ಗಾಳಿಯಲ್ಲಿ ಕೊರೊನಾ ಹರಡಲಿದೆ ಎಂಬ ವಾದ ತಳ್ಳಿಹಾಕುವುದಿಲ್ಲ; ವಿಶ್ವ ಆರೋಗ್ಯ ಸಂಸ್ಥೆ

0
10

ಜಿನಿವಾ:- ಕೊರೊನಾ ವೈರಸ್ ಗಾಳಿಯ ಮೂಲಕ ಹರಡುತ್ತದೆ ಎಂಬ ವಾದವನ್ನು ತಳ್ಳಿಹಾಕಲಾಗದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒಒ) ಹೇಳಿದೆ.
ವಿಶ್ವದಾದ್ಯಂತ ೨೦೦ ಕ್ಕೂ ಹೆಚ್ಚು ವಿಜ್ಞಾನಿಗಳು ಕೊರೊನಾ ವೈರಸ್ ಗಾಳಿಯ ಮೂಲಕ ಹರಡುತ್ತದೆ ಎಂದು ಪ್ರತಿಪಾದಿಸಿದ್ದರು. ಇದಕ್ಕೆ ಸಂಬಂಧಿಸಿದ ಆಧಾರಗಳನ್ನು ಪರಿಗಣಿಸಿರುವ ಡಬ್ಲ್ಯುಎಚ್ ಒ ಅವರ ವಾದವನ್ನು ಬೆಂಬಲಿಸಿದೆ.

ಈ ಹಿನ್ನಲೆಯಲ್ಲಿ ಕೊರೊನಾ ವೈರಸ್ ಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು ಎಂದು ವಿಜ್ಞಾನಿಗಳ ತಂಡ ವಿಶ್ವ ಆರೋಗ್ಯ ಸಂಸ್ಥೆಯನ್ನು ಕೋರಿದೆ.
ವಿಶ್ವ ಆರೋಗ್ಯ ಸಂಸ್ಥೆಗೆ ಸೇರಿದ ಕೊರೊನಾ ಎಪಿಡೆಮಿಕ್ ತಂತ್ರಜ್ಞಾನ ಮುಖ್ಯಸ್ಥೆ ಮಾರಿಯಾ ವಾನ್ ಕೆರ್ಕೋವ್ ಮಾಧ್ಯಮಗಳೊಂದಿಗೆ ಮಾತನಾಡಿ, ಗಾಳಿಯ ಮೂಲಕ ಕೂಡಾ ಕೊರೊನಾ ಹರಡುತ್ತದೆ ಎಂಬ ವಾದವನ್ನು ತಿರಸ್ಕರಿಸುವುದಿಲ್ಲ ಎಂದು ಹೇಳಿದ್ದಾರೆ.
ಕೊರೊನ ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಮತ್ತು ಮಾತನಾಡಿದಾಗ ಅವನ ಬಾಯಿಂದ ಅಥವಾ ಮೂಗಿನಿಂದ ಹೊರಬರುವ ಕಣಗಳಿಂದ … ಕೊರೊನಾ ವೈರಸ್ ಮತ್ತೊಬ್ಬರಿಗೆ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿತ್ತು. ಆದರೆ, ಕಳೆದ ಕೆಲವು ದಿನಗಳ ಹಿಂದೆ ವಿವಿಧ ದೇಶಗಳ ೨೩೯ ವಿಜ್ಞಾನಿಗಳು ಕೊರೊನಾ ವೈರಸ್ ಗಾಳಿಯಿಂದಲೂ ಹರಡಬಹುದು ಎಂದು ವರದಿಯನ್ನು ಡಬ್ಲ್ಯುಎಚ್ ಒಗೆ ಸಲ್ಲಿಸಿ, ಅದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಸಹ ಸಲ್ಲಿಸಿದ್ದರು.

loading...