ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ಕೊಡುತ್ತಿವೆ : ಶಶಿಕುಮಾರ

0
49

ಕನ್ನಡಮ್ಮ ಸುದ್ದಿ-ಮೂಡಲಗಿ: ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಹೋರಾಟಕ್ಕೆ ಯಾವದೇ ಸಂಘಟನೆಗಳಿಗೆ ಅವಕಾಶವಿಲ್ಲ. ಕೇವಲ ಶಾಲಾ ಪಾಲಕರು ಮಾತ್ರ ಶಾಲಾ ಆಡಳಿತ ಮಂಡಳಿಯೊಂದಿಗೆ ಕೆಲವು ತಮ್ಮ ವಿಚಾರಗಳನ್ನು ಅರಿತುಕೊಳ್ಳಬೇಕು. ಕಾನೂನು ಅಡಿಯಲ್ಲಿ ಪಾಲಕರನ್ನು ಹೊರತು ಪಡಿಸಿ ಯಾರಿಗೂ ಅವಕಾಶವಿಲ್ಲ. ಒಂದು ವೇಳೆ ಯಾವದೇ ಸಂಘಟನೆಗಳು ಸಂಸ್ಥೆಗಳಿಗೆ ತೊಂದರೆ ಮಾಡಿದರೆ ಅಂತಹವರ ವಿರುದ್ಧ ದೂರು ಸಲ್ಲಿಸುವ ಅವಕಾಶ ಶಿಕ್ಷಣ ಸಂಸ್ಥೆಗಳಿಗೆ ಇದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ ಕರೆ ನೀಡಿದರು.
ಅವರು ಸ್ಥಳೀಯ ಕೆ.ಎಚ್‌.ಸೋನವಾಲಕರ ಕಲ್ಯಾಣ ಮಂಟಪ ಈರಣ್ಣ ದೇವಸ್ಥಾನದಲ್ಲಿ ನಡೆದ ರಾಜ್ಯ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಮತ್ತು ಚಿಕ್ಕೋಡಿ ಜಿಲ್ಲಾ ಘಟಕ ಮೂಡಲಗಿ- ಗೋಕಾಕ ವಲಯ ಆರ್‌ಟಿಇ ಅನುಷ್ಠಾನದ ಜಿಲ್ಲಾ ಮಟ್ಟದ ಶೈಕ್ಷಣಿಕ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ಕೊಡುತ್ತಿವೆ. ಸಮಾಜದಲ್ಲಿ ಜನರಿಗೆ ಒಳ್ಳೆಯ ಸೇವೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆ ಮಾಡೋಣ ಎನ್ನುವ ಮಹಾದಾಸೆಯೊಂದಿಗೆ ಹುಟ್ಟಿಕೊಂಡ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಕಾರ ಮಲತಾಯಿ ಧೋರಣೆ ಮಾಡುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಇರದೇ ಇದ್ದರೆ ಸರ್ವರಿಗೂ ಶಿಕ್ಞಣ ಸಿಗುತ್ತಿರಲಿಲ್ಲ. ಆದರೆ ಆರ್‌ಟಿಇ ಹಣದ ಪಲಾಪೇಕ್ಷೆ ಇಲ್ಲದೇ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳಿಗೆ ಅಧಿಕಾರಿಗಳು ಸರಕಾರದಿಂದ ಸಿಗುವಷ್ಟು ಹಣವನ್ನು ಸರಿಯಾಗಿ ಹಣ ನೀಡುತ್ತಿಲ್ಲ ಎಂದು ಅಧಿಕಾರಿಗಳು ಮತ್ತು ಸರಕಾರದ ವಿರುದ್ಧ ಕಿಡಿಕಾರಿದರು.
ಚಿಕ್ಕೋಡಿಯ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿದರು. ಶ್ರೀಪಾದಬೋಧ ಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿದರು. ಚಿಕ್ಕೋಡಿಯ ಡಿಡಿಪಿಐ ರಾಜು ನಾಯ್ಕ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ ಇವರನ್ನು ಕ್ಯಾಮ್ಸ್‌ ಸಂಘಟನೆ ವತಿಯಿಂದ ಸತ್ಕರಿಸಿದರು. ಕ್ಯಾಮ್ಸ್‌ ರಾಜ್ಯ ಸಂಯೋಜಕ ಸಂದೀಪ ಆನಿಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಜಿಲ್ಲಾ ಕ್ಯಾಮ್ಸ್‌ ಘಟಕದ ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ಕಾರ್ಯದರ್ಶಿ ಮ್ಯಾಥ್ಯೂ ವರ್ಗಿಸ್‌, ಶಿಕ್ಷಣಾಧಿಕಾರಿಗಳಾದ ಜಿ.ಬಿ.ಬಳಿಗಾರ, ಶ್ರೀಪತಿ ಬಟ್ಟ್‌, ಅರ್ಜುನ ಕಂಭೋಗಿ, ಉಪಾಧ್ಯಕ್ಷ ಲಕ್ಷ್ಮಣ ಅಡಿಹುಡಿ, ಕಾರ್ಯದರ್ಶಿ ವೀರಣ್ಣ ಢವಳೇಶ್ವರ, ಗೋಕಾಕದ ಘಟಕದ ಅಧ್ಯಕ್ಷ ಗಿರೀಶ ಝಂವರ, ಕಾರ್ಯದರ್ಶಿ ರಾಮ ಕುರಣಗಿ, ಅಶೋಕ ನೇಸರಗಿ, ಸಂದ್ಯಾ ಪಾಟೀಲ, ಡಾ.ಎಂ.ಎನ್‌.ಮುಗಳಖೋಡ, ಅಪ್ಪಸಾಬ ಪಾಟೀಲ, ಸಂತೋಷ ಪಾರ್ಶಿ ಅನೇಕರು ಉಪಸ್ಥಿತರಿದ್ದರು. ಜಿಲ್ಲಾ ಕ್ಯಾಮ್ಸ್‌ ಘಟಕದ ಅಧ್ಯಕ್ಷ ಮಲ್ಲಪ್ಪ ಗಾಣಿಗೇರ ಸ್ವಾಗತಿಸಿದರು. ರಮೇಶ ಗುಂಡಪ್ಪಗೋಳ ನಿರೂಪಿಸಿದರು. ಮಲ್ಲಿಕಾರ್ಜುನ ಹಂಚಿನಾಳ ವಂದಿಸಿದರು.

loading...