ಗಾಂಜಾ ಮಾರಾಟಗಾರರು ಪೊಲೀಸರ ಬಲೆಗೆ!

0
73

ಗಾಂಜಾ ಮಾರಾಟಗಾರರು ಪೊಲೀಸರ ಬಲೆಗೆ!

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದಲ್ಲಿ ಗಾಂಜಾ ಮಾರಾಟದ ಮಾಫಿಯಾ ಮೇಲೆ ನಗರದ ಪೊಲೀಸರು ದಾಳಿ ನಡೆಸಿದ ಘಟನೆ ಇಂದು ನಡೆದಿದೆ.

ಸೋಮವಾರ ಶಂಕಿತ ಗಾಂಜಾ ಮಾರಟಗಾರ ಹಾಗೂ ಖರೀದಿದಾರರನ್ನು ನಗರ ಪೋಲಿಸರು ವಶಕ್ಕೆ ಪಡೆದಿದ್ದಾರೆ.ನಗರದ ಖಡೇಬಜಾರ ಪೋಲಿಸರ ಕಾರ್ಯಾಚರಣೆಯ ನಡೆಸಿದ್ದಾರೆ , ಗ್ರಾಹಕರ ವೇಷದಲ್ಲಿ ಹೋದ ಪೋಲಿಸರು ಗಾಂಜಾ ಮಾರಾಟಗಾರನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ .
ಬಂಧಿತರಲ್ಲಿ ಒಬ್ಬ ಬಾಲಾಪರಾಧಿ ಸಹ ಇರುವ ಶಂಕೆ ವ್ಯಕ್ತವಾಗಿದೆ.

ನಗರದಲ್ಲಿ ಹಲವು ದಿನಗಳಿಂದ ಪೋಲಿಸರಿಗೆ ಕೈಗೆ ಸಿಗದೆ ಯಾಮಾರಿಸುತ್ತಿದ್ದ ಆರೋಪಿಗಳು ಇಂದು ಬಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ವಶಕ್ಕೆ ಪಡೆದವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ .

loading...