ಗೊಂದಲದ ಗೂಡಾದ ಸಾಮಾನ್ಯ ಸಭೆ, ಹೊರ ನೆಡೆದ ಜೆಡಿಎಸ್‌ ಸದಸ್ಯರು

0
48

ನಾಲತವಾಡ: ‘ನಮಗೆ ಉತ್ತರ ಕೊಟ್‌ ಹೊರ್ಗ ಹೋಗ್ಬೇಕ್‌ ನೀ, ಮತ್ತ ನೋಡ.. ಹೊಳ್ಳಿ ಬಂದ್ಯಂದ್ರ ಮತ್ತ ಕಾಲಃ ತಗೀತಿವಿ’ ಸ್ಥಳಿಯ ಪ.ಪಂ ಯ ಸಾಮಾನ್ಯ ಸಭೆಯಲ್ಲಿ ಜೆಡಿಎಸ್‌ನ ಮಹಿಳಾ ಸದಸ್ಯೆಯೊಬ್ಬರು ಸಿಓ ಮಾರುತಿ ನಡುವಿನಕೇರಿ ಅವರಿಗೆ ನೇರವಾಗಿ ಶಾಕ್‌ ಕೊಟ್ಟ ಘಟನೆ ನೆಡೆಯಿತು.
ಸ್ಥಳಿಯ ಪ.ಪಂ ಸಾಮಾನ್ಯಸಭೆಯಲ್ಲಿ ಮಹಿಳಾ ಸದಸ್ಯರಿಗೆ ವಿಷಯಗಳ ಚರ್ಚೆ ವೇಳೆ ಸಿಓ ಏಕವಚನ ಬಳಸಿದ್ದಾರೆ ಎಂದು ಆರೋಪಿಸಿದ ಹಿನ್ನಲೆಯಲ್ಲಿ ಸಭೆಯನ್ನು ಬಹಿಷ್ಕರಿಸಿ ಹೊರ ಬಂದು ಸಿಓ ಅವರೊಂದಿಗೆ ವಾದಕ್ಕಿಳಿದ ಜೆಡಿಎಸ್‌ ಸದಸ್ಯರು ಆಕ್ರೋಶಗೊಂಡು ಮಾತನಾಡುತ್ತಿದ್ದರು, ಇವರ ಮಾತಿಗೆ ಬೆಲೆ ನೀಡದೇ ಪ.ಪಂ ಆವರಣದಿಂದ ಹೊರ ನೆಡೆದ ಸಿಓ ಅವರ ವರ್ತನೆಗೆ ಆಕ್ರೋಶಗೊಂಡ ಪರಿ ಇದು.
ಹಿನ್ನಲೆ: ಶನಿವಾರ ಕರೆಯಲಾಗಿದ್ದ ಸಭೆಯಲ್ಲಿ ಕುಡಿಯುವ ನೀರಿನ ಅನುದಾನ ಬಳಕೆ ಕುರಿತು ಆಯಾ ವಾರ್ಡಿನಲ್ಲಿ ಎಷ್ಟು ಅನುದಾನ ಅವಶ್ಯವಿದೆ ಎಂದು ಸದಸ್ಯರಿಗೆ ಕೇಳುತ್ತಿದ್ದರು, ಮದ್ಯ ಪ್ರವೇಶಿಸಿದ ಜೆಡಿಎಸ್‌ ಸದಸ್ಯರು ಮಾತನಾಡಿ ಕಳೆದ ಹಲವು ಸಭೆಗಳಲ್ಲಿ ಈವರೆಗೆ ಬಂದಿದ್ದ ಅನುದಾನ, ಆಸರೆ ಮನೆಗಳ ವಿತರಣೆ, ಅನುದಾನ ಬಳಕೆ ಇನ್ನೂ ಹಲವು ವಿಷಯಗಳ ಕುರಿತು ಕೇಳಿದ್ದೇವೆ, ಜೊತೆಗೆ ಮೇಲಧಿಕಾರಿಗಳಿಗೂ ಮನವಿ ಸಲ್ಲಿಸಿದ್ದೇವೆ, ನಮ್ಮ ಮನವಿಗೆ ಸ್ಪಂದಿಸದೇ ಮನಬಂದಂತೆ ಆಡಳಿತ ನಡೆಸುತ್ತಿದ್ದೀರಿ, ಈ ಹಿಂದೆ ಕೇಳಿದ ವಿಷಯಗಳನ್ನು ಚರ್ಚಿಸಿ ನೋಡೋಣ ಎಂದು ಸಿಓ ಅವರಿಗೆ ಸವಾಲ್‌ ಹಾಕಿದ್ದರು, ಇದಕ್ಕೂ ಸ್ಪಂದಿಸದ ಸಿಓ ಮಹಿಳಾ ಸದಸ್ಯೆಯೊಬ್ಬರಿಗೆ ಏಕವಚನ ಶಬ್ದ ಬಳಸಿದರು ಎನ್ನಲಾಗಿದ್ದು, ಇದಕ್ಕೆ ಆಕ್ರೋಶಗೊಂಡ ಜೆಡಿಎಸ್‌ ನ ಭೀಮಣ್ಣ ಗುರಿಕಾರ, ಸುಮಾ ಗಂಗನಗೌಡ್ರ ಹಾಗೂ ಲತಾ ಕಟ್ಟಿಮನಿ ಸಭೆಯನ್ನು ಬಹಿಸ್ಕರಿಸಿ ನೇರವಾಗಿ ಹೊರ ನೆಡೆದು ಪ.ಪಂ ಆವರಣದಲ್ಲೇ ಸಿಓ ಹಾಗೂ ಏಕಪಕ್ಷೀಯ ಆಡಳಿತಕ್ಕೆ ಧಿಕ್ಕಾರ ಕೂಗಿ ಪ್ರತಿಭಟನೆ ನೆಡೆಸಿದರು.
ಈ ವೇಳೆ ಭೀಮಣ್ಣ ಗುರಿಕಾರ ಮಾತನಾಡಿ, ಸಿಓ ವಿರುದ್ದ ಆಕ್ರೋಶಗೊಂಡು, ಮೊದಲು ಮಹಿಳೆಯರಿಗೆ ಸರಿಯಾಗಿ ಮಾತನಾಡುವದನ್ನು ಕಲಿಯಬೇಕು, ಜೆಡಿಎಸ್‌ ವಾರ್ಡಿನಲ್ಲಿ ಇದುವರೆಗೂ ಸರಿಯಾಗಿ ಅನುದಾನ ನೀಡಿಲ್ಲ, ಮನೆಗಳ ವಿತರಣೆ ಮಲತಾಯಿ ಧೋರಣೆ ತೋರುತ್ತಿದ್ದೀರಿ, ನಮಗೆ ಸರಕಾರದ ಹಕ್ಕು ಇಲ್ಲವೇ, ಈ ಹಿಂದೆ ಕೇಳಿದ ಲೆಖ್ಖ ಪತ್ರ ಕೊಟ್ಟು ಹೊಸದಾಗಿ ಮಾತಾಡಿ ಎಂದು ನೇರವಾಗಿ ಪ್ರಶ್ನಿಸಿದರು.
ಸುಮಾ ಗಂಗನಗೌಡ್ರ ಹಾಗೂ ಲತಾ ಕಟ್ಟಿಮನಿ ಮಾತನಾಡಿ, ಕಳೆದ 2 ವರ್ಷಗಳಿಂದ ನಮ್ಮನ್ನು ನಂಬಿದ್ದ ಜನತೆಗೆ ನಾವೂ ಅಭಿವೃದ್ಧಿ ಮಾಡದೇ ಇದ್ದ ಪರಿಣಾಮ ಮನಬಂದಂತೆ ಮಾತನಾಡುತ್ತಿದ್ದಾರೆ, ಆಸರೆ ಮನೆಗಳಲ್ಲಿ ವಿತರಣೆಯಲ್ಲಿ ಗೊಲ್‌ ಮಾಲ್‌ ಮಾಡುತ್ತೀದ್ದೀರಿ, ಹಣ ತಿಂದು ಆಸರೆ ಮನೆ ನೀಡುತ್ತಿದ್ದೀರಿ ನಿಮಗೆ ನಾಚಿಕೆ ಇಲ್ಲವೇ ಎಂದು ನೇರವಾಗಿ ಆಡಳಿತ ಮಂಡಳಿಗೆ ಮಾತನಾಡಿದರು. ಕ್ಯಾರೆ ಎನ್ನದ ಸಿಓ: ಸಭೆಯಲ್ಲಿ ಇಷ್ಟೇಲ್ಲಾ ರಾದ್ದಾಂತ ನೆಡೆದರೂ ಜೆಡಿಎಸ್‌ ಸದಸ್ಯರ ನೋವು ಆಲಿಸದೇ ಹಾಗೂ ಅವರ ಸಮಸ್ಯೆಗಳಿಗೆ ಉತ್ತರ ನೀಡದೇ ಅವರೊಂದಿಗೆ ಮಾತಿನ ಚಕಮಕಿ ನೆಡೆಸಿದರು, ಕೊನೆ ಕ್ಷಣದಲ್ಲಿ ಏನು ತೋಚದ ಸಿಓ ಯಾವ ಪ್ರಶ್ನೆಗೂ ಉತ್ತರಿಸದೇ ನೇರವಾಗಿ ಪ.ಪಂ ಆವರಣದಿಂದ ಹೊರ ಹೋದರು.
ಎಚ್ಚರಿಕೆ: ಜೆಡಿಎಸ್‌ ಸದಸ್ಯರ ಕಡೆಗಣನೆ ವಿಷಯಕ್ಕೆ ಸಂಭಂದಿಸಿದಂತೆ ಮುಂದಿನ ಸಭೆಯಲ್ಲೂ ಸಹ ನಾವು ಕೇಳಿದ ಅಭಿವೃದ್ದಿ ಹಾಗೂ ಯೋಜನೆಗಳ ವಿಷಯಗಳಿಗೆ ಉತ್ತರ ನೀಡದೇ ಹೋದರೆ ಯಾವದೇ ಸಭೆ ನೆಡೆಸಲು ಬಿಡಲ್ಲ ಎಂದು ಸದಸ್ಯರಾದ ಭೀಮಣ್ಣ ಗುರಿಕಾರ, ಸುಮಾ ಗಂಗನಗೌಡ್ರ, ಲತಾ ಕಟ್ಟಿಮನಿ, ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಜಿ.ಮಹಾಂತೇಶ ಹಾಗೂ ಸಿದ್ದು ಕಟ್ಟಿಮನಿ ಎಚ್ಚರಿಕೆ ನೀಡಿದರು.

loading...