ಗುಜರಾತ್‌ನಲ್ಲಿ ಕಟ್ಟಡ ಕುಸಿತ : ಮಳೆ ಅವಗಢಕ್ಕೆ 26 ಸಾವು

0
3

ಆನಂದ್- ಗುಜರಾತಿನ ಆನಂದ್ ಜಿಲ್ಲೆಯ ಖಂಭಟ್ ಪಟ್ಟಣದಲ್ಲಿ ಸೋಮವಾರ ತಡರಾತ್ರಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಆದರೆ ಯಾವುದೇ ಪ್ರಾಣ ಹಾನಿಯಾಗಿಲ್ಲ ಮಳೆಯ ಅವಢದಲ್ಲಿ ಈವರೆಗೆ 26 ಜನರು ಮೃತಪಟ್ಟಿದ್ದಾರೆ.

ಆದರೆ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಯಾರಿಗೂ ಗಾಯವಾಗಿಲ್ಲ .ಆದರೆ ಅಕ್ಕಪಕ್ಕದ ಕಟ್ಟಡಗಳಿಗೆ ಹಾನಿಯಾಗಿದೆ.
ಜಾಂಡಾ ಚೌಕ್ ಪ್ರದೇಶದ ಸಮೀಪವಿರುವ ಮೂರು ಅಂತಸ್ತಿನ ಹಳೆಯ ಕಟ್ಟಡದಲ್ಲಿ ಹಿಂದೆ ಸಾರ್ವಜನಿಕ ವಲಯದ ಬ್ಯಾಂಕ್ ಇತ್ತು. ನಗರದಲ್ಲಿ ಇತ್ತೀಚಿಗೆ ಸುರಿದ ಮಳೆಯ ನಂತರ ಕಟ್ಟಡ ಕುಸಿದಿದೆ.

ವಿಶೇಷವೆಂದರೆ, ಭಾರೀ ಮಳೆಯ ಕಾರಣ ಈವರೆಗೆ ರಾಜ್ಯದಾದ್ಯಂತ ಗೋಡೆ , ಮನೆ ಕುಸಿತದ ಘಟನೆಗಳಲ್ಲಿ 26 ಮಂದಿ ಸಾವನ್ನಪ್ಪಿದ್ದಾರೆ. ವಡೋದರಾದಲ್ಲಿ ಗೋಡೆ ಕುಸಿದು ನಾಲ್ಕು ಜನರು ಅಹಮದಾಬಾದ್‌ನ ಬೋಪಾಲ್‌ , ಮೊರ್ಬಿಯಲ್ಲಿ 8, ಭರೂಚ್ ಗ್ರಾಮದಲ್ಲಿ 3 ಬಾಲಕಿಯರು ಖೇಡಾದ ನಾಡಿಯಾಡ್‌ನಲ್ಲಿ ಹಳೆಯ ಕಟ್ಟಡ ಕುಸಿದು ನಾಲ್ವರು ಮೃತಪಟ್ಟಿದ್ದಾರೆ. ಸೋಮವಾರ ಅಹಮದಾಬಾದ್‌ನ ಬೋಪಾಲ್‌ನಲ್ಲಿ ನೀರಿನ ಟ್ಯಾಂಕ್ ಕುಸಿದು ಮೂವರು ಸಾವನ್ನಪ್ಪಿದ್ದಾರೆ.

loading...