ಗೆಳೆಯರು ಹೇಳಿಕೊಡುವ ಜೀವನದ ಪಾಠ

0
21

ಸ್ನೇಹಿತರಿಲ್ಲದ ಜೀವನವನ್ನು ಕಲ್ಪಿಸಲೂ ಸಾಧ್ಯವಿಲ್ಲ. ಸ್ನೇಹ ಪರಿಪೂರ್ಣವಾಗಿದ್ದರೇ ಜೀವನವೂ ಪರಿಪೂರ್ಣ ಎನನ್ಬಹುದು. ಜೀವನದಲ್ಲಿ ಉತ್ತಮ ಸ್ನೇಹಿತರಿದ್ದರೆ ಸುಂದರ ಜೀವನಕ್ಕೆ ಮತ್ತೇನೂ ಬೇಡ ಅನ್ನುವಂತಿರುತ್ತದೆ. ಅಷ್ಟಕ್ಕೂ ನಿಜವಾದ ಸ್ನೇಹಿತರು ಎಂದರೆ ಯಾರು? ನಿಮ್ಮ ಅಗತ್ಯದ ಸಮಯದಲ್ಲಿ ನಿಮ್ಮ ನೆರವಿಗೆ ಬರುವವರು ಹಾಗೂ ಅವರ ಅಗತ್ಯದ ಸಮಯದಲ್ಲಿ ನಿಮ್ಮ ನೆರವನ್ನು ಪಡೆಯುವವರು. ಹಾಗೂ ಈ ನೆರವು ನೀಡುವ ಮತ್ತು ಪಡೆಯುವ ವ್ಯವಹಾರದಲ್ಲಿ ಯಾವುದೇ ಸ್ವಾರ್ಥ ಅಥವಾ ಲಾಭ ಪಡೆಯುವ ಪ್ರಶ್ನೆಯೇ ಬರುವುದಿಲ್ಲ.
ಅಪ್ಪಟ ಸ್ನೇಹವೆಂದರೆ ಅಷ್ಟು ಮಾತ್ರವಲ್ಲ, ನಮ್ಮ ತಪ್ಪುಗಳನ್ನು ಗುರುತಿಸಿ ಸರಿಪಡಿಸಲು, ಸರಿಯಾದ ಪಾಠದ ಮೂಲಕ ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ಬಾಳಲು ನೆರವಾಗುವುದು ಮುಖ್ಯವಾಗಿದೆ. ನಿಮ್ಮ ವಯಸ್ಸನ್ನು ಸ್ನೇಹಿತರಿಂದ ಅಳೆಯಿರಿ, ವರ್ಷಗಳಿಂದಲ್ಲ ಎಂಬ ಆಂಗ್ಲ ನಾಣ್ಣುಡಿಯಿದೆ.
ನಿಮ್ಮ ಸ್ನೇಹಿತವೃಂದದಲ್ಲಿರುವ ವ್ಯಕ್ತಿಗಳು ಯಾರು ಎಂದು ಮಾಹಿತಿ ನೀವು ಯಾವ ಬಗೆಯ ವ್ಯಕ್ತಿ ಎಂಬುದನ್ನು ತಿಳಿಸುತ್ತದೆ. ನಿಮ್ಮ ಸ್ನೇಹಿತರ ವೃಂದದಲ್ಲಿ ಒಳ್ಳೆಯ ಹಾಗೂ ಜೀವಕ್ಕೆ ಜೀವಕೊಡುವ ವ್ಯಕ್ತಿಗಳಿದ್ದರೆ ನೀವು ಅವರಿಂದ ಬಹಳಷ್ಟನ್ನು ಕಲಿಯಬಹುದುಕೆಲವೊಮ್ಮೆ ಪರಿಸ್ಥಿತಿ ನಿಮ್ಮನ್ನು ಯಾವುದೋ ತೊಂದರೆ ಅಥವಾ ಸಂದಿಗ್ಧತೆಯಲ್ಲಿ ಸಿಲುಕಿಸಬಹುದು. ಈ ಸಮಯದಲ್ಲಿ ನಿಮ್ಮ ಮೆದುಳು ಬೇರೊಂದು ಕೋನದಿಂದ ಯೋಚಿಸಲಾರದು. ಆದರೆ ಬೇರೆ ದೃಷ್ಟಿಕೋನದಿಂದ ನಿಮ್ಮ ಸ್ನೇಹಿತರು ಈ ತೊಂದರೆಯನ್ನು ಕಂಡುಕೊಂಡು ಸೂಕ್ತ ಸಲಹೆ ನೀಡಬಲ್ಲರು. ಜೀವನದಲ್ಲಿ ನೀವು ಎದುರಿಸುವ ತೊಂದರೆಗಳಿಂದ ಹೊರಬರಲು ಮಾತ್ರವಲ್ಲ, ಈ ಪರಿಸ್ಥಿತಿಗೆ ಒಳಗಾಗದೇ ಇರಲು ಸ್ನೇಹಿತರು ನೀಡುವ ಮುನ್ಸೂಚನೆ ಮತ್ತು ಎಚ್ಚರಿಕೆಗಳೂ ಮುಂದೆ ಎದುರಾಗಬಹುದಾದ ಭಾರೀ ಗಂಡಾಂತರದಿಂದ ನಿಮ್ಮನ್ನು ರಕ್ಷಿಸಬಲ್ಲವು.
ಇಂದಿನ ದಿನಗಳಲ್ಲಿ ಪ್ರಥಮ ಬಾರಿಯ ಭೇಟಿಯನ್ನು ಡೇಟಿಂಗ್ ಮೂಲಕ ಅನುಸರಿಸುವ ಪರಿಪಾಠವಿದೆ. ಇದರಲ್ಲಿ ಪರಸ್ಪರರನ್ನು ಅರಿತುಕೊಳ್ಳುವ ಮೂಲಕ ಈ ವ್ಯಕ್ತಿ ನಮ್ಮ ಪ್ರೀತಿಗೆ ಅರ್ಹನಾಗುತ್ತಾನೋ/ಳೋ ಎಂಬುದನ್ನು ಕಂಡುಕೊಳ್ಳುವ ಒಂದು ಅವಕಾಶವಾಗಿದೆ. ಆದರೆ ಈ ಸಂದರ್ಭದಲ್ಲಿ ಹೆಚ್ಚಿನವರು ದುಗುಡ, ಭಯವನ್ನು ಅನುಭವಿಸುತ್ತಾರೆ. ಆದರೆ ಈ ಸಂದರ್ಭದಲ್ಲಿ ಸ್ನೇಹಿತರೇ ಹುರಿದುಂಬಿಸಿ ಧೈರ್ಯ ಹೇಳಿ ಮುಂದುವರೆಯಲು ಪ್ರೋತ್ಸಾಹಿಸುತ್ತಾರೆ.
ಚಿ ಜಿಡಿieಟಿಜ iಟಿ ಟಿeeಜ is ಚಿ ಜಿಡಿieಟಿಜ iಟಿಜeeಜ ಎಂಬ ಆಂಗ್ಲ ನಾಣ್ಣುಡಿಯಂತೆ ನೀವು ಯಾವುದೋ ಕಷ್ಟವನ್ನು ಎದುರಿಸುತ್ತಿದ್ದು ಸಹಾಯ ಅಗತ್ಯವಿದ್ದಾಗ ನಿಮ್ಮ ನೆರವಿಗೆ ಬಂದು ತನ್ನಿಂದಾದ ಸಹಾಯವನ್ನು ನೀಡುವವನೇ ನಿಜವಾದ ಸ್ನೇಹಿತನಾಗಿರುತ್ತಾನೆ. ಕಷ್ಟಕಾಲದಲ್ಲಿಯೂ ಎದೆಗುಂದದೇ ಎದುರಿಸಿ ಸಮಸ್ಯೆಗಳನ್ನು ಪರಿಹರಿಸಲು ಇವರು ನೆರವಾಗುತ್ತಾರೆ. ಸ್ನೇಹಿತರ ಅತ್ಯುತ್ತಮ ಪ್ರಯೋಜನವೆಂದರೆ ಇದೇ.ಒಬ್ಬರ ಜೊತೆಯಲ್ಲಿದ್ದು ಸಮಯ ಕಳೆಯುವ ಮೂಲಕ ಬಾಂಧವ್ಯದ ಮಹತ್ವವನ್ನು ಅರಿಯಲು ಸ್ನೇಹಿತರಿಂದ ಮಾತ್ರವೇ ಸಾಧ್ಯ. ಎಷ್ಟೋ ಸಂದರ್ಭದಲ್ಲಿ ನಮಗೆ ಯಾರಾದರೂ ನಮ್ಮವರು ಆ ಕ್ಷಣ ಆ ಸ್ಥಳದಲ್ಲಿದ್ದರೆ ಸಾಕು, ಆನೆಯ ಬಲ ಬಂದಂತಾಗುತ್ತದೆ. ನಿಮ್ಮ ಕುಟುಂಬದ ಸದಸ್ಯರ ಹೊರತಾಗಿ ನಿಮ್ಮ ಈ ಘಳಿಗೆಯಲ್ಲಿ ನಿಮಗೆ ಆಪ್ತರು ಎಂದು ಅನ್ನಿಸಿದರೆ ಅವರು ಗೆಳೆಯರು ಮಾತ್ರ.ಕಾಲೇಜಿನ ದಿನಗಳಲ್ಲಿ ಕೆಲವು ತರಗತಿಗಳಿಗೆ ಹಾಜರಾಗದೇ ನೇರವಾಗಿ ಸಿನೇಮಾ ಅಥವಾ ಕ್ರೀಡಾಪಂದ್ಯವನ್ನು ವೀಕ್ಷಿಸುವ ಮಜಾವನ್ನು ಜೀವನದಲ್ಲೆಂದೂ ಮರೆಯಲು ಸಾಧ್ಯವಿಲ್ಲ. ಹೀಗೆ ಚಕ್ಕರ್ ಹಾಕಲು ಅಗತ್ಯವಿರುವ ಚಾಕಚಕ್ಯತೆಯನ್ನು ಸ್ನೇಹಿತರು ಮಾತ್ರವೇ ಕಲಿಸಬಲ್ಲರು.
ಪ್ರೀತಿಯನ್ನು ನಿವೇದಿಸುವ ಹಾಗೂ ಅರ್ಥ ಮಾಡಿಕೊಳ್ಳುವ ಕಲೆಯನ್ನು ಕೇವಲ ನಿಮ್ಮ ಸ್ನೇಹಿತರು ಮಾತ್ರವೇ ಕಲಿಸಬಲ್ಲರು. ಇನೊಂದರ್ಥದಲ್ಲಿ ಸ್ನೇಹದಿಂದಲೇ ಪ್ರೀತಿಯ ಭಾಷೆಯೂ ಹೊಮ್ಮಬಲ್ಲದು ಅಲ್ಲವೇ?

loading...