ಗುಂಪುಗಾರಿಕೆ, ಬಣ ರಾಜಕೀಯ ಕಾಂಗ್ರೆಸ್ ನಲ್ಲಿ ಮಾತ್ರ, ಬಿಜೆಪಿಯಲ್ಲಿಲ್ಲ: ಸಚಿವ ಈಶ್ವರಪ್ಪ

0
35

 

ಬೆಳಗಾವಿ

ಗುಂಪುಗಾರಿಕೆ, ಬಣ ರಾಜಕೀಯ ಕಾಂಗ್ರೆಸ್ ನಲ್ಲಿ ಮಾತ್ರ‌ ಬಿಜೆಪಿಯಲ್ಲಿ ಅಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದರು.

ಶನಿವಾರ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಜಲಸಂನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮನೆಯಲ್ಲಿ ರಾಜಕೀಯ ಚಟುವಟಿಕೆಗಳು ನಡೆದಿರುವುದರಿಂದಲೇ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಿದೆ. ಸಚಿವ ಜಾರಕಿಹೊಳಿ ಅವರನ್ನು ನಂಬಿದವರಿಗೆ ಸಚಿವ ಸ್ಥಾನ ಕೊಡಿಸಲು ಲಾಭಿ ಮಾಡುವದರಲ್ಲಿ ತಪ್ಪಿಲ್ಲ. ಸಿ.ಪಿ.ಯೋಗೇಶ್ವರ ಅವರಿಗೆ ಸಚಿವ ಸ್ಥಾನ ಕೊಡಿಸಲು ಅವರು ಪ್ರಯತ್ನ ಮಾಡುವದರಲ್ಲಿ ತಪ್ಪಿಲ್ಲ. ಕೆಲವು ಶಾಸಕರು ಬಿಜೆಪಿಗೆ ಬಂದು ಸರ್ಕಾರ ರಚನೆಗೆ ತ್ಯಾಗ ಮಾಡಿದ್ದಾರೆ ಎಂದರು.

ಕುರುಬ ಸಮುದಾಯವನ್ನು ಎಸ್ ಟಿ ವರ್ಗಕ್ಕೆ ಸೇರಿಸಬೇಕೆಂದು ಹೋರಾಟ ನಡೆಸಿದ್ದೇವೆ. ನಮ್ಮ ಹೋರಾಟಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಮತ ಇದೆ. ಈ ಕುರಿತು ಶನಿವಾರ ಬೆಳಗಾವಿಯಲ್ಲಿ ಸಭೆ ಮಾಡುತ್ತೇವೆ‌. ಭಾನುವಾರ ಬಾಗಲಕೋಟೆಯಲ್ಲಿ ಕುರುಬ ಸಮಾಜದ ವಿಭಾಗ ಮಟ್ಟದ ಸಭೆ ಮಾಡುತ್ತೇವೆ ಎಂದರು.

ಸರಕಾರ ಕುರುಬ ಸಮಾಜವನ್ನು ಎಸ್.ಟಿ ವರ್ಗಕ್ಕೆ ಸೇರಿಸುವದಕ್ಕಾಗಿ ಅಧ್ಯಯನ ಸಮೀತಿ ರಚಿಸಿದೆ. ಸಮೀತಿ ಸರಕಾರಕ್ಕೆ ವರದಿ ಸಲ್ಲಿಸಿದ ಬಳಿಕ ನಿರ್ಧಾರ ಹೊರಬೀಳಲಿದೆ ಎಂದು ಹೇಳಿದರು.

ಗ್ರಾಮ ಪಂಚಾಯತಿ ಚುನಾವಣೆಗೆ ವಿಶೇಷ ಆದ್ಯತೆ ಕೊಟ್ಟಿದ್ದೇವೆ ಈ ಚುನಾವಣೆಯಲ್ಲಿ,ನಮ್ಮ ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುತ್ತೇವೆ. ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಕುರಿತು ಡಿಸೆಂಬರ್ 4 ರಂದು ಬಿಜೆಪಿ ಕೋರ್ ಕಮೀಟಿ ಮೀಟೀಂಗ್ ಇದೆ. 5 ರಂದು ಬೆಳಗಾವಿಯಲ್ಲೇ ಬಿಜೆಪಿ ರಾಜ್ಯಕಾರ್ಯಕಾರಿಣೆ ಸಭೆ ನಡೆಯಲಿದೆ ,ಸಭೆಯಲ್ಲಿ ಅಭ್ಯರ್ಥಿ ಆಯ್ಕೆಯ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಿದರು.

loading...