ಗೋಡೆಯಲ್ಲಿ ಬಿರುಕು : ಭಕ್ತರ ಪ್ರವೇಶಕ್ಕೆ ನಿಷೇಧ

0
4

ಹುನಗುಂದ: ಕೂಡಲಸಂಗಮದ ಇತಿಹಾಸ ಪ್ರಸಿದ್ದವಾದ ೧೨ ನೆಯ ಶತಮಾನದ ಸಮಾನತೆಯ ಹರಿಕಾರ ಬಸವಣ್ಣನವರ ಐಕ್ಯ ಮಂಟಪದ ಸುತ್ತಲಿನ ಬಾವಿಯಾಕರದ ತಡೆಗೋಡಿಯು ಅಲ್ಲಲ್ಲಿ ಬಿರುಕು ಬಿಟ್ಟು ಶಿಥಿಲಗೊಂಡಿದ್ದು.

ಇಲ್ಲಿಗೆ ಬರುವ ಭಕ್ತರಿಗೆ ಯಾವದೇ ಅಪಾಯವಾಗಬಾರದು ಎನ್ನುವ ದೃಷ್ಠಿಯಿಂದ ಸಧ್ಯಕ್ಕೆ ಪ್ರವಾಸಿಗರಿಗೆ ಮತ್ತು ಭಕ್ತಾಧಿಗಳಿಗೆ ತಾತ್ಕಾಲಿಕವಾಗಿ ಐಕ್ಯ ಮಂಟಪದ ಪ್ರವೇಶಕ್ಕೆ ನಿಷೇಧಿಸಲಾಗಿದೆ.
ಹೌದು ಐತಿಹಾಸಿಕ ಪರಂಪರೆಯುಳ್ಳ ಈ ಐಕ್ಯ ಮಂಟಪವು ಕೃಷ್ಣಾ ಮತ್ತು ಮಲಪ್ರಭಾ ನದಿಯ ಸಂಗಮದ ಸ್ಥಳದಲ್ಲಿದ್ದು.ಬಸವೇಶ್ವರ ಐಕ್ಯ ಸ್ಥಳವನ್ನು ಸಂರಕ್ಷಿಸುವ ಹಿನ್ನೆಲೆಯಿಂದ ೧೯೭೮ ರಲ್ಲಿ ಐಕ್ಯಮಂಟಪದ ಬಾವಿಯಾಕರದಲ್ಲಿ ನಿರ್ಮಾಣ ಮಾಡಲಾಯಿತು.ನಂತರ ೧೯೯೮ರಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಸರ್ಕಾರವು ಕೂಡಲಸಂಗಮ ಅಭವೃದ್ದಿಗಾಗಿ ೩೪ ಕೋಟಿ ರೂ ಅನುದಾನವನ್ನು ಬಿಡುಗಡೆಗೊಳ್ಳಿಸಿದರು.ಈ ಅನುದಾನದಲ್ಲಿಯೇ ಅಂದಿನ ಕೂಡಲಸಂಗಮ ಅಭಿವೃದ್ದಿ ಪ್ರಾಧಿಕಾರದ ವಿಶೇಷ ಅಧಿಕಾರಿ ಶಿವಾನಂದ ಜಾಮದಾರ ಐಕ್ಯಮಂಟಪವನ್ನು ಅಭಿವೃದ್ದಿ ಪಡಿಸಿದರಲ್ಲದೇ ವಿಶೇಷವಾಗಿ ಐಕ್ಯ ಮಂಟಪದ ಸೇತುವೆ ನಿರ್ಮಾಣವನ್ನು ಮಾಡಿಸಿದರು ನಂತರ ಬಂದ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಐಕ್ಯ ಮಂಟಪವನನು ಸರಿಯಾಗಿ ನಿರ್ವಹಣೆ ಮಾಡದೇ ನಿರ್ಲಕ್ಷö್ಯ ವಹಿಸಿದ್ದರಿಂದ ಮತ್ತು ವರ್ಷದ ಎಂಟು ತಿಂಗಳ ಕಾಲ ಈ ಐಕ್ಯಮಂಟಪದ ಸುತ್ತಲು ಸದಾ ನೀರು ಇರುವುದರಿಂದ ಸದಾ ನೀರು ಬಸಿದು ಬಾವಿಯಾಕರ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು. ಮುಜಾಗ್ರತಾ ಕ್ರಮವಾಗಿ ಭಕ್ತ ಪ್ರವೇಶವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದ್ದು.ಐಕ್ಯ ಮಂಟಪದ ದುರಸ್ತಿಗೆ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದೆ ಎಂದು ಅಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಐಕ್ಯ ಮಂಟಪದ ದುರಸ್ತಿಗೆ ೨೦ ದಿನ ಕಾಲಾವಕಾಶ-ಈಗಾಗಲೇ ಐಕ್ಯಮಂಟಪದ ಬಾವಿಯು ಸದಾ ನೀರು ಬಸಿದು ಅಲ್ಲಲ್ಲಿ ಬಿರುಕು ಬಿಟ್ಟಿರುವುದನ್ನು ಸರಿಪಡಿಸಲು ೧೫ ರಿಂದ ೨೦ ದಿನಗಳು ಬೇಕಾಗಿದ್ದು.ಈ ಸಂದರ್ಭದಲ್ಲಿ ಪ್ರವಾಸಿಗರಿಗೆ ಮತ್ತು ಭಕ್ತರಿಗೆ ಪ್ರವೇಶವನ್ನು ನಿರ್ಭಂಧಿಸಬೇಕಾ? ಇಲ್ಲ ರಾತ್ರಿ ವೇಳೆ ಕಾಮಗಾರಿಯ ಕೆಲಸ ಕಾರ್ಯಗಳನ್ನು ಮಾಡಲು ಅವಕಾಶ ನೀಡಿ ಹಗಲನಲ್ಲಿ ಬರುವ ಭಕ್ತರಿಗೆ ಅವಕಾಶ ನೀಡಿದರೇ ಹೇಗೆ ಎನ್ನುವುದರ ಬಗ್ಗೆ ವಿಶೇಷ ತಜ್ಞರ ಸಲಹೆಯನ್ನು ಪಡೆದುಕೊಳ್ಳುವ ಚಿಂತನೆಯಲ್ಲಿ ಅಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳು ಇದ್ದಾರೆ.

loading...