ಗಣಪತಿ ಮೆರವಣಿಯಲ್ಲಿ ಅವಘಡ: ಸೌಂಡ್ ಬಾಕ್ಸ್ ಮೇಲಿಂದ ಬಿದ್ದು ಯುವಕ ಸಾವು

0
15

ಗಣಪತಿ ಮೆರವಣಿಯಲ್ಲಿ ಅವಘಡ: ವೇಳೆ ಸೌಂಡ್ ಬಾಕ್ಸ್ ಮೇಲಿಂದ ಬಿದ್ದು ಯುವಕ ಸಾವು

ಬೆಳಗಾವಿ
ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಡಾಲ್ಬಿ ಸೌಂಡ್ ಬಾಕ್ಸ್ ಮೇಲಿಂದ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ನಗರದ ಕಾಮತ ಗಲ್ಲಿಯ ರಾಹುಲ್ ಸದಾವರ (38) ಎಂಬ ಯುವಕ ಮೃತಪಟ್ಟಿದ್ದು, ಗಲ್ಲಿ ಗಣೇಶ ಮಂಡಳಿಯವರು ಡಾಲ್ಬಿ ಸೌಂಡ್ ಬಾಕ್ಸ್ ಬಂದ್ ಮಾಡಿ ತಕ್ಷಣ ಗಣೇಶ ವಿಸರ್ಜನೆ ಮಾಡಿದರು.
ಬೆಳಗ್ಗೆ 8 ಗಂಟೆ ಸುಮಾರಿಗೆ ರಾಹುಲ್ ಡಾಲ್ಬಿ ಮೇಲೆ ನಿಂತುಕೊಂಡಿದ್ದನು.‌ ನಗರದ ಹುತಾತ್ಮಾ ಚೌಕ್ ಬಳಿ ಬಂದಾಗ ಆಯ ತಪ್ಪಿ ಕೆಳಗೆ ಬಿದ್ದಿದ್ದಾನೆ. ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಕಾಮತ ಗಲ್ಲಿಯ ಗಣಪತಿ ವಿಸರ್ಜನಾ ಮೆರವಣಿಗೆ ಗುರುವಾರ ರಾತ್ರಿಯಿಂದ ಆರಂಭಗೊಂಡಿದೆ. ಬೆಳಗ್ಗೆ ಹುತಾತ್ಮಾ ಚೌಕ್ ಗೆ ಬಂದಾಗ ಈ ಅವಘಡ ಸಂಭವಿಸಿದೆ‌. ವಿವಾಹಿತ ಯುವಕ ರಾಹುಲ್ ನಿಗೆ ಎರಡು ಹೆಣ್ಣು ಮಕ್ಕಳಿದ್ದು, ಈತನ ಸಾವಿನಿಂದ ಗಲ್ಲಿಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

loading...