ಖಾನಾಪುರದಲ್ಲಿ ಧಾರವಾಡ ಶಾಸಕ ಬೆಲ್ಲದ ಕಾರ್ ಪಲ್ಟಿ

0
18

 

ಬೆಳಗಾವಿ
ಧಾರವಾಡದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರು ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾದ ಘಟನೆ ಖಾನಾಪುರ ತಾಲೂಕಿನಲ್ಲಿ ಮಂಗಳವಾರ ನಡೆದಿದೆ.
ಕುಟುಂಬದ ಸಮೇತ ಗೋವಾಕ್ಕೆ ಹೋಗಿದ್ದ ಶಾಸಕ ಬೆಲ್ಲದ ಅವರು ಧಾರವಾಡಕ್ಕೆ ಹಿಂದಿರುಗುವಾ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಯಾರಿಗೂ ಹಾನಿಯಾಗಿಲ್ಲ. ಗೋವಾದಿಂದ ಶಾಸಕ ಅರವಿಂದ ಬೆಲ್ಲದ ಸ್ವತಃ ಕಾರ್ ಚಾಲನೆ ಮಾಡಿಕೊಂಡು ಬರುತ್ತಿದ್ದರು. ಕಾರ್‌ನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಖಾನಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದೆ.

loading...