ಗುರುವಿನ ಮಹಿಮೆ ಬಲ್ಲವರಾರು : ಮಹಾಲಿಂಗ

0
47

ಗುರುವಿನ ಮಹಿಮೆ ಬಲ್ಲವರಾರು : ಮಹಾಲಿಂಗ
ಕನ್ನಡಮ್ಮ ಸುದ್ದಿ-ಗೋಕಾಕ : ‘ಜ್ಞಾನಿ ಹೋಗಿದ್ದರೂ ಚೆಂದ’ ಎಂದು ಮಹಾಕವಿ ಮಹಾಲಿಂಗರಂಗರು ಹೇಳಿದ್ದಾರೆ. ಜ್ಞಾನಿ ಮೂಢಮರುಳನಂತಿರಲಿ, ಭಿಕ್ಷÄಕ ಬೈರಾಗಿಯಾಗಿರಲಿ, ಹರುಕು ಚಿಂದಿ ಧರಿಸಿರಲಿ, ಬೆತ್ತಲಾಗಿರಲಿ ಸುರಾಪಾನಮತ್ತಿನಲ್ಲಿರಲಿ, ಆರೂಢ ವ್ಯವಸ್ಥೆಂiÀiಲ್ಲಿರಲಿ, ವಾಗ್ಮಿ ಪಚಿಡಿತನಿರಲಿ, ಮೌನವಿರಲಿ ಹತ್ತು ಬೆರಳಿಗೆ ಊಂಗುರ ಧರಿಸಿ ಪೀಠ ಪಲ್ಲಕ್ಕಿ ವೈಭವದಿ ಮೆರೆಯಲಿ, ಕಾವಿಧರಿಸಲಿ ಗಡ್ಡಜಟೆ ಬಿಟ್ಟಿರಲಿ-ಬಿಡದಿರಲಿ ಯೋಗಿ ಹೆಗಿದ್ದರೂ ಚಂದ ಗುರುವಿನ ಮಹಿಮೆ ಬಲ್ಲವರಾರು ಅಂದಿದ್ದಾರೆ ಬಲ್ಲವರು ಹಾಗೇ ನಮ್ಮ ಶಿವಾನಚಿದ(ಚಿಕ್ಕು)ಸ್ವಾಮಿಗಳು ಕೂಡ ಮರುಳ ಸಂತ ಅವರೊಬ್ಬ ಅಲೌಕಿಕ ವಾಕ್‌ಸಿದ್ಧಿ ಪುರುಷ ಹಿಂದಿನ ಜನ್ಮದ ತಪೋಭ್ರಷ್ಟ ಶಿವಯೋಗಿಯೇ ಹೀಗೆ ಭೂಮಿಗೆ ಇಳಿದಿದ್ದಾರೆ. ಇದು ಬಾಲ್ಯದಿಂದಲೂ ಕಂಡ ಮನಗಂಡ ಮಾತು ಎಂದು ಹಿರಿಯ ಸಾಹಿತಿ ಮಹಾಲಿಂಗ ಮಂಗಿ ಯವರು ಅಭಿಪ್ರಾಯಪಟ್ಟರು. ಶಿವಾನಚಿದ(ಚಿಕ್ಕೂ)ಸ್ವಾಮಿಗಳ ೫೬ ನೇ ಜನ್ಮದಿನೋತ್ಸವದಲ್ಲಿ ಭಾಗವಹಿಸಿ ಅತಿಥಿಗಳಾಗಿ ಮಾತನಾಡಿದರು.
ಪ್ರೊÃ. ಚಂದ್ರಶೇಖರ ಅಕ್ಕಿ ಖ್ಯಾತವಾಗ್ಮಿ, ಚಿಂತಕರು ಮುಖ್ಯ ಅತಿಥಿಗಳಾಗಿ ಮಾತನಡುತ್ತ ಕೀರ್ತಿಶೇಷ ಶ್ರಿà ನಿಂಗಯ್ಯಸ್ವಾಮಿ ಪೂಜಾರಿ ನಿಜಕ್ಕೂ ಮರೆಯಲಾಗದ ಮಹಾನುಭಾವರು ಅವನಾರವ ಇವನಾರವ ಅನ್ನದೆ ಜಾತಿ-ಮತ, ಬಡವ-ಬಲ್ಲಿದರೆನ್ನದೆ ದೂರ್ಬಲ ದಲಿತ ಶೋಷಿತರ ಪರ ಹೋರಾಟ ಸೇವೆ ಮಾಡುತ್ತ ಸಕಲ ಜೀವಾತ್ಮರಿಗೆ ಲೇಸು ಬಯಸುತ್ತ ಸರ್ವರಿಂದಲೂ ಲೇಸೆನಿಸಿಕೊಂಡು ಬಾಳಿದ ಪುಣ್ಯ ಜೀವಿಗಳು ಎಂದು ಹೇಳಿದರು. ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಶ್ರಿà ವಿಜಯಶಾಸ್ತಿçà ವಹಿಸಿದ್ದರು. ‘ಜ್ಞಾನ ಮಂದಿರ’ ಆಧ್ಯಾತ್ಮ ಕೇಂಧ್ರದ ಧರ್ಮಧರ್ಶಿನಿ ಸುವರ್ಣಾ ಹೊಸಮಠ ಅಧ್ಯಕ್ಷತೆಯನ್ನು ವಹಿಸಿದ್ದರು.
ಶಿವಾನಂದ(ಚಿಕ್ಕೂ) ಸ್ವಾಮಿಗಳ ಹುಟ್ಟುಹಬ್ಬವನ್ನು ಕೆಕ್ ಕತ್ತರಿಸುವ ಶುಭ ಹಾರೈಸುವ ಮುಖಾಂತರ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಿವಾನಂದ (ಚಿಕ್ಕೂ) ಪೂಜಾರಿ ಅವರು ನೂರಾರು ಅಭಿಮಾನಿಗಳು ಹಾಗೂ ಅಶೋಕ ಪೂಜಾರಿ, ಶಂಕರಯ್ಯ ಪೂಜಾರಿ, ದುಂಡಯ್ಯ ಪೂಜಾರಿ, ಸಾವಳಿಗೆಪ್ಪಾ ನಂದಗಾಂವಿ, ಮಹಾಂತೇಶ ಮಠಪತಿ, ಶ್ರಿÃ ಶೈಲ ಪೂಜಾರಿ, ರಾಜು ಮಾಡಲಗಿ, ರಾಜು ನಂದಗಾಂವಿ, ಹನಮಂತ ಕಾಳಮ್ಮಗುಡಿ, ಸಂಜಯ ಪೂಜಾರಿ ಮುಂತಾದ ನೂರಾರು ಜನ ಉಪಸ್ಥಿತರಿದ್ದರು.

loading...