ಗಾಳಿ ಮಳೆಯಿಂದಾಗಿ ಜನಜೀವನ ಅಸ್ಥವ್ಯಸ್ಥ

0
13

 

ಮುಂಡಗೋಡ: ಮಂಗಳವಾರ ಮಧ್ಯಾಹ್ನ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಭಾಗದಲ್ಲಿ ಸುರಿದ ಆಲಿಕಲ್ಲು ಸಹಿತ ಬಾರೀ ಗಾಳಿ ಮಳೆಯಿಂದಾಗಿ ಜನಜೀವನ ಅಸ್ಥವ್ಯಸ್ಥಗೊಂಡಿತ್ತು. ಗಾಳಿ ಮಳೆಯ ರಬಸಕ್ಕೆ ಬಹುತೇಕ ಕಡೆಗಳಲ್ಲಿ ಗಿಡ ಮರಗಳು ದರೆಗುರುಳಿವೆ. ಪಟ್ಟಣದ ಸಿವಿಲ್ ನ್ಯಾಯಾಲಯದ ಆವರಣದಲ್ಲಿದ್ದ ಮರ ವಿದ್ಯುತ್ ಲೈನ್ ಸಮೇತ ಶಿರಸಿ-ಹುಬ್ಬಳ್ಳಿ ಹೆದ್ದಾರಿ ಮೇಲೆ ಬಿದ್ದ ಪರಿಣಾಮ ಕೆಲ ಕಾಲ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತಲ್ಲದೇ ಸಂಜೆವರೆಗೆ ಪಟ್ಟಣದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿತ್ತು. ಬಳಿಕ ವಿದ್ಯುತ್ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ತೆರವು ಕಾರ್ಯಾಚರಣೆ ನಡೆಸಿದರು. ಗಾಳಿ ಮಳೆಯಿಂದಾಗಿ ಅರ್ಧದಷ್ಟು ಮಾವಿನ ಪಸಲು ಕೂಡ ಉದುರಿ ಬಿದ್ದಿರುವುದರಿಂದ ಬೆಳೆ ನಾಶದಿಂದಾಗಿ ಮಾವು ಬೆಳೆಗಾರರು ಕೂಡ ಕಂಗಾಲಾಗಿದ್ದಾರೆ. ಮಳೆಯ ಅವಾಂತರಿಂದ ಲೋಕಸಭಾ ಚುನಾವಣೆಗೆ ಮತ ಚಲಾಯಿಸಲು ಮನೆಯಿಂದ ಹೊರ ಬರಲು ಕೂಡ ಮತದಾರರು ಹೆದರುವಂತಾಗಿತ್ತು. ಈ ಅಡ್ಡ ಮಳೆಯಿಂದಾಗಿ ಜನರು ಸಾಕಷ್ಟು ಸಮಸ್ಯೆ ಎದುರಿಸಿದ್ದಂತೂ ಸುಳ್ಳಲ್ಲ.

loading...