ಗೆಳೆಯರುರನ್ನು ಕಳೆದುಕೊಂಡಾಗ

0
31

ಪ್ರಾಣ ಸ್ನೆÃಹಿತರಂತೆ ಇದ್ದವರು ಈಗ ದೂರವಾಗಿದ್ದಾರೆ ಎನ್ನುವ ಮಾತು ನಮ್ಮ ನಡುವಿನಿಂದಲೇ ಬರುತ್ತದೆ. ಯಾಕೆಂದರೆ ಕೆಲವರ ಸ್ನೆÃಹ ಆ ರೀತಿಯಾಗಿರುತ್ತದೆ. ಅವರು ದೂರವಾಗಲು ಸಾಧ್ಯವೇ ಇಲ್ಲ ಎಂದು ನಾವು ಭಾವಿಸಿರುತ್ತೆÃವೆ. ಆದರೆ ಪರಿಸ್ಥಿತಿ ಅವರನ್ನು ದೂರ ಮಾಡಿರುತ್ತದೆ. ಜೀವಕ್ಕೆ ಜೀವ ಕೊಡುವ ಸ್ನೆÃಹಿತರು ಕೂಡ ದೂರವಾಗುತ್ತಾರೆ.ಆದರೆ ಸ್ನೆÃಹಿತರಿಂದ ದೂರವಾಗಲು ನೋವನ್ನು ಸಹಿಸುವುದು ತುಂಬಾ ಕಷ್ಟವಾಗುತ್ತದೆ. ಯಾಕೆಂದರೆ ಅವರೊಂದಿಗೆ ಆ ರೀತಿಯ ಭಾಂದವ್ಯ ಬೆಸೆದಿರುತ್ತದೆ. ಪ್ರಿÃತಿಸಿದವರು ದೂರವಾಗುವಾಗ ಕಾಡುವ ನೋವಿಗಿಂತ ಸ್ನೆÃಹಿತರು ದೂರವಾದಾಗ ಕಾಡುವ ನೋವು ಹೆಚ್ಚು. ಇದನ್ನು ಕೆಲವೊಂದು ಅಧ್ಯಯನಗಳು ಕೂಡ ದೃಢಪಡಿಸಿಕೊಂಡಿವೆ.ಸ್ನೆÃಹಿತರನ್ನು ನಾವು ತುಂಬಾ ವಿಶ್ವಾಸಿಗಳೆಂದು ಭಾವಿಸಿರುತ್ತೆÃವೆ. ಎಷ್ಟೆÃ ಗೌಪ್ಯ ಅಥವಾ ವೈಯಕ್ತಿಕ ವಿಚಾರವಾದರೂ ಅವರೊಂದಿಗೆ ಏನನ್ನೂ ಮುಚ್ಚಿಡುವುದಿಲ್ಲ. ಇಂತಹ ವಿಷಯಗಳನ್ನು ನಾವು ಸಂಗಾತಿಗಳೊಂದಿಗೂ ಹಂಚಿಕೊಳ್ಳಲ್ಲ. ಆದರೆ ಸ್ನೆÃಹಿತ ವಿಶ್ವಾಸಘಾತ ಮಾಡಿದಾಗ ಭೂಮಿಯೇ ಬಿರುಕು ಬಿಟ್ಟಂತಹ ಭಾವನೆಯಾಗುತ್ತದೆ.
ಪರಿಸ್ಥಿತಿ ಏನೇ ಆಗಿರಲಿ ಸ್ನೆÃಹಿತರು ಮಾತ್ರ ಯಾವಾಗಲೂ ನಮ್ಮ ಪರವಾಗಿ ನಿಲ್ಲುತ್ತಾರೆ. ಪ್ರಿಯತಮೆಯೊಂದಿಗಿನ ಪ್ರಥಮ ಚುಂಬನವಾಗಿರಲಿ ಅಥವಾ ಪ್ರಿಯತಮೆ ಕೈಕೊಟ್ಟ ಸಂದರ್ಭವಿರಲಿ, ಪ್ರತಿಯೊಂದನ್ನು ಹಂಚಿಕೊಳ್ಳುತ್ತೆÃವೆ. ಪ್ರತಿಯೊಂದು ವಿಚಾರವನ್ನು ಸ್ನೆÃಹಿತರೊಂದಿಗೆ ಹಂಚಿಕೊಳ್ಳುತ್ತೆÃವೆ. ಆದರೆ ಸಂಬಂಧ ದೂರವಾದಾಗ ನಮಗೆ ಏನೋ ಕಳಕೊಂಡ ಭಾವನೆಯಾಗುತ್ತದೆ.
ಸ್ನೆÃಹಿತರನ್ನು ಕಳಕೊಂಡಾಗ ನಮಗೆ ತುಂಬಾ ಕೆಟ್ಟ ಭಾವನೆಯಾಗುತ್ತದೆ. ಇದರ ಬಗ್ಗೆ ಸುತ್ತಲಿನವರಿಗೆ ವಿವರಿಸುವುದು ತುಂಬಾ ಕಠಿಣ. ಇದು ತುಂಬಾ ಭಯಾನಕ ಮತ್ತು ಗೊಂದಲದಿಂದ ಕೂಡಿರುತ್ತದೆ.
ಪ್ರೆÃಮ ಸಂಬಂಧ ದೂರವಾದಾಗ ಬಳಿಗೆ ಬಂದು ನಿಂತು ಸಮಾಧಾನ ಹೇಳುವುದು ಸ್ನೆÃಹಿತರು. ಅವರು ಪ್ರತಿಯೊಂದು ಹಂತದಲ್ಲೂ ಸಮಾಧಾನ ಮಾಡುತ್ತಾರೆ. ಸ್ನೆÃಹಿತರನ್ನು ಕಳಕೊಂಡಾಗ ಪ್ರೆÃಮಿಗಳು ಹಲವಾರು ರೀತಿಯಿಂದ ಸಮಾಧಾನಿಸಲು ಪ್ರಯತ್ನಿಸಿದರೂ ಸ್ನೆÃಹಿತರು ಯಾವತ್ತಿದ್ದರೂ ಸ್ನೆÃಹಿತರೇ. ಅವರ ಜಾಗವನ್ನು ಮತ್ತೊಬ್ಬರಿಂದ ತುಂಬಲು ಸಾಧ್ಯವಿಲ್ಲ.

loading...