ಗಣರಾಜೋತ್ಸವ ಆಚರಣೆ

0
98

ಕನ್ನಡಮ್ಮ ಸುದ್ದಿ-ಕಲಘಟಗಿ : ತಾಲೂಕಿನ ಧುಮ್ಮವಾಡ ಗ್ರಾಮ ಪಂಚಾಯತ ಕಾರ್ಯಾಲಯದ ಅವರಣದಲ್ಲಿ 68 ನೇ ಗಣರಾಜ್ಯೋತ್ಸವ ದ್ವಜಾರೋಹಣವನ್ನು ಗ್ರಾಮದ ಹಿರಿಯರಾದ ಭಿಮಪ್ಪ ಬ ಲಕಮಾಪೂರ ವಹಿಸಿಕೊಂಡಿದ್ದರು. ಹಾಗೂ ದ್ವಜಾರೋಹಣವನ್ನು ಕಾರ್ಯಕ್ರಮವನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಸಂಕವ್ವ ಧ ಬೆಟದೂರ ಇವರು ನೇರೆವೆರಿಸಿದರು.
ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶ್ರೀಮತಿ ದ್ರಾಕ್ಷಾಯಿಣಿ ಶಿ ಹುಲಗೂರಮಠ ಸದಸ್ಯರುಗಳಾದ ಬಸಪ್ಪ ಪ ದೊಡಮನಿ, ಉಮೇಶ ರಾ ಬಸರಿಕೊಪ್ಪ, ದ್ಯಾಮಣ್ಣ ಬ ಸತ್ತೂರ, ರಾಜಕುಮಾರ ರಾ ಕಾಮಜಿ ಮೈಲಾರೆಪ್ಪ ಬ ಕಡ್ಡಿಪುಡಿ,ಶ್ರೀಮತಿ ಪ್ರೇಮವ್ವ ಸ ಬೆಳ್ಳಿಹುಲಿ, ಶ್ರೀಮತಿ ಶಕುಂತಲಾ ರ ಹೊಸಮನಿ, ಶ್ರೀಮತಿ ಕಮಲವ್ವ ಚ ಹುಬ್ಬಳ್ಳಿ ಮತ್ತು ಕಲಘಟಗಿ ತಾಲೂಕ ಪಂಚಾಯತ ಸದಸ್ಯರಾದ ಶಿದ್ದಲಿಂಗಪ್ಪ ಪ ಕುಂಬಾರ ಹಾಗೂ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀಮತಿ ನಾಗರತ್ನಾ ತಪೇಲಿ,ಗ್ರಾಮ ಪಂಚಾಯತ ಸಿಬ್ಬಂದಿ ವರ್ಗ, ಫ್ರೌಢ ಶಾಲೆ,ಮಾದರಿ ಕೇಂದ್ರ ಶಾಲೆ, ಹೆಣ್ಣು ಮಕ್ಕಳ ಶಾಲೆ, ವಿರೇಶ್ವರ ದತ್ತ ಪೂರ್ವ ಪ್ರಾಥಮಿಕ ಶಾಲೆ ಎಲ್ಲ ಶಾಲೆ ಸಿಬ್ಬಂದಿ ವರ್ಗ ಹಾಗೂ ಎಲ್ಲ ಶಾಲೆಯ Sಆಒಅ ಅಧ್ಯಕ್ಷರು/ಉಪಾಧ್ಯಕ್ಷರು ಸರ್ವ ಸದಸ್ಯರು,ಗ್ರಾಮದ ಎಲ್ಲ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಪಾಲಗೊಂಡಿದ್ದ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿನಿಯಾದ ಕುಮಾರಿ: ಅರ್ಪಿತಾ.ಬ.ಹೊನ್ನಳ್ಳಿ ಇವರು SSಐಅ ಪರೀಕ್ಷೆಯಲ್ಲಿ 98.5 ಅಂಕಗಳಿಸಿದ ವಿದ್ಯಾರ್ಥಿನಿಗೆ ಹಾಗೂ ಹೆಣ್ಣು ಮಕ್ಕಳ ಶಾಲೆಯ ಶಿಕ್ಷಕಿಯರಾದ ಶ್ರೀಮತಿ ವಸಂತಿ ಪೂಜಾರ ಇವರು ಹೆಣ್ಣು ಮಕ್ಕಳ ಶಾಲೆಗೆ ಸ್ಮಾರ್ಟಕ್ಲಾಸ್ ದೇಣಿಗೆ ನೀಡಿದ ನೇಮಿತ್ತೆ ಗ್ರಾಮ ಪಂಚಾಯತ ವತಿಯಿಂದ ಸನ್ಮಾನಿಸಲಾಯಿತು.

loading...