ಗಡಿಯಲ್ಲಿ ಪಾಕ್ ಒಳನುಸುಸುಳುಕೋರನ ಹತ್ಯೆ

0
1

ಶ್ರೀನಗರ- ಭಾರತ- ಪಾಕಿಸ್ತಾನದ ಅಟಾರಿ ಭಾಗದಲ್ಲಿ ಗಡಿ ಭದ್ರತಾ ಯೋಧರು ಪಾಕ್ ಒಳನುಸುಳುಗಾರನನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಅಟಾರಿ ರೈಲ್ವೇ ಟ್ರಾಕ್ ಬಳಿ ಭಾರತದ ಗಡಿಯೊಳಗೆ ನುಸುಳಲು ಯತ್ನ ಮಾಡುತ್ತಿದ್ದ ಸಮಯದಲ್ಲಿ ನಮ್ಮ ಯೋಧರು ಹೊಡೆದುರುಳಿಸಿದ್ದಾರೆ. ಮೃತ ಪಾಕ್ ನುಸುಳು ಕೋರನನ್ನು ಗುಲ್ ನವಾಜ್ ಎಂದು ಗುರುತಿಸಲಾಗಿದೆ.
ಗಡಿ ದಾಟುತ್ತಿರುವುದು ಯೋಧರ ಗಮನಕ್ಕೆ ಬಂದಿದ್ದು ಬಿಎಸ್ ಎಫ್ ಯೋಧರು ಪಾಕ್ ನುಸುಳುಕೋರನಿಗೆ ಹಿಂದೆ ಹೋಗುವಂತೆ ಸೂಚಿಸಿದ್ದರೂ ಆದರೆ ಆತ ನಿರಾಕರಿಸಿದ್ದ. ನಂತರ ಯೋಧರು ಆತನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.

loading...