ಕ್ಷೆÃತ್ರದ ಸಮಸ್ಯೆ ಆಲಿಸಲು ಸೈಕಲ್ ಏರಿದ ಶಾಸಕ

0
35

ಬೆಳಗಾವಿ: ಜನಸ್ಪಂದನ ಕಾರ್ಯಕ್ರಮದಲ್ಲಿ ಜನರ ಸಮಸ್ಯೆಗಳನ್ನು ಅರಿತ ದಕ್ಷಿಣ ಮತಕ್ಷೆÃತ್ರದ ಶಾಸಕ ಅಭಯ ಪಾಟೀಲ ಕುದ್ದಾಗಿ ಅಧಿಕಾರಿಗಳ ಜೊತೆ ಸೈಕಲ್‌ನಲ್ಲಿ ಸಂಚರಿಸಿ, ಸೋಮವಾರ ಸಮಸ್ಯೆಗಳಿಗೆ ಸ್ಪಂದಿಸಿದರು.


ಕಳೆದ ವಾರ ೩ ದಿನಗಳ ಕಾಲ ಜನಸ್ಪಂದನ ಸಭೆ ನಡೆಸಿ, ಜನರ ಸಮಸ್ಯೆಗಳು ಏನೆಂದು ತಿಳಿಸದುಕೊಂಡು ಸೋಮವಾರ ಸ್ವತಃ ಶಾಸಕ ಅಭಯ ಪಾಟೀಲ ಅಧಿಕಾರಿಗಳೊಂದಿಗೆ ನಗರದ ಜಕ್ಕಿನಹೊಂಡ ಪ್ರದೇಶ, ಗೋಕುಲ ನಗರ, ಡೆಕ್ಕನ್ ಆಸ್ಪತ್ರೆ ಹಿಂಬದಿ ಪ್ರದೇಶ, ಡಿ.ಪಿ ಶಾಲೆಯ ಹಿಂದನ ಪ್ರದೇಶ, ಕೈವಲ್ಯ ನಗರ, ಸಾವರ್ಕರ್ ರಸ್ತೆ, ಪಾಪಾಮಾಳ ಸೇರಿದಂತೆ ಇನ್ನುಳಿದ ಪ್ರದೇಶಗಳಲ್ಲಿ ಸೈಕಲ ಮೂಲಕ ಸಂಚರಿಸಿ ಅಲ್ಲಿನ ಅಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿ ಅಧಿಕಾರಿಗಳಿಗೆ ಸೂಚಿಸಿದರು. ಇನ್ನು ಮಳೆಯಲ್ಲಿಯೇ ಆಗಮಿಸಿದ ಶಾಸಕರನ್ನು ಕಂಡು ಜನರು ಆಶ್ಚರ್ಯ ವ್ಯಕ್ತಪಡಿಸಿದರು.

loading...