ಗೂಬೆ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

0
16

ಬೆಳಗಾವಿ
ಮಾರಾಟ ಮಾಡುವ ಉದ್ದೇಶದಿಂದ ಗೂಬೆ ತಂದಿದ್ದ ವ್ಯಕ್ತಿಯೊರ್ವನನ್ನು ಶುಕ್ರವಾರ ರಾತ್ರಿ ಬೆಳಗಾವಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಬಂಧಿಸಿ, ಗೋಬೆ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಗೋಕಾಕ ತಾಲೂಕಿನ ಮಕ್ಕಳಗೇರಿ ಗ್ರಾಮದ ರಾಚಯ್ಯ ಈರಯ್ಯ ಹಿರೇಮಠ (೪೩) ಬಂಧಿತ. ಮಕ್ಕಳಗೇರಿ ಗ್ರಾಮದಲ್ಲಿನ ರಾಚಯ್ಯ ಹತ್ತಿರ ಗೂಬೆ ಇರುವ ಬಗ್ಗೆ ಮಾಹಿತಿ ಪಡೆದ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿ ಬಳಿ ಇರುವ ೧೫೦೦ ಗ್ರಾಂ ತೂಕದ ಗೂಬೆ ಹಾಗೂ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ರಾಚಯ್ಯ ವಿರುದ್ಧ ಪ್ರಕರಣ ದಾಖಲಿಸಿ, ಗೋಕಾಕದ ೨ನೇ ಹೆಚ್ಚುವರಿ ನ್ಯಾಯಾಲಯದ ಮುಂದೆ ರಾಚಯ್ಯನನ್ನು ಹಾಜರಪಡಿಸಿ, ಹೆಚ್ಚಿನ ವಿಚಾರಣೆಗಾಗಿ ರಾಮದುರ್ಗದ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ದಾಳಿಯಲ್ಲಿ ಅರಣ್ಯ ಸಂಚಾರಿ ದಳದ ಪಿಎಸ್‌ಐ ರೋಹಿಣಿ ಪಾಟೀಲ ಅವರ ನೇತೃತ್ವದಲ್ಲಿ ಸಿಬ್ಬಂದಿ ಎಸ್.ಆರ್. ಅರಿಬೆಂಚಿ, ಕೆ.ಡಿ.ಹಿರೇಮಠ, ಬಿ.ಬಿ.ಇಂಗಳಗಿ ಪಾಲ್ಗೊಂಡಿದ್ದರು.

loading...