ಗಾಳಿ ಸುದ್ದಿಗೆ ಸಾರ್ವಜನಿಕರು ಕಿವಿ ನೀಡಬಾರದು

0
413

ಕನ್ನಡಮ್ಮ ಸುದ್ದಿ
ಬೆಳಗಾವಿ : ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನೂರು ರೂ.ಗಳ ಬಾಂಡ್ ಪೇಪರ್‍ಗಳ ಮೇಲೆ ನಿವೇಶನ ಖರಿದೀಸಿ ಮನೆಗಳನ್ನು ನಿರ್ಮಾಣ ಮಾಡಿರುವ ಜನರ ಮನೆಗಳನ್ನು ತೆರವುಗೊಳಿಸಲು
ಕಾನೂನು ಕ್ರಮ ಕೈಗೊಳ್ಳುವುದಾಗಿ ಪ್ರಾದೇಶಿಕ ಆಯುಕ್ತ ಪಿ.ಎ. ಮೇಗಣ್ಣವರ ಹೇಳಿದ್ದಾರೆಂದು ಹೇಳಿ ಕೆಲವೊಂದು ಜನರು ಪ್ರಾದೇಶಿಕ ಆಯುಕ್ತರ ಹೆಸರು ಬಳಸಿಕೊಂಡು ನಗರದಲ್ಲಿ ಗಾಳಿ ಸುದ್ದಿ ಹಬ್ಬಿಸಿ ಜನರ ದಿಶಾ ಬದಲು ಮಾಡಿ ಪ್ರತಿಭಟನೆ ನಡೆಸಲು ಪ್ರೇರೆಪಿಸುತ್ತಿದ್ದಾರೆ.
ನಗರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಎದ್ದಿರುವ ಈ ಗಾಳಿ ಸುದ್ದಿಗೆ ಗುರುವಾರ ಪ್ರಾದೇಶಿಕ ಆಯುಕ್ತ ಪಿ.ಎ.ಮೇಗಣ್ಣವರ ಅವರು, ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿ ನೂರು ರೂ.ಗಳ ಬಾಂಡ್ ಪೇಪರ್‍ಗಳ ಮೇಲೆ ನಿವೇಶನ ಖರೀದಿಸಿ ನಿರ್ಮಿಸಿರುವ ಮನೆಗಳು ಕಾನೂನು ಬಾಹೀರವಾಗಿವೆ. ಇವುಗಳನ್ನು ತೆರವುಗೊಳಿಸಲು ಕಾನೂನು ಕ್ರಮ ಕೈಗೊಳ್ಳುವುದಾಗಿ ತಾವು ಹೇಳಿಲ್ಲ. ತಮ್ಮಗೆ ಈ ವಿಷಯದಲ್ಲಿ ಯಾವುದೇ ಕ್ರಮ ಕೈಗೊಳ್ಳಲು ಅಧಿಕಾರವಿಲ್ಲ. ಈ ವಿಷಯ ಮಹಾನಗರ ಪಾಲಿಕೆ, ಬುಡಾ ಹಾಗೂ ಜಿಲ್ಲಾಧಿಕಾರಿಗಳಿಗೆ ಸಂಬಂಧಿಸಿದ್ದು ಎಂದು ತಿಳಿಸಿದ್ದಾರೆ.

loading...