂದ್ರ ಪ್ರಕಾಶ ಸೊಗಲಿ (28) ಬಂಧಿತರು. ಇಂಗ್ಲೇಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ಬೌಲಿಂಗ್, ಬ್ಯಾಟಿಂಗ್ ಹಾಗೂ ಸ್ಕೋರಗಾಗಿ ಬೆಟ್ಟಿಂಗ್ ಆಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಪೊಲೀಸರು ಗಣೇಶ ದೊಂಗಡಿ ಹತ್ತಿರವಿದ್ದ 24.500 ರು. ನಗದು ಹಾಗೂ ಎರಡು ಮೊಬೈಲ್‌ಗಳನ್ನು ಹಾಗೂ ರಾಘವೇಂದ್ರ ಸೊಗಲಿ ಹತ್ತಿರವಿದ್ದ 3.500 ನಗದು ಹಾಗೂ ಮೊಬೈಲ್‌ನ್ನು ಸೇರಿದಂತೆ ಸಿಮ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಟ್ಟಿಂಗ್ ಹಣ ಕಟ್ಟಿಸಿಕೊಳ್ಳುತ್ತಿದ್ದ ಹುಬ್ಬಳ್ಳಿ ಮೂಲದ ಹಾಗೂ ಸದ್ಯ ಗೋವಾದಲ್ಲಿ ವಾಸವಾಗಿರುವ ದರ್ಶನ ಸುಗನಾಣಿ (45) ಈ ಮೂವರ ವಿರುದ್ಧ ಶಹಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸ ಇನ್ಸ್ಪೆಕ್ಟರ್ ಜಾವೀದ್ ಮುಶಾಪೂರಿ ನೇತೃತ್ವದ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

 

loading...