ಗಟಾರಗಳು ಅಕ್ಷರಶ: ರೋಗಕ್ಕೆ ಆಹ್ವಾನ ನೀಡುವ ವಾತಾವರಣ ಗ್ರಾಮಗಳಲ್ಲಿ ನಿರ್ಮಾಣ

0
14

 

ನಾಗರಾಜ ದೈವಜ್ಞ
ಮುಂಡಗೋಡ: ತಾಲೂಕಿನ ಚಿಗಳ್ಳಿ ಹಾಗೂ ಕಾವಲಕೊಪ್ಪ ಗ್ರಾಮದಲ್ಲಿನ ಪಕ್ಕಾ ಗಟಾರಗಳು ಅಕ್ಷರಶ: ಪ್ಲಾಸ್ಟಿಕ್ ಚೀಲ್, ಬಾಟಲಿಗಳು, ಸೇರಿದಂತೆ, ಮನೆಯ ತ್ಯಾಜ್ಯ ವಸ್ತುಗಳು ಹಾಗೂ ಕೊಳಕು ನೀರು ತುಂಬಿ ನಿಂತು, ಸೊಳ್ಳೆಗಳ ಉತ್ಪತ್ತಿ ತಾಣವಾಗುತ್ತಾ, ಡೆಂಗ್ಯು ಮಲೇರಿಯಾ ಸೇರಿದಂತೆ ಇನ್ನಿತರ ರೋಗಕ್ಕೆ ಆಹ್ವಾನ ನೀಡುವ ವಾತಾವರಣದ ಸ್ಥಿÃತಿ ಈಗ ಗ್ರಾಮಗಳಲ್ಲಿ ನಿರ್ಮಾಣವಾಗಿದೆ.

ಮಳೆಗಾಲ ಪೂರ್ವದಲ್ಲಿ ಮಾಡಬೇಕಾದಂತ ಕೆಲಸಗಳು ಇನ್ನೂತನಕ ಮಾಡದೆ ಇರುವದು ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಇದರ ಬಗ್ಗೆ ಗಮನ ಹರಿಸದೆ ಹೋದಲ್ಲಿ ಗ್ರಾಮಗಳಲ್ಲಿ ರೋಗರುಜನಗಳ ಹರಡಿದರೆ ಅದಕ್ಕೆ ಪಂಚಾಯತ್ ಚುನಾಯಿತ ಸದಸ್ಯರು ಹಾಗೂ ಅಧಿಕಾರಿಗಳು ನೇರ ಹೋಣೆಗಾರರಾಗುತ್ತಾರೆ. ಹಾಗಾಗಿ ಸಂಬಂದ ಪಟ್ಟ ಅಧಿಕಾರಿಗಳು ಹಾಗೂ ಚುನಾಯಿತ ಸದಸ್ಯರು ಆದಷ್ಷು ಬೇಗನೆ ತ್ಯಾಜ್ಯ ಹಾಗೂ ಕೊಳಕು ನೀರು ತುಂಬಿಕೊಂಡು ನೀತು, ಜನರನ್ನು ರೋಗರುಜಿನಗಳಿಗೆ ಆಹ್ವಾನ ನೀಡುತ್ತಿರುವ ಪಕ್ಕಾ ಗಟಾರಗಳ ಸ್ವಚ್ಚತಾ ಕಾರ್ಯವನ್ನ ಮಾಡಬೇಕೆಂದು ಗ್ರಾಮಸ್ಥರನ್ನು ಆಗ್ರಯಿಸಿದ್ದಾರೆ. ಭಾರತ ದೇಶದಲ್ಲಿ ಪ್ರತಿಶತ ೭೫ ರಷ್ಟು, ಜನ ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಆ ಹಳ್ಳಿಗಳು ಅಭಿವೃದ್ಧಿ, ಹೊಂದಿದಾಗ ಮಾತ್ರ ಮಹಾತ್ಮಾ ಗಾಂಧೀಜಿಯವರು ಕಂಡ ಕನಸು ನನಸು ಮಾಡಲು ಸಾಧ್ಯ, ಎಂದು ತಿಳಿದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಗ್ರಾಮಗಳ ಅಭಿವೃದ್ಧಿಗೆ ಸ್ಥಳೀಯ ಸರ್ಕಾರವನ್ನಾಗಿ ಗ್ರಾಮ ಪಂಚಾಯತ್ ರಚನೆ ಮಾಡಿ ಓರ್ವ ಅಭಿವೃದ್ಧಿ ಅಧಿಕಾರ ನೇಮಕ ಮಾಡಿ ಗ್ರಾಮ ಪಂಚಾಯತಿಗಳಿಗೆ ನೀರು ಹರಿಸಿದಂತೆ ಕೋಟ್ಯಂತರ ರೂಪಾಯಿ ಹಣ ನೀಡುತ್ತಿದೆ. ಸ್ವಚ್ಛ ಭಾರತ ಅಭಿಯಾನ ಮಹಾತ್ಮ ಗಾಂಧೀಜಿಯವರ ಕಾಲದಲ್ಲೆ ಆರಂಭಗೊಂಡಿದ್ದರೂ, ಅದು ಹೆಚ್ಚು ಪ್ರಚಲಿತಕ್ಕೆ ಬಂದುದ್ದು, ೨೦೧೫-೨೦೧೬ನೇ ಸಾಲಿನಲ್ಲಿ, ಈ ಅಭಿಯಾನವು ಅಧಿಕೃತವಾಗಿ ೨೦೧೪ ಅಕ್ಟೊÃಬರ ೨ ಗಾಂಧೀಜಯಂತಿಯಂದು ಪ್ರಧಾನ ಮಂತ್ರಿ ನಂರೇಂದ್ರ ಮೋದಿಯವರು ಚಾಲನೆ ನೀಡಿದ್ದಾರೆ. ಪ್ರತಿ ವರ್ಷ ಗಾಂಧೀಜಯಂತಿಯಂದು ಎಲ್ಲ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಪೊರಕೆ ಹಿಡಿದು ಓಣಿಗಳಲ್ಲಿ ಸ್ವಚ್ಛ ಮಾಡುವುದರ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಗುತ್ತದೆ. ಆದರೆ ಕೇಂದ್ರ ಸರ್ಕಾದ ಸ್ವಚ್ಛ ಭಾರತ (ಯೋಜನೆ) ಅಭಿಯಾನ ಮಾತ್ರ ಮುಂಡಗೋಡ ತಾಲೂಕಿನ ಚಿಗಳ್ಳಿ,À ಗ್ರಾಮ ಪಂಚಾಯತ ಅಧಿಕಾರಿಗಳಿಗೆ ಹಾಗೂ ಅಲ್ಲಿÃನ ಜನಪ್ರತಿನಿಧಿಗಳಿಗೆ ಗೊತ್ತೆ ಇಲ್ಲವೆಂಬಂತ್ತೆ ಕಾಣತೋಡಗಿದೆ.
ಗ್ರಾಮೀಣ ಜನತೆ ಹಾಗೂ ನಗರ ಪ್ರದೇಶದ ನಿವಾಸಿಗಳಿಗೆ ಸ್ವಚ್ಛತೆಯ ಮಹತ್ವವನ್ನು ತಿಳಿಸಿಕೊಡಲು ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಗಟಾರಗಳನ್ನು ಸ್ವಚ್ಚ ಗೊಳಿಸುವ ಸಲುವಾಗಿ ಸರ್ಕಾರದಿಂದ ಅನುದಾನ ಕೋಡುತ್ತದೆ. ಅದನ್ನು ಪ್ರತಿ ವರ್ಷ ಬಳಕೆ ಮಾಡಿ ಗಟಾರಗಳನ್ನು ಸ್ವಚ್ಛಗೊಳಿಸುತ್ತಾರೆ. ಆದರೆ ಈ ಗ್ರಾಮದಲ್ಲಿನ ತ್ಯಾಜ್ಯ ವಸ್ತುಗಳು,ಕೊಳಕು ನೀರು, ತುಂಬಿ ನಿಂತಿರುವ, ಹಾಗೂ ಕೆಲ ಕಡೆಗಳಲ್ಲಿ ಮಣ್ಣು ತುಂಬಿ ಮುಚ್ಚಿರುವ ಗಟಾರಗಳನ್ನು ನೋಡಿದರೆ, ಕಳೆದ ೫-೬ ವರ್ಷಗಳಿಂದ ಈ ಗ್ರಾಮದಲ್ಲಿನ ಗಟಾರಗಳನ್ನು ಪಂಚಾಯತಿಯವರು ಸ್ವಚ್ಛ (ಬಳಸದೆ) ಮಾಡದೆ, ಹಣ ದುರ್ಬಳಕೆ ಮಾಡಿದ್ದಾರೆ ಎಂಬುವುದಕ್ಕೆ ಈ ಗಟಾರಗಳೆ ಸಾಕ್ಷಿ ಹೇಳುವಂತಿವೆ.

===========ಬಾಕ್ಸ್ ಸುದ್ಧಿ========
ಗ್ರಾಮ ಪಂಚಾಯತಿ ಇರುವಂತಹ ಗ್ರಾಮದಲ್ಲಿನ ಗಟಾರಗಳು ಈ ರೀತಿ ಇದ್ದರೆ, ಪಂಚಾಯತಿಗೆ ಒಳ ಪಡುವ ಗ್ರಾಮಗಳ ಗಟಾಗಳ ಸ್ಥಿÃತಿ ಹೇಗಿರಬೇಕು, ನಮ್ಮ ಗ್ರಾಮದಲ್ಲಿನ ಗಟಾರಗಳು ಕಳೆದ ೩-೪ ವರ್ಷಗಳಿಂದ ಸ್ವಚ್ಛ ಗೊಂಡಿಲ್ಲ, ಈಗ ಗಟಾರಗಳು ಅಲ್ಲಲ್ಲಿ ಮಣ್ಣು ತುಂಬಿ ಮುಚ್ಚಿಕೊಂಡರೆ, ಇನ್ನೂ ಕೆಲ ಕಡೆಗಳಲ್ಲಿ ತ್ಯಾಜ್ಯ ಹಾಗೂ ಕೊಳಕು ನೀರು ತುಂಬಿ ನಿಂತು, ಕೆಸರು ಗದ್ದೆಗಳಂತ್ತೆ ಕಾಣತೋಡಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಲಕ್ಷಣಗಳು ಕಂಡುಬರುತ್ತಿವೆ. ಗಟಾರಗಳಲ್ಲಿನ ಕೆಟ್ಟ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ದಿನನಿತ್ಯ ಓಣಿಗಳಲ್ಲಿ ಓಡಾಡುವಂತಹ ಸ್ಥಿÃತಿ ಗ್ರಾಮದ ಸಾರ್ವಜನಿಕರದಾಗಿದೆ. ಹಾಗಾಗಿ ಗಟಾರ ಸವಚ್ಚಗೊಳಿಸುವು ಕಾರ್ಯಕ್ಕೆ ಮಳೆಗಾಲ ಪೂರ್ವದಲ್ಲಿ ಗುತ್ತಿಗೆದಾರರಿಗೆ ಗುತ್ತಿಗೆ ನೀಡಿ, ಆದಷ್ಟು ಶೀಘ್ರದಲ್ಲಿ ಗಟಾರ ಸ್ವಚ್ಚಗೊಳಿಸುವ ಕಾರ್ಯ ನಡೆಯಬೇಕೆಂದು ಚಿಗಳ್ಳಿ ಗ್ರಾಮಸ್ಥ ಸಣ್ಣಪ್ಪ ಕಾಶಿಬಾಯಿ ಗ್ರಾ.ಪಂ,ಗೆ ಆಗ್ರಹಿಸಿದ್ದಾರೆ.

loading...