ಖಡಕಲಾಟ ಪೋಲಿಸರ ಬೇಟೆ:ಡಿಸ್ಕ್ ಸಮೇತ ಟೈಯರ್ ಕದಿಯುದ್ದಿ ಖದೀಮರ ಬಂಧನ

0
75

ಖಡಕಲಾಟ ಪೋಲಿಸರ ಬೇಟೆ:ಡಿಸ್ಕ್ ಸಮೇತ ಟೈಯರ್ ಕದಿಯುದ್ದಿ ಖದೀಮರ ಬಂಧನ

ಕನ್ನಡಮ್ಮ ಸುದ್ದಿ:ಚಿಕ್ಕೋಡಿ : :ರಸ್ತೆ ಬದಿಯಲ್ಲಿರುವ ಹಾಗೂ ಹೊಲಮನೆಯ ಬಾಜು ನಿಲ್ಲಿಸಿದ ಟ್ರಾಕ್ಟರ್ ಟ್ರೇಲರ್‌ಗಳನ್ನು
ಡಿಸ್ಕ ಸಮೇತ 46 ಟಾಯರಗಳನ್ನು ಕಳ್ಳತನ ಮಾಡಿದ ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಪೋಲಿಸರು ಬಂಧಿಸಿದ್ದಾರೆ.

ಆರೋಪಿತರು ನಿಪ್ಪಾಣಿ ತಾಲೂಕಿನ ಗಳತಗಾ ಗ್ರಾಮದ ಮಾರುತಿ ಬಸಪ್ಪಾ ಠೊಣ್ಣೆ (24), ಮಹಾದೇವ ಮುರಾರಿ ಮಾಕಾಳೆ (27), ‌ಬಾಬು ಸಿದ್ದಪ್ಪಾ ಡಾಲೆ (37), ಶಿವಾನಂದ ಮಾರುತಿ ಗಜಬರ (29), ಖಾನಾಪೂರ ತಾಲೂಕಿನ ಕಕ್ಕೇರಿ ಗ್ರಾಮದ ಸಂಜು ಬಿಷ್ಟಪ್ಪಾ ಅಂಬಡಗಟ್ಟಿ (28), ಶ್ರಾವಣ ಸೊಮಲಿಂಗ ಹುಲಮನಿ (20), ಖಾನಾಪೂರ ತಾಲೂಕಿನ ಘಸ್ಟೊಳಿ ದಡ್ಡಿ ಗ್ರಾಮದ ಸಂತೋಷ ಯಲ್ಲಪ್ಪಾ ನಾಗಣ್ಣವರ (26), ಇವರನ್ನು ಬಂಧಿಸಿ ಇವರ ಬಳಿ ಇರುವ
ವಿವಿಧ ಕಂಪನಿಯ ಡಿಸ್ಕ ಸಮೇತ 46 ಟಾಯರಗಳು 4,60,000, ಎರಡು ಟಾಟಾ ಸುಮೋ ವಾಹನ 4,00,000,‌ ಕೆಂಪು ಚೀರಾ 4 ಇಟ್ಟಿಗೆಗಳು 200, ಕೆಂಪು ಬಣ್ಣದ ಜಾಕ್ ಒಂದು 800, ಟ್ರಾಕ್ಟರ ಟ್ರೇಲರ್ ಡಿಸ್ಕ ನಟ್ ಬಿಚ್ಚುವ 02 ಪಾನ 200, ಕಬ್ಬಿನದ ಟಾಮಿ ಒಂದು 100, ಹೀಗೆ ಒಟ್ಟು 8,61,300 ಕಿಮ್ಮತ್ತಿನ ಸಾಮಾನೂಗಳನ್ನು ವಶಪಡಿಸಿಕೊಂಡಿರುವ ಪೋಲಿಸರು.

ಆರೋಪಿತರು ಖಡಕಲಾಟ, ನಿಪ್ಪಾಣಿ, ಸದಲಗಾ, ಹುಕ್ಕೇರಿ, ಸಂಕೇಶ್ವರ, ಯಮಕನಮರಡಿ, ಚಿಕ್ಕೋಡಿ, ಅಂಕಲಿ, ಕಿತ್ತೂರ, ಹಾರುಗೇರಿ ಪೋಲಿಸ್ ಠಾಣಾ ಹದ್ದಿಗಳಲ್ಲಿ ಬೇರೆ ಬೇರೆ ಊರುಗಳಲ್ಲಿಂದ ಸದರಿ ಆರೋಪಿತರ ಕಡೆಯಿಂದ ಒಟ್ಟು 8,61,300 ಕಿಮ್ಮತ್ತಿನ ಸಾಮಾನೂಗಳನ್ನು ವಶಪಡಿಸಿಕೊಂಡಿರುವ ಪೋಲಿಸರು.
ಈ ಕುರಿತು ಖಡಕಲಾಟ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...