ಗೊಂಬೆಗಳ ತಯಾರಿಕೆ ಕೌಶಲ್ಯ ತರಬೇತಿ, ೬೨೫೦ ಜನರಿಗೆ ಉದ್ಯೊÃಗ ನಿರೀಕ್ಷೆ ಸಚಿವ ಜಾರ್ಜ್

0
12

 

ಕನ್ನಡಮ್ಮ ಸುದ್ದಿ-ಕೊಪ್ಪಳ: ಏಕಸ್ ಟಾಯ್ ಕ್ಲಸ್ಟರ್‌ನಲ್ಲಿ ಮಾರ್ಚ್ನಿಂದ ಗೊಂಬೆಗಳ ಉತ್ಪಾದನೆ ಆರಂಭವಾಗಲಿದ್ದು ಇಲ್ಲಿಗೆ ಅಗತ್ಯವಿರುವ ಕಾರ್ಮಿಕರಿಗೆ ಕೌಶಲ್ಯ ತರಬೇತಿ ನೀಡಿ ಸ್ಥಳೀಯರಿಗೆ ಉದ್ಯೊÃಗಾವಕಾಶ ಕಲ್ಪಿಸಲಾಗುತ್ತದೆ ಎಂದು ರಾಜ್ಯದ ಬೃಹತ್ ಕೈಗಾರಿಕಾ ಸಚಿವರಾದ ಕೆ.ಜೆ. ಜಾರ್ಜ್ ರವರು ತಿಳಿಸಿದರು.
ಜಿಲ್ಲೆಯ ಕುಕನೂರು ಬಳಿ ಸುಮಾರು ೨೫೨ ಎಕರೆ ಪ್ರದೇಶದಲ್ಲಿ ಏಕಸ್ ಟಾಯ್ ಕ್ಲಸ್ಟರ್‌ಗೆ ಭೇಟಿ ನೀಡಿ ಪರಿಶೀಲನೆ ವೇಳೆ ತಿಳಿಸಿದ ಅವರು ಗ್ಲೊÃಬಲ್ ಮಟ್ಟದ ಉತ್ಪಾದನಾ ಕ್ಲಸ್ಟರ್ ಇದಾಗಿದ್ದು ಇಲ್ಲಿ ಅನೇಕ ಬಹುರಾಷ್ಟಿÃಯ ಕಂಪನಿಗಳು ಆಗಮಿಸಿದ್ದು ವಿಶೇಷವಾಗಿ ರಫ್ತು ಮಾಡುತಕ್ಕಂತಹ ಗೊಂಬೆಗಳ ಉತ್ಪಾದನೆ ಮಾಡಲಿವೆ ಎಂದರು. ಇದರ ಕಾರ್ಯಾರಂಭ ೨೦೨೦ರ ಮಾರ್ಚ್ನಿಂದ ಆಗಲಿದ್ದು ಅಗತ್ಯವಿರುವ ಕಾರ್ಮಿಕರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಕೊಪ್ಪಳ ಜಿಲ್ಲೆಯ ಜನರಿಗೆ ಆದ್ಯತೆ ನೀಡಲಿದ್ದು ಮೊದಲ ಹಂತದಲ್ಲಿ ೨೦೧೯ರ ಡಿಸೆಂಬರ್‌ನಿಂದ ೬೨೫೦ ಜನರಿಗೆ ತರಬೇತಿ ನೀಡುವ ಮೂಲಕ ಇಲ್ಲಿಯೇ ಉದ್ಯೊÃಗಾವಕಾಶವನ್ನು ಕಲ್ಪಿಸಲಾಗುತ್ತದೆ. ಜಿಲ್ಲೆಯ ಜನರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಅವರು ತಿಳಿಸಿದರು.

ತಳಕಲ್ ಜೋಳದ ರವೆ ಉತ್ಪಾದನಾ ಘಟಕಕ್ಕೆ ಭೇಟಿ; ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಸಿಗಬೇಕೆಂಬ ಉದ್ದೆÃಶದಿಂದ ಜೋಳದಿಂದ ರವೆ ಮಾಡುವ ಘಟಕವನ್ನು ತಳಕಲ್‌ನಲ್ಲಿ ಆರಂಭಿಸಲಾಗಿದೆ. ಜೋಳದಿಂದ ರವೆ ತಯಾರಿಸಿ ವಿವಿಧ ಖಾದ್ಯವನ್ನು ಸಿದ್ದಪಡಿಸುವುದರಿಂದ ಆರೋಗ್ಯದ ಮೇಲೆ ಅತ್ಯುತ್ತಮ ಪರಿಣಾಮ ಬೀರಲಿದೆ. ಕೃಷ್ಣ ಕುಲ ಎಂಬುವವರು ಜೋಳದಿಂದ ರವೆ ತಯಾರಿಸುವ ಘಟಕವನ್ನು ಸಚಿವರು ಉದ್ಘಾಟಿಸಿದರು. ಈ ವೇಳೆ ಅತ್ಯುತ್ತಮ ಘಟಕ ಇದಾಗಿದ್ದು ಇಲ್ಲಿ ತಯಾರಿಸುವ ಜೋಳದ ರವೆಗೆ ಉತ್ತಮ ಮಾರುಕಟ್ಟೆ ಕಲ್ಪಿಸಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಈ.ತುಕಾರಾಂ, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

loading...